White Hair: ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ, ಉದ್ದ ಮತ್ತು ಕಪ್ಪು ಆಗಿರಬೇಕೆಂದು ಬಯಸುವುದು ಸಹಜ. ನಮ್ಮ ಸೌಂದರ್ಯದ ವಿಚಾರದಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಪರಿಸರ ಮಾಲಿನ್ಯದಿಂದ ಕೂದಲು ಉದುರುವಿಕೆ(Hair Fall Problem), ಬಿಳಿ ಕೂದಲು(White Hair), ಕೂದಲು ಒಣಗುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ನೀವೇನಾದರೂ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ, ಇಲ್ಲಿದೆ ನೋಡಿ ಸರಳ ಪರಿಹಾರ!!!
ನೀವೇನಾದರೂ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ, ಈ ಮೂರು ಆಹಾರ ಪದಾರ್ಥ ಸೇವಿಸಿ ನೋಡಿ!!ಕೆಲವು ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಕೂದಲನ್ನು ಉದ್ದ ಮತ್ತು ಸಹಜವಾಗಿ ಕಪ್ಪಾಗಿ ಪರಿವರ್ತಿಸಬಹುದಾಗಿದೆ.
# ಪಾಲಕ್
ಪಾಲಕ್ ಸೊಪ್ಪು ಉತ್ತಮ ಪ್ರಮಾಣದ ವಿಟಮಿನ್ ಎ ಮತ್ತು ಸಿ, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಮೆಗ್ನೀಸಿಯಮ್ ಜೊತೆಗೆ ಕಬ್ಬಿಣವನ್ನು ಒಳಗೊಂಡಿದೆ. ದಿನನಿತ್ಯದ ಆಹಾರದಲ್ಲಿ ಪಾಲಕ್ ಸೊಪ್ಪಿನ ಬಳಕೆಯಿಂದ ಕೂದಲನ್ನು ದಪ್ಪ, ಕಪ್ಪು ಮತ್ತು ಹೊಳೆಯುವಂತೆ ಮಾಡಬಹುದು.
# ಸಿಹಿ ಆಲೂಗಡ್ಡೆ
ಸಿಹಿ ಆಲೂಗಡ್ಡೆಯಲ್ಲಿ ಬೀಟಾ ಕ್ಯಾರೋಟಿನ್ ಅನ್ನು ಹೊಂದಿದ್ದು, ಇದನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಕಪ್ಪು ಕೂದಲನ್ನು ಪಡೆಯಬಹುದು.
# ಮೊಟ್ಟೆಗಳು
ಕೂದಲು ಆರೋಗ್ಯಕರವಾಗಿರಲು ಪ್ರೋಟೀನ್ ಭರಿತ ಆಹಾರ ಮುಖ್ಯ ಪಾತ್ರ ವಹಿಸುತ್ತದೆ. ಮೊಟ್ಟೆಗಳು ಪ್ರೋಟೀನ್‌ಗೆ ಉತ್ತಮ ಆಯ್ಕೆಯಾಗಿದ್ದು, ಆಹಾರದಲ್ಲಿ ಮೊಟ್ಟೆ ಸೇವಿಸುವ ಮೂಲಕ ಕಪ್ಪು ಕೂದಲನ್ನು ಪಡೆಯಬಹುದು.
