BS Yediyurappa: ಕರ್ನಾಟಕದ ಬಿಜೆಪಿ ಪರಿಸ್ಥಿತಿ ಯಾರಿಗೂ ಬೇಡವಾಗಿದೆ. ವಿಪಕ್ಷ ನಾಯಕನ ಆಯ್ಕೆ ಇಲ್ಲದೆ, ಹೊಸ ಅಧ್ಯಕ್ಷರ ನೇಮಕವಿಲ್ಲದೆ ರಾಜ್ಯ ಬಿಜೆಪಿಯು ಅತಂತ್ರವಾಗಿಬಿಟ್ಟಿದೆ. ಆದರೆ ಇದೀಗ ವಿಪಕ್ಷ ನಾಯಕನ ಆಯ್ಕೆ ಕುರಿತು ಬಿಜೆಪಿಯ ವರಿಷ್ಠರಾದಂತಹ ಪಿ ಎಸ್ ಯಡಿಯೂರಪ್ಪನವರು(B S Yadiyurappa)ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಹೌದು, ಕರ್ನಾಟಕದಲ್ಲಿ ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಅನ್ನೇ ನೀಡುತ್ತಿಲ್ಲ. ಈ ವಿಚಾರದ ಸಲುವಾಗಿ ರಾಜ್ಯದ ನಾಯಕರೆಲ್ಲರೂ ದೆಹಲಿಗೆ ಅಲೆದು, ಅಲೆದು ಸುಸ್ತಾಗಿ ಹೋಗಿದ್ದಾರೆ. ಈಗ ಆಗುತ್ತೆ, ನಾಳೆ ಆಗುತ್ತೆ, ಈ ದಿನದೊಳಗೆ ಮಾಡುತ್ತೇವೆ ಎಂದು ನಾಯಕರು ಹೇಳಿಕೆ ನೀಡಿ ನೀಡಿ ಬಸವಳಿದಿದ್ದಾರೆ. ಆದರೀಗ ಈ ಕುರಿತು ಬಿ ಎಸ್ ಯಡಿಯೂರಪ್ಪರು( BS Yediyurappa) ಮೌನ ಮುರಿದಿದ್ದು ಆದಷ್ಟು ಬೇಗ ನೇಮಕ ಮಾಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದ್ದಾರೆ.
ಅಂದಹಾಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರ ನೇಮಕ ತಡವಾಗಿರುವುದನ್ನು ಒಪ್ಪಿಕೊಂಡು ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದು ಇದರಲ್ಲಿ ವಿಪಕ್ಷ ನಾಯಕರು ಇರುತ್ತಾರೆ, ಹೈಕಮಾಂಡ್ ಅನುಮತಿ ಪಡೆದು ಆದಷ್ಟು ಬೇಗ ನೇಮಕ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Mobile hack: ಲಕ್ಷಣಗಳು ಕಂಡುಬಂದ್ರೆ ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಆಗಿರೋದಂತೂ ಪಕ್ಕಾ !!
