Deepavali: ದೀಪಾವಳಿ ದೀಪಾವಳಿ ಆನಂದ ಲೀಲಾವಳಿ…ಹೌದು ಜನರಿಗೆ ದೀಪಾವಳಿ (Deepavali) ಹಬ್ಬಕ್ಕೆ ರಾಜ್ಯದ ಹಾಗೂ ಹೊರ ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸುವ ಹಾಗೂ ಹಬ್ಬ ಮುಗಿಸಿಕೊಂಡು ಹಿಂದಿರುಗುವ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲಾವಾಗಲೆಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 500ಕ್ಕೂ ಹೆಚ್ಚು ವಿಶೇಸ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ.
ನವೆಂಬರ್ 11ರಂದು ಶನಿವಾರ, 12 ಭಾನುವಾರ, ನರಕ ಚತುರ್ದಶಿ, 13 ರಂದು ಸೋಮವಾರ ಅಮವಾಸ್ಯೆ, ಲಕ್ಷ್ಮೀ ಪೂಜೆ, 14ರಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಹಾಗಾಗಿ ನ.10 ರಂದು ಶುಕ್ರವಾರ ಮತ್ತು 11 ರಂದು ಶನಿವಾರ ಬೆಂಗಳೂರು, ಮಂಗಳೂರು, ಗೋವಾ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ನೆರೆಯ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವಂತ ಊರುಗಳಿಗೆ ಬರುವ ನಿರೀಕ್ಷೆ ಇರುವುದರಿಂದ ಈ ವ್ಯವಸ್ಥೆ ಮಾಡಲಾಗಿದೆ.
ನ.10 ಹಾಗೂ11ರಂದು ಬೆಂಗಳೂರು, ಮಂಗಳೂರು,ಪುಣೆ, ಗೋವಾ ಮತ್ತಿತರ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ,ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್ ಗಳನ್ನು ವ್ಯವಸ್ಥೆಮಾಡಲಾಗಿದೆ. ಸ್ಲೀಪರ್, ರಾಜಹಂಸ, ಮಲ್ಟಿ ಅಕ್ಸಲ್ ವೋಲ್ವೋ ಸೇರಿದಂತೆ ಐವತ್ತು ಪ್ರತಿಷ್ಠಿತ ಐಶಾರಾಮಿ ಬಸ್ಸುಗಳು, 200 ವೇಗದೂತ ಸಾರಿಗೆಗಳು, 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳು ರೋಡಿಗಿಳಿಯಲಿದೆ. ಹಾಗೆನೇ ಸ್ಥಳೀಯ ಬಸ್ ನಿಲ್ದಾಣದಿಂದ ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳಿಗೆ ಕೂಡಾ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ
ಇದನ್ನು ಓದಿ: Job Alert: ಕರ್ನಾಟಕ ಯೂನಿವರ್ಸಿಟಿಯಲ್ಲಿ SSLC ಪಾಸಾದವರಿಗೆ ಉದ್ಯೋಗ; 52 ಸಾವಿರ ವೇತನ!
