karnataka politics: ಹೆಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ (karnataka politics) ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ,” ಡಿ.ಕೆ.ಶಿವಕುಮಾರ್ ನಾಳೆಯೇ ಸಿಎಂ ಆಗುವುದಾದರೆ ಜೆಡಿಎಸ್ ಪಕ್ಷದ 19 ಶಾಸಕರು ಬೆಂಬಲ ನೀಡುತ್ತಾರೆ ಎಂದು ಹೇಳಿದ್ದು, ಈ ಮೂಲಕ ಜೆಡಿಎಸ್ ಬೆಂಬಲ ನೀಡುತ್ತದೆ ಎಂಬ ಮಾತನ್ನು ಹೇಳಿದ್ದಾರೆ.
ಜೆಡಿಎಸ್ ಪಕ್ಷದ 19 ಶಾಸಕರು ಬೆಂಬಲ ನೀಡುತ್ತಾರೆ ಎಂಬ ಓಪನ್ ಆಫರ್‌ವೊಂದನ್ನು ನೀಡಿದ ಹೆಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಲ್ಲರೂ ತಾವು ಸಿಎಂ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಅವರು ರಾಜ್ಯ ಕಾಂಗ್ರೆಸ್‌ನ್ನು ಡಿಸಿಎಂ, ಟಿಸಿಎಂ ಸರಕಾರ ಎಂದು ಹೇಳಿ ವ್ಯಂಗ್ಯವಾಡಿದ್ದಾರೆ. ಟಿಸಿಎಂ ಸಿಎಂ ಎಂದರೆ ಟೆಂಪ್ರವರಿ ಸಿಎಂ ಎಂದೂ ಡಿಸಿಎಂ ಅಂದರೆ ಡ್ಯೂಪ್ಲಿಕೇಟ್ ಸಿಎಂ ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ.
ಇದನ್ನು ಓದಿ: Deepavali: ದೀಪಾವಳಿ ಹಬ್ಬಕ್ಕೆ ಜನರಿಗೆ ಡಬಲ್ ಧಮಾಕ! ವಾಯುವ್ಯ ಸಾರಿಗೆ ನೀಡಿದೆ ಬಿಗ್ ಅಪ್ಡೇಟ್!!!
