Home » Gruhalakshmi: ‘ಗೃಹಲಕ್ಷ್ಮೀ’ಯರೇ ಮುಂದಿನ ತಿಂಗಳ ಹಣ ಬೇಕಂದ್ರೆ ಈಗಲೇ ಈ ದಾಖಲೆಗಳು ಸರಿ ಇವೆಯಾ ಎಂದು ಚೆಕ್ ಮಾಡಿ !!

Gruhalakshmi: ‘ಗೃಹಲಕ್ಷ್ಮೀ’ಯರೇ ಮುಂದಿನ ತಿಂಗಳ ಹಣ ಬೇಕಂದ್ರೆ ಈಗಲೇ ಈ ದಾಖಲೆಗಳು ಸರಿ ಇವೆಯಾ ಎಂದು ಚೆಕ್ ಮಾಡಿ !!

1 comment
Gruhalakshmi

Gruhalakhmi: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವಂತಹ 5 ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಪ್ರಮುಖವಾದದ್ದು. ಇದೀಗ ಗೃಹಲಕ್ಷ್ಮಿಯ(Gruhalakshmi) ಎರಡನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ. ಆದರೆ ಇನ್ನೂ ಕೂಡ ಅನೇಕ ಮಹಿಳೆಯರಿಗೆ ಹಣ ಸಿಕ್ಕಿಲ್ಲ. ಆ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಪರಿಹಾರವನ್ನು ನೀಡಲಿದೆ ಎಂದು ಪ್ರಕಟಣೆಯನ್ನೂ ಹೊರಡಿಸಿದೆ. ಆದರೆ ಮುಂದಿನ ತಿಂಗಳು ಹಣ ಬೇಕು ಅಂದ್ರೆ ಎಲ್ಲಾ ಮಹಿಳೆಯರು ತಾವು ಅರ್ಜಿ ಸಲ್ಲಿಸಿದ ದಾಖಲೆಗಳನ್ನು ಇನ್ನೊಮ್ಮೆ ಪರಿಶೀಲಿಸಬೇಕೆಂದು ಸರ್ಕಾರವು ತಿಳಿಸದೆ.

ಹೌದು, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ ನಲ್ಲಿ ಇರುವಂತೆಯೇ ತಮ್ಮ ಹೆಸರು ಪಾಸ್ ಬುಕ್ ನಲ್ಲೂ ಇದೆಯೇ ಎಂದು, ಇಲ್ಲದಾದರೆ ಹೆಸರು ಹೊಂದಾಣಿಕೆ ಆಗುವಂತೆ ಮಾಡಿಸಿಕೊಳ್ಳಬೇಕು. ಈ ಮೂಲಕ ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

ಇದಿಷ್ಟೇ ಅಲ್ಲದೆ
• ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೋ ಇಲ್ವಾ ಎಂಬುದನ್ನು ಮೊದಲು ತಿಳಿದುಕೊಳ್ಳಿ.
• ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.
• ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಎರಡು ಕಂತಿನ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ.

You may also like

Leave a Comment