Home » Dairy farming: ಕುರಿ, ಕೋಳಿ, ಮೇಕೆ ಸಾಕೋರಿಗೆ ಸರ್ಕಾರದಿಂದ ಭರ್ಜರಿ ಆಫರ್ – ಈ ಕೆಲಸ ಮಾಡಿದ್ರೆ ಸಾಕು ಒಮ್ಮೆಗೆ ಸಿಗುತ್ತೆ 3 ಲಕ್ಷ!!

Dairy farming: ಕುರಿ, ಕೋಳಿ, ಮೇಕೆ ಸಾಕೋರಿಗೆ ಸರ್ಕಾರದಿಂದ ಭರ್ಜರಿ ಆಫರ್ – ಈ ಕೆಲಸ ಮಾಡಿದ್ರೆ ಸಾಕು ಒಮ್ಮೆಗೆ ಸಿಗುತ್ತೆ 3 ಲಕ್ಷ!!

1 comment
Dairy farming

Dairy farming: ಸ್ವಂತ ಉದ್ಯೋಗ ಮಾಡುವವರಿಗೆ ಸರ್ಕಾರ ಮೊದಲಿಂದ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಸಾಲ ಸೌಲಭ್ಯ, ಲೋನ್ ನೀಡುವುದು, ಸಬ್ಸಿಡಿಗಳನ್ನು ನೀಡುವುದು ಹೀಗೆ ಒಂದೊಂದು ರೀತಿಯಲ್ಲೂ ಜನರಿಗೆ ಸರ್ಕಾರ ನೆರವಾಗುತ್ತಿದೆ ಅದರಲ್ಲಿ ಕೂಡ ಕೃಷಿ ಹಾಗೂ ಹೈನುಗಾರಿಕೆ(Dairy farming) ಚಟುವಟಿಕೆಗಳಂತೂ ಸರ್ಕಾರದ ಪ್ರೋತ್ಸಾಹ ನಿರಂತರ. ಅಂತೆಯೇ ಇದೀಗ ಹಸು, ಕುರಿ, ಮೇಕೆ ಸಾಕೋರಿಗೆ ಸರ್ಕಾರದಿಂದ ಬಿಗ್ ಆಫರ್ ಒಂದು ದೊರೆತಿದೆ.

ಹೌದು, ದೇಶದ ಬೆನ್ನೆಲುಬಾದ ರೈತರಿಗೆ ಸರ್ಕಾರಗಳು ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ನೀಡುತ್ತವೆ. ಅವರಿಗೆ ಅನುಕೂಲವಾಗುವಂತ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಈಗಂತೂ ಹೆಚ್ಚಿನವರು ಗ್ರಾಮೀಣ ವೃತ್ತಿಗಳಿಗೆ ಅಂದರೆ ಹೈನುಗಾರಿಗೆ ಹಾಗೂ ಕೃಷಿ ಕಾರುಯಗಳತ್ತ ವಾಲುತ್ತಿದ್ದಾರೆ. ಹೀಗಾಗಿ ಇವರಿಗೆಲ್ಲಾ ಪ್ರೋತ್ಸಾಹ ನೀಡಿ, ಇಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ಇದೀಗ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದ್ದು, ಹೈನುಗಾರಿಗೆ ನಡೆಸೋರಿಗೆ ಅಧಿಕ ಮೊತ್ತದ ಸಾಲ ನೀಡಲು ಮುಂದಾಗಿದೆ.

ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ?
ಕೇಂದ್ರ ಸರ್ಕಾರವು 1998 ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯನ್ನು ಆರಂಭಿಸಿತು. ಇದು ರೈತರಿಗೆ ಅಲ್ಪಾವಧಿ ಔಪಚಾರಿಕ ಸಾಲವನ್ನು ಒದಗಿಸಲು ಸಹಾಯ ಮಾಡುತ್ತದೆ. ಪಿಎಂ ಕಿಸಾನ್ ಅಡಿಯಲ್ಲಿ ಈ ವಿತ್ತೀಯ ಸಹಾಯವನ್ನು ಮೂರು ಸಮಾನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪಿಎಂ ಕಿಸಾನ್ ಅಡಿಯಲ್ಲಿ ಅರ್ಹ ರೈತರ ಗುರುತಿಸುವಿಕೆಯನ್ನು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಯುಟಿಗಳು) ಮಾಡುತ್ತವೆ.

3 ಲಕ್ಷ ರೂಪಾಯಿವರೆಗೆ ಸಾಲ
ಪ್ರಧಾನಿ ಮೋದಿ ಅವರು ಕಳೆದ ವರ್ಷ ಹೇಳಿರುವ ಮಾಹಿತಿ ಪ್ರಕಾರ ಇದುವರೆಗೆ 2 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆದಿದ್ದಾರೆ. ಅವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಿಎಂ ಕಿಸಾನ್ ಯೋಜನೆಗೆ ಲಿಂಕ್ ಮಾಡಿದ ನಂತರ, ರೈತರು ಈಗ 4% ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಕುರಿ, ಮೇಕೆ ಸಾಕಾಣಿಕೆ ಸಿಗುವ ಸಾಲ:
• 10 ಅಥವಾ 10ಕ್ಕಿಂತ ಹೆಚ್ಚು ಕುರಿಗಳನ್ನು ಕಟ್ಟಿ ಸಾಕಿದರೆ 29,950ರೂ. ಹಾಗೂ ಬಯಲಿನಲ್ಲಿ ಬಿಟ್ಟು ಸಾಕುವ ಕುರಿಗಳಿಗೆ 28,200ಗಳ ಸಾಲ ಸೌಲಭ್ಯ ಸಿಗಲಿದೆ.
• ಮೇಕೆ ಸಾಕಾಣಿಕೆಗೂ ಕೂಡ ಕಟ್ಟಿ ಸಾಕುವ ಮೇಕೆಗೆ 29,950 ಹಾಗೂ ಬಿಟ್ಟು ಸಾಕು ಮೇಕೆ ನಿರ್ವಹಣೆಗೆ 14,700ಗಳನ್ನು ಸಾಲವಾಗಿ ಪಡೆಯಬಹುದು. 20 ಮೇಕೆಗಳನ್ನು ಕಟ್ಟಿ ಸಾಕಿದರೆ 57,200 ರೂಪಾಯಿ ಹಾಗೂ ಮೇಯಿಸುವ ಮೇಕೆ ನಿರ್ವಹಣೆಗೆ 28,200 ಸಾಲ ಪಡೆಯಬಹುದು.

ಹಂದಿ ನಿರ್ವಹಣೆಗೆ ಸಿಗುವ ಸಾಲ:
ಹಂದಿ ಸಾಕಣೆಯೂ ಹೈನುಗಾರಿಕೆಯ ಒಂದು ಮುಖ್ಯ ಭಾಗವಾಗಿರುವುದರಿಂದ ಸರ್ಕಾರವು ಇದಕ್ಕೂ ಸಾಲ ನೀಡುತ್ತದೆ. 10 ಹಂದಿಗಳನ್ನು ಸಾಕಾಣಿಕೆಗೆ 60 ಸಾವಿರ ರೂಪಾಯಿಗಳನ್ನು ನಿರ್ವಹಣಾ ವೆಚ್ಚ ಎಂದು ಸಾಲ (maintenance) ನೀಡಲಾಗುವುದು.

ಕೋಳಿ ಸಾಕಾಣಿಕೆಗೆ ಸಿಗುಲ ಸಾಲ:
ಮಾಂಸದ ಕೋಳಿ ಸಾಕುವುದಾದರೆ ಒಂದು ಕೋಳಿಗೆ 80 ರೂಪಾಯಿಗಳಂತೆ, ಸಾವಿರ ಕೋಳಿಗಳಿಗೆ 80,000 ಸಾಲ ಪಡೆದುಕೊಳ್ಳಬಹುದು. ಅದೇ ರೀತಿ ಮೊಟ್ಟೆ ಕೋಳಿ ಸಾಕಾಣಿಕೆಗೆ ನಿರ್ವಹಣಾ ವೆಚ್ಚ ಒಂದು ಕೋಳಿಗೆ 180 ರೂಪಾಯಿಗಳಂತೆ ಸಾವಿರ ಕೋಳಿಗಳು 1,80,000 ರೂಪಾಯಿಗಳನ್ನು ಸಾಲವಾಗಿ ಪಡೆಯಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ:
• ಅರ್ಜಿದಾರ ರೈತರು ಭಾರತೀಯ ಪ್ರಜೆಯಾಗಿರಬೇಕು.
• ಈ ಕಾರ್ಡ್ ಅನ್ನು ರೈತರು, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಪಡೆಯಬಹುದು.
• ಬೇರೆಯವರ ಜಮೀನಿನಲ್ಲಿ ಸಾಗುವಳಿ ಮಾಡುವ ವ್ಯಕ್ತಿಯೂ ಈ ಕಾರ್ಡ್ ಮಾಡಿಸಿಕೊಳ್ಳಬಹುದು.
• ಈ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.

ಯೋಜನೆಗೆ ಅಗತ್ಯವಿರುವ ದಾಖಲೆಗಳು:
• ರೈತರು ಸಾಗುವಳಿ ಮಾಡುವ ಜಮೀನಿನ ದಾಖಲೆಗಳನ್ನು ಹೊಂದಿರಬೇಕು.
• ಬೇರೆಯವರ ಜಮೀನಿನಲ್ಲಿ ರೈತರು ಸಾಗುವಳಿ ಮಾಡಿದರೆ, ಹೊಲಗಳ ಬಾಡಿಗೆ ಅಥವಾ ಗುತ್ತಿಗೆ ಒಪ್ಪಂದ ಪತ್ರ ಹೊಂದಿರಬೇಕು.
• ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ
ಜಮೀನಿನ ಆರ್‌ಟಿಸಿ ಪ್ರತಿ
• ಅರ್ಜಿದಾರರ ಪ್ಯಾನ್ ಕಾರ್ಡ್
• ಅರ್ಜಿದಾರರ ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
• ಅರ್ಜಿದಾರರ ಬ್ಯಾಂಕ್ ಖಾತೆ ಪುಸ್ತಕ
• ಅರ್ಜಿದಾರರು ಬೇರೆ ಯಾವುದೇ ಬ್ಯಾಂಕಿನಲ್ಲಿ ಸಾಲಗಾರರಾಗಿಲ್ಲದ ಅಫಿಡವಿಟ್

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ:
ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಆನ್ ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ಯೋನೋ ಅಪ್ಲಿಕೇಷನ್ ಮೂಲಕ ಅಥವಾ. ಎಸ್ ಬಿಐ ಯೋನೋ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು

You may also like

Leave a Comment