DA Arrears: ಕೇಂದ್ರ ಉದ್ಯೋಗಿಗಳು(Government Employees) ಮತ್ತು ಪಿಂಚಣಿದಾರರಿಗೆ(Pension Holders)ಶೀಘ್ರದಲ್ಲೇ ಮತ್ತೊಂದು ಶುಭ ಸುದ್ದಿ (Good News)ಹೊರಬಿದ್ದಿದೆ. ಹೊಸ ವರ್ಷದ ಸಂದರ್ಭ ಸರ್ಕಾರ ಬಾಕಿ ಉಳಿದಿರುವ ಡಿಎ ಹಣ(DA)ವರ್ಗಾವಣೆ ಮಾಡಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ (Central Government)ಶೀಘ್ರದಲ್ಲೇ ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಳದ ಕುರಿತು ಸಿಹಿ ಸುದ್ದಿ ನೀಡಲಿದೆ.
ಕೇಂದ್ರ ಸರ್ಕಾರ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ 18 ತಿಂಗಳ ಡಿಎಯನ್ನು ವರ್ಗಾವಣೆ ಮಾಡಿಲ್ಲ. ಇದಾದ ಬಳಿಕ ನೌಕರರು ಮತ್ತು ಪಿಂಚಣಿದಾರರು ನಿರಂತರವಾಗಿ ಬಾಕಿ ಡಿಎಗೆ ಬೇಡಿಕೆ(DA Arreras)ಇಡುತ್ತಲೆ ಬರುತ್ತಿದ್ದಾರೆ. ಇದೀಗ, ಹೊಸ ವರ್ಷದ ಸಂದರ್ಭ ಸರ್ಕಾರ ಈ ಬಾಕಿ ಹಣವನ್ನು ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಇನ್ನೂ ಏನು ಮಾಹಿತಿ ನೀಡಿಲ್ಲ.
ಕೇಂದ್ರ ಸರ್ಕಾರ ಫಿಟ್‌ಮೆಂಟ್ ಅಂಶ ಹೆಚ್ಚಿಸಿ ನೌಕರರ ಮನವೊಲಿಸಲು ಸಿದ್ದತೆ ನಡೆಸಿದೆ. ಈ ಕುರಿತು ನೌಕರರು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದು, ಇದೀಗ ಮಂಜೂರಾತಿ ದೊರೆಯುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಫಿಟ್‌ಮೆಂಟ್ ಅಂಶವನ್ನು 2.60x ನಿಂದ 3.0x ಗೆ ಹೆಚ್ಚಿಸಬಹುದು. ಫಿಟ್‌ಮೆಂಟ್ ಅಂಶದಲಿ ಹೆಚ್ಚಳವಾದರೆ, ಮೂಲ ವೇತನದಲ್ಲಿ ಭಾರಿ ಹೆಚ್ಚಳವಾಗಲಿದೆ.
