Drought relief: ರಾಜ್ಯದಲ್ಲಿ ಬರವು ತಾಂಡವಡುತ್ತಿದೆ. ಮಳೆ, ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಹಲವಾರು ತಂಡಗಳು ಆಗಮಿಸಿ ಬರದ ಸಮೀಕ್ಷೆ ನಡೆಸಿದೆ. ಅಲ್ಲದೆ ಈಗ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ(Drought relief) ಮುಂದಾಗಿದೆ. ಬರ ಪರಿಹಾರವನ್ನು ಪಡೆಯಲು ರೈತರಿಗೆ ಇದೊಂದು ದಾಖಲೆ ಕಡ್ಡಾಯವಾಗಿ ಬೇಕೇಬೇಕು ಎಂದು ಸರ್ಕಾರ ತಿಳಿಸಿದೆ.
ಹೌದು, ರಾಜ್ಯದಲ್ಲಿ ಪ್ರತಿಯೊಬ್ಬ ರೈತರಿಗೂ ಕೂಡ ರೈತರ ಗುರುತಿನ ಸಂಖ್ಯೆ (IFD) ಯನ್ನು ನೀಡಲಾಗಿದೆ. ಹೀಗಾಗಿ ರೈತರು ಬರ ಪರಿಹಾರ ಪಡೆಯಲು ಈ ಗುರುತಿನ ಸಂಖ್ಯೆ ಕಡ್ಡಾಯವಾಗಿ ಬೇಕೇ ಬೇಕು. ಇದರೊಂದಿಗೆ ರೆಕಾರ್ಡ್ ಇರವ ಜಮೀನುಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೆ ನಂಬರ್‍ನ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು. ಇದನ್ನು ನೀಡಿದರೆ ಮಾತ್ರ ಸರ್ಕಾರ ಕೊಡಮಾಡುವ ಬರ ಪರಿಹಾರದ ಹಣ ನಿಮಗೆ ಸಿಗುತ್ತದೆ.
ಇನ್ನು ಕೇವಲ ಬರ ಪರಿಹಾರದ ಹಣ ಮಾತ್ರವಲ್ಲದೆ ಬೆಳೆ ವಿಮೆ ನೋಂದಣಿಗೆ, ಕನಿಷ್ಟ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು ಕೂಡ ರೈತರ ಗುರುತಿನ ಸಂಖ್ಯೆ ಬೇಕೇಬೇಕು.
ಗುರುತಿನ ಚೀಟಿ(FID) ಎಲ್ಲಿ ಸಿಗುತ್ತೆ?
ಇನ್ನೂ ಕೂಡ ಗುರುತಿನ ಚೀಟಿ ಮಾಡಿಸದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ನೋಂದಣಿ ಮಾಡಿಸಿ ಎಫ್‍ಐಡಿ ಸಂಖ್ಯೆ ಪಡೆಯಬೇಕು.
