Home » Nitish Kumar: ಜನಸಂಖ್ಯೆ ನಿಯಂತ್ರಣದ ಬಗ್ಗೆ ಅಸಹ್ಯ ಹೇಳಿಕೆ ಕೊಟ್ಟ ನಿತೀಶ್ ಕುಮಾರ್ !! ನಂತರ ಏನ್ಮಾಡಿದ್ರು ಗೊತ್ತಾ ಈ ಬಿಹಾರ ಸಿಎಂ ?!

Nitish Kumar: ಜನಸಂಖ್ಯೆ ನಿಯಂತ್ರಣದ ಬಗ್ಗೆ ಅಸಹ್ಯ ಹೇಳಿಕೆ ಕೊಟ್ಟ ನಿತೀಶ್ ಕುಮಾರ್ !! ನಂತರ ಏನ್ಮಾಡಿದ್ರು ಗೊತ್ತಾ ಈ ಬಿಹಾರ ಸಿಎಂ ?!

1,251 comments

Nitish Kumar: ಮಂಗಳವಾರ ವಿಧಾನಸಭೆಯಲ್ಲಿ ಭಾಣಷ ಮಾಡುವಾಗ ಜನಸಂಖ್ಯೆ ನಿಯಂತ್ರಣ ಕುರಿತು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅಸಭ್ಯ ಹೇಳಿಕೆ ನೀಡಿ ಇದೀಗ ಎಲ್ಲೆಡೆ ವಿವಾದಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಮಹಿಳಾ ಶಾಸಕರು ಮುಜುಗರ ಅನುಭವಿಸುವಂತಾಯಿತು. ಇದೀಗ ಈ ಕುರಿತು ನಿತೀಶ್​ ಕುಮಾರ್ ಕ್ಷಮೆಯಾಚಿಸಿದ್ದಾರೆ.

ಭಾಷಣದಲ್ಲಿ ವಿದ್ಯಾವಂತ ಮಹಿಳೆ ಲೈಂಗಿಕ ಸಂಭೋಗದ ಸಮಯದಲ್ಲಿ ತನ್ನ ಪತಿಯನ್ನು ಹೇಗೆ ತಡೆಯಬಹುದು ಎಂಬ ವಿವರಣೆ ನೀಡಿದ್ದರು. ಈ ಕುರಿತು ಮಹಿಳೆಯರ ಬಗ್ಗೆ ನಿತೀಶ್ ಕುಮಾರ್ ಹೇಳಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಆಕ್ರೋಶ ವ್ಯಕ್ತಪಡಿಸಿದೆ. ನಿತೀಶ್ ಕುಮಾರ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ನಿತೀಶ್​ ಕುಮಾರ್ ಆಡಿರುವ ಅಸಭ್ಯ ಮಾತುಗಳಿಂದ ಪ್ರತಿಯೊಬ್ಬ ಮಹಿಳೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆಯುಂಟಾಗಿದೆ. ಅವರ ಭಾಷಣದಲ್ಲಿ ಬಳಸಲಾದ ಭಾಷೆಯು ಸಮಾಜಕ್ಕೆ ಕಪ್ಪುಚುಕ್ಕೆಯಾಗಿದೆ. ನಾವು ಅಂತಹ ನಡವಳಿಕೆ ವಿರುದ್ಧ ಬಲವಾಗಿ ನಿಲ್ಲುತ್ತೇವೆ ಎಂದು ರೇಖಾ ತಿಳಿಸಿದ್ದಾರೆ.

ನಿತೀಶ್ ಕುಮಾರ್ ಅವರು ತಮ್ಮ ಸರ್ಕಾರ ನಡೆಸಿದ ಇತ್ತೀಚಿನ ಜಾತಿ ಗಣತಿಯ ಡೇಟಾವನ್ನು ಪ್ರಸ್ತುತಪಡಿಸುತ್ತಿದ್ದರು. ಸೋಷಿಯಲ್ ಮೀಡಿಯಾ ಬಳಕೆದಾರರು ಸಿಎಂ ನಿತೀಶ್ ಕುಮಾರ್ ಮಹಿಳೆಯರ ಬಗ್ಗೆ ಮಾಡಿದ ಕಮೆಂಟ್​ಗಳನ್ನು ತಪ್ಪು ಎಂದು ಬಿಜೆಪಿ ಹೇಳಿದೆ.

ಸಿಎಂ ಹೇಳಿಕೆ ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ್ದು. ಲೈಂಗಿಕ ಶಿಕ್ಷಣದ ವಿಷಯ ಚರ್ಚೆಯಾದಾಗಲೆಲ್ಲಾ ಜನರು ಹಿಂಜರಿಯುತ್ತಾರೆ. ಇದನ್ನು ಈಗ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಶಾಲೆಗಳಲ್ಲಿ ವಿಜ್ಞಾನ ಮತ್ತು ಜೀವಶಾಸ್ತ್ರವನ್ನು ಕಲಿಸಲಾಗುತ್ತದೆ. ಮಕ್ಕಳು ಅದನ್ನು ಕಲಿಯುತ್ತಾರೆ. ಜನಸಂಖ್ಯೆಯ ಹೆಚ್ಚಳವನ್ನು ತಡೆಯಲು ಪ್ರಾಯೋಗಿಕವಾಗಿ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ ಎಂದು ತೇಜಸ್ವಿ ಯಾದವ್ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Baba Vanga Predictions: ಭಯಾನಕ ಭವಿಷ್ಯ ನುಡಿದ ಬಾಬಾ ವಂಗಾ, ಸೈಬರ್‌ ದಾಳಿ ಬಗ್ಗೆ ಎಚ್ಚರಿಕೆ!!

You may also like

Leave a Comment