Mahesh giri: ಜಗತ್ತಿಗೇ ಶಾಂತಿ, ಅಹಿಂಸೆಯನ್ನು ಸಾರುವ ಜೈನ ಧರ್ಮದ ಮುನಿಗಳನ್ನು ಕೊಲ್ಲಬೇಕು ಎಂದು ಗುಜರಾತಿನ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದರೊಬ್ಬರು ಹೇಳಿಕೆ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಇದರ ವಿರುದ್ಧ ದೇಶದ ಇಡೀ ಜೈನ ಸಮುದಾಯವೇ ಆಕ್ರೋಶ ಹೊರಹಾಕಿದೆ.
ಹೌದು, ಕಳೆದ ಅಕ್ಟೋಬರ್ 28 ರಂದು ಬಿಜೆಪಿಯ ಮಾಜಿ ಸಂಸದರಾಗಿರುವ ಗುಜರಾತನ್(Gujarath) ಮಹೇಶ್ ಗಿರಿ ಅವರು ಸನಾತನ ಧರ್ಮದ ಹೆಸರಿನಲ್ಲಿ ಸಾಧುಗಳ ಸಮಾವೇಶವನ್ನು ಆಯೋಜಿಸಿದ್ದರು. ಈ ಸಮಾವೇಶದಲ್ಲಿ ಪ್ರಚೋದನಾತ್ಮಕ ಹೇಳಿಕೆಜೈನ ಸಮುದಾಯದ ವಿರುದ್ಧ ಹರಿಹಾಯ್ದಿದ್ದರು. ಇಷ್ಟೇ ಅಲ್ಲದೆ ಗುಜರಾತ್‌ನ ಜುನಾಡ ಕ್ಷೇತ್ರದಲ್ಲಿರುವ ಜೈನರ ಪವಿತ್ರ ಕ್ಷೇತ್ರ ಗಿರಿನಾರಕ್ಕೆ ಬರುವ ಜೈನರ ಹತ್ಯೆಗೈಯಬೇಕು, ತುಂಡ ತುಂಡಾಗಿ ಕತ್ತರಿಸಬೇಕು ಎಂದು ಕರೆ ನೀಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಅಂದಹಾಗೆ ನಿನ್ನೆ ದಿನ ಈ ಹೇಳಿಕೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಸಿದ್ದಸೇನ ಜೈನ ಮುನಿಗಳ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು. ಈ ವೇಳೆ ಮಾತನಾಡಿದ ಜೈನ ಮುನಿಗಳು ‘ಗುಜರಾತ್‌ನ ಜುನಾಡ ಕ್ಷೇತ್ರದ ಮಾಜಿ ಸಂಸದ ಮಹೇಶ ಗಿರಿ( Mahesh giri) ಎಂಬುವವರು ಜೈನ ಸಾಧುಗಳು ಗಿರಿನಾರಕ್ಕೆ ಬಂದರೆ ತುಂಡು ತುಂಡಾಗಿ ಕತ್ತರಿಸಿ ಎಂದು ಹೇಳಿಕೆ ನೀಡಿದ್ದಾರೆ. ಒಬ್ಬ ಮಾಜಿ ಸಂಸದನಾಗಿ ಇಂತಹ ಮಾತನಾಡೋದು ಎಷ್ಟು ಸರಿ? ಒಂದು ಇರುವೆ ಕೂಡ ಕೊಲ್ಲದ ನಮ್ಮ ಸಮಾಜಕ್ಕೆ ಇಂತಹ ಪರಿಸ್ಥಿತಿ ಬಂದಿದೆ ಎಂದು ಮುನಿಗಳು ಬೇಸರ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು’ ಮಹೇಶ ಗಿರಿ ಹೇಳಿಕೆಯನ್ನು ನೀವು ಸಮರ್ಥಿಸಿಕೊಳ್ತಿರಾ ಪ್ರಧಾನಿ ಮೋದಿಯವರೇ? ಈ ಹೇಳಿಕೆಗೆ ನೀವು ಉತ್ತರ ಕೊಡಬೇಕು ಅಹಿಂಸಾ ಧರ್ಮದ ಮೇಲೆ ನಡೆಯುವ ನಮ್ಮ ಸಮಾಜಕ್ಕೆ ಇಂತಹ ಸಮಸ್ಯೆ ಯಾಕೆ? ನಾವು ಯಾವುದೇ ಸರ್ಕಾರದ, ಪಾರ್ಟಿ ಪರ ಇಲ್ಲ. ದೇಶದ ಪ್ರಧಾನಿಗಳ ಮೇಲೆ ಗೌರವ ಇದೆ. ದೇಶಕ್ಕೆ ನಿಮ್ಮಂಥ ಪ್ರಧಾನಿಗಳು ಇರಬೇಕು. ಆದರೆ ನಿಮ್ಮ ಪಕ್ಷ ಮಾಜಿ ಎಂಪಿ ಹೇಳಿಕೆಯನ್ನು ನಾವು ಖಂಡನೆ ಮಾಡ್ತಿವಿ. ನಾವು ಈ ಕುರಿತು ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರಿಗೆ ಪತ್ರ ಬರೆಯುತ್ತೆವೆ. ಮಹೇಶ ಗಿರಿ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Driving Licence : ದೇಶಾದ್ಯಂತ ಡ್ರೈವಿಂಗ್ ಲೈಸೆನ್ಸ್ ಹೊಂದಿರೋರಿಗೆ ಬಂತು ಹೊಸ ರೂಲ್ಸ್ – ಕೇಂದ್ರದಿಂದ ಮಹತ್ವದ ಆದೇಶ !!
