Home » Anna Suvidha Scheme: ‘ಅನ್ನಭಾಗ್ಯದ’ ಜೊತೆಗೇ ಬರ್ತಿದೆ ‘ಅನ್ನ ಸುವಿಧ ‘- ಇಂತವರಿಗಿನ್ನು ಮನೆ ಬಾಗಿಲಿಗೇ ರೇಷನ್, ಲಿಸ್ಟ್ ನಲ್ಲಿ ನಿಮ್ಮ ಕಾರ್ಡ್ ಉಂಟಾ ?!

Anna Suvidha Scheme: ‘ಅನ್ನಭಾಗ್ಯದ’ ಜೊತೆಗೇ ಬರ್ತಿದೆ ‘ಅನ್ನ ಸುವಿಧ ‘- ಇಂತವರಿಗಿನ್ನು ಮನೆ ಬಾಗಿಲಿಗೇ ರೇಷನ್, ಲಿಸ್ಟ್ ನಲ್ಲಿ ನಿಮ್ಮ ಕಾರ್ಡ್ ಉಂಟಾ ?!

1 comment
Anna Suvidha Scheme

Anna Suvidha Scheme: ಕಾಂಗ್ರೆಸ್ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ(CM Siddaramaiah)ನೇತೃತ್ವದ ಸರ್ಕಾರ ಈಗಾಗಲೇ ಹಣ ವರ್ಗಾವಣೆ ಮಾಡಿದೆ. ಅನ್ನ ಭಾಗ್ಯ ಯೋಜನೆಯಡಿ (Anna Bhagya Yojana)ಕರ್ನಾಟಕ ಸರ್ಕಾರವು ಉಚಿತ ಅಕ್ಕಿ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ, ಅಂತ್ಯೋದಯ ಕುಟುಂಬದ ಸದಸ್ಯರಿಗೆ 34 ರೂಪಾಯಿಯಂತೆ ನೀಡಲಾಗುತ್ತಿದೆ.

90 ವರ್ಷ ಮತ್ತು ಮೇಲ್ಪಟ್ಟ ಫಲಾನುಭವಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು ‘ಅನ್ನ ಸುವಿಧ’ ಯೋಜನೆಯನ್ನು(Anna Suvidha Scheme) ಪ್ರಾರಂಭ ಮಾಡಿದೆ. ‘ಅನ್ನ ಸುವಿಧ’ ಯೋಜನೆಯ ಮುಖಾಂತರ ವಯಸ್ಸಾದವರಿಗೆ ಶೀಘ್ರದಲ್ಲೇ ಅವರ ಮನೆ ಬಾಗಿಲಿಗೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ(Anna Bhagya Scheme)ಅಕ್ಕಿ ವಿತರಣೆಯನ್ನು ಮಾಡಲಾಗುತ್ತಿದ್ದು, ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ. ದೈಹಿಕ ವಿಕಲಚೇತನರಿಗೆ ಕೂಡ ಫಲಾನುಭವಿಗಳಿಗೂ ಈ ಯೋಜನೆ ವಿಸ್ತರಿಸಲಾಗುತ್ತದೆ.

90 ವರ್ಷ ಮೇಲ್ಪಟ್ಟ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತಲುಪಲು ಸಾಧ್ಯವಾಗದೆ ಈ ಯೋಜನೆಯ ಅಕ್ಕಿಯಿಂದ ವಂಚಿತರಾಗದಂತೆ ಮನೆ ಬಾಗಿಲಿಗೆ ಅಕ್ಕಿಯನ್ನು ತಲುಪಿಸಲು ಈ ಯೋಜನೆ ನೆರವಾಗುತ್ತದೆ. ಆದರೆ ಪ್ರತಿ ಮನೆಗೆ 50 ರೂಪಾಯಿ ಡೆಲಿವರಿ ಶುಲ್ಕವಿದೆ ಎನ್ನಲಾಗಿದೆ. ಸಚಿವ ಕೆ.ಎಚ್. ಮುನಿಯಪ್ಪ ಪಡಿತರವನ್ನು ಮನೆಗೆ ತಲುಪಿಸಲು ಬಯಸುವವರು ಸೌಲಭ್ಯವನ್ನು ಪಡೆದು ಆನ್‌ಲೈನ್‌ನಲ್ಲಿ ನೋಂದಾಯಿಸಲು ಸೂಚಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ಡೇಟಾ ಪ್ರಕಾರ ಸುಮಾರು 80,000 ವೃದ್ಧ ಫಲಾನುಭವಿಗಳು ಸೌಲಭ್ಯಕ್ಕೆ ಅರ್ಹರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

 

ಇದನ್ನು ಓದಿ: Diwali Sale 2023: ದೀಪಾವಳಿಗೆ ಬಂಪರ್ ಆಫರ್- ಇಲ್ಲಿ ಅರ್ಧ ಬೆಲೆಗೆ ಸೇಲ್ ಆಗ್ತಿದೆ IPHONE

You may also like

Leave a Comment