Home » KPSC ಉದ್ಯೋಗಾವಕಾಶ – ಈ ಹುದ್ದೆಗಳ ಭರ್ತಿಗೆ ಶ್ರೀಘ್ರದಲ್ಲೇ ಹೊರಡಲಿದೆ ಅಧಿಸೂಚನೆ !!

KPSC ಉದ್ಯೋಗಾವಕಾಶ – ಈ ಹುದ್ದೆಗಳ ಭರ್ತಿಗೆ ಶ್ರೀಘ್ರದಲ್ಲೇ ಹೊರಡಲಿದೆ ಅಧಿಸೂಚನೆ !!

1 comment
KPSC Job Notifications

KPSC Upcoming Job Notifications: ಕರ್ನಾಟಕ ಲೋಕಸೇವಾ ಆಯೋಗ (KPSC)ಮುಂದಿನ ವರ್ಷದಲ್ಲಿ 3000 ಕ್ಕೂ ಅಧಿಕ ಹುದ್ದೆಗಳನ್ನು ರಾಜ್ಯ ಸರ್ಕಾರದ 30 ಇಲಾಖೆಗಳಲ್ಲಿ ನೇಮಕ ಮಾಡಲು ಯೋಜನೆ ಹಾಕಿಕೊಂಡಿದೆ. ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ, ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಳಗೊಂಡಂತೆ 30 ಇಲಾಖೆಗಳಲ್ಲಿ ಕೆಪಿಎಸ್‌ಸಿ ಮುಂದಿನ ವರ್ಷ ನೇಮಕಾತಿ ಮಾಡಲಿರುವ ಹುದ್ದೆಗಳ ವಿವರ (Latest Karnataka KPSC Job Notifications Details)ಇಲ್ಲಿದೆ.

ಕೆಪಿಎಸ್‌ಸಿ (KPSC Upcoming Job Notifications)ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲು ಬಾಕಿ ಇರುವ ಹುದ್ದೆಗಳ ವಿವರಗಳನ್ನು ಇಲಾಖೆ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಯ ವಿವರ:
ಇಲಾಖೆ ಹೆಸರು- ಹುದ್ದೆ ಪದನಾಮ – ಹುದ್ದೆಗಳ ಸಂಖ್ಯೆ
ಲೋಕೋಪಯೋಗಿ ಇಲಾಖೆ – ಸಹಾಯಕ ಕಾರ್ಯಪಾಲಕ ಅಭಿಯಂತರರು (ವಿಭಾಗ-1)- (12ಹುದ್ದೆಗಳು)
ಸಾರ್ವಜನಿಕ ಶಿಕ್ಷಣ ಇಲಾಖೆ – ಮುಖ್ಯೋಪಾಧ್ಯಾಯರು- (140 ಹುದ್ದೆಗಳು)
ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ- ಗೆಜೆಟೆಡ್ ಪ್ರೊಬೇಷನರ್ಸ್‌- (43ಹುದ್ದೆಗಳು)
ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ- ಪಶು ವೈದ್ಯಾಧಿಕಾರಿಗಳು – 400 ಹುದ್ದೆಗಳು
ಕೃಷಿ ಇಲಾಖೆ – ಸಹಾಯಕ ಕೃಷಿ ಅಧಿಕಾರಿಗಳು- 368 ಹುದ್ದೆಗಳು
ಅಂತರ್ಜಲ ನಿರ್ದೇಶನಾಲಯ- ಭೂ ವಿಜ್ಞಾನಿಗಳು- 18 ಹುದ್ದೆಗಳು
ಕಾರ್ಖಾನೆ ಮತ್ತು ಬಾಯಲರ್‌ಗಳ ಇಲಾಖೆ -ಸಹಾಯಕ ನಿರ್ದೇಶಕರು – 12 ಹುದ್ದೆಗಳು
ಜಲಸಂಪನ್ಮೂಲ ಇಲಾಖೆ- ಸಹಾಯಕ ಇಂಜಿನಿಯರ್ (ಸಿವಿಲ್ / ಮೆಕ್ಯಾನಿಕಲ್) -100 ಹುದ್ದೆಗಳು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕರು/ ತಾಲ್ಲೂಕು – ಅಭಿವೃದ್ಧಿ ಅಧಿಕಾರಿಗಳು – 40 ಹುದ್ದೆಗಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್ (ಸಿವಿಲ್ – ಡಿವಿಷನ್ 1)- 100 ಹುದ್ದೆಗಳು

ವಿವಿಧ ಇಲಾಖೆಗಳು- ಪ್ರಥಮ ದರ್ಜೆ ಸಹಾಯಕರು – 96 ಹುದ್ದೆಗಳು
ವಿವಿಧ ಇಲಾಖೆಗಳು ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರು- 130 ಹುದ್ದೆಗಳು
ವಿವಿಧ ಇಲಾಖೆಗಳು -ಶೀಘ್ರಲಿಪಿಗಾರರು – 188 ಹುದ್ದೆಗಳು
ವಿವಿಧ ಇಲಾಖೆಗಳು ದತ್ತಾಂಶ ನಮೂದು ಸಹಾಯಕರು (ಬೆರಳಚ್ಚುಗಾರರು) – 32 ಹುದ್ದೆಗಳು
ಸಾರಿಗೆ ಇಲಾಖೆ – ಮೋಟಾರು ವಾಹನ ನಿರೀಕ್ಷಕರು- 76 ಹುದ್ದೆಗಳು
ಜಲಸಂಪನ್ಮೂಲ ಇಲಾಖೆ- ಕಿರಿಯರ್ ಇಂಜಿನಿಯರ್ (ಸಿವಿಲ್) – 270 ಹುದ್ದೆಗಳು
ಜಲಸಂಪನ್ಮೂಲ ಇಲಾಖೆ- ಕಿರಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 30 ಹುದ್ದೆಗಳು
ಅಂತರ್ಜಲ ನಿರ್ದೇಶನಾಲಯ- ಕಿರಿಯರ್ ಇಂಜಿನಿಯರ್ (ಸಿವಿಲ್)- 06 ಹುದ್ದೆಗಳು

ಈ ಮೇಲಿನ ಹುದ್ದೆಗಳಿಗೆ ಅಧಿಸೂಚನೆಗಳ ಪ್ರಸ್ತಾವನೆಗಳು ಕೆಪಿಎಸ್‌ಸಿಯ ವಿವಿಧ ಹಂತದ ನೇಮಕಾತಿ ಶಾಖೆಗಳಲ್ಲಿದ್ದು, ಕೆಲವು ಅಂತಿಮ ಹಂತ ತಲುಪಿದ್ದು, ಇನ್ನು ಕೆಲವನ್ನು ಕರಡು ಅಧಿಸೂಚನೆ ಅನುಮೋದನೆ ಹಂತದಲ್ಲಿದೆ. ಒಟ್ಟಿನಲ್ಲಿ ಮೇಲೆ ತಿಳಿಸಿದ ಹುದ್ದೆಗಳಿಗೆ ಮುಂದಿನ ವರ್ಷದೊಳಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Bangalore Women Death News: ಮಿಕ್ಸರ್ ಗ್ರೈಂಡರ್ ಗೆ ಕೂದಲು ಸಿಲುಕಿ ತಲೆ ಕಟ್, ಮಹಿಳೆ ಸಾವು

You may also like

Leave a Comment