Home » LPG Ujwala Scheme: ‘ಉಜ್ವಲ ಯೋಜನಾ’ ಅಡಿ ಉಚಿತವಾಗಿ ಸಿಗೋ LPG ಸಿಲಿಂಡರ್ ಪಡೆಯಲು ಇನ್ನು ಈ ದಾಖಲೆ ಬೇಕಿಲ್ಲ !!

LPG Ujwala Scheme: ‘ಉಜ್ವಲ ಯೋಜನಾ’ ಅಡಿ ಉಚಿತವಾಗಿ ಸಿಗೋ LPG ಸಿಲಿಂಡರ್ ಪಡೆಯಲು ಇನ್ನು ಈ ದಾಖಲೆ ಬೇಕಿಲ್ಲ !!

1 comment
LPG Ujwala Scheme

LPG Ujwala Scheme – ಬಡ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಉಜ್ವಲ ಯೋಜನೆಯಡಿ(PMUY)ಉಚಿತವಾಗಿ ಗ್ಯಾಸ್‌ (LPG Gas Cylinder)ಸಂಪರ್ಕ ಒದಗಿಸುತ್ತಿದೆ. ಕೇಂದ್ರ ಸರ್ಕಾರದ (Central Government)ವತಿಯಿಂದ ಜಾರಿಯಾಗಿರುವ, ಉಚಿತ ಎಲ್ ಪಿಜಿ ಸೌಲಭ್ಯ(LPG Ujwala Scheme) ಕಲ್ಪಿಸುವ ಉಜ್ವಲ ಯೋಜನೆಯನ್ನು(Ujwala Scheme) ಮತ್ತಷ್ಟು ಸರಳಗೊಳಿಸಲಾಗಿದೆ.

ಈ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌(Aadhar Card), ಬಿಪಿಎಲ್‌ ಕಾರ್ಡ್‌ನೊಂದಿಗೆ(BPL Card)ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (PMUY)ಉಚಿತವಾಗಿ ಅನಿಲ ಸಂಪರ್ಕ ಪಡೆಯಲು ಬಿಪಿಎಲ್‌ ಕಾರ್ಡ್‌ ಹೊಂದಿರದ(Bpl Card)ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು. ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಪಡೆಯಲು ಇಚ್ಚಿಸುವ ಮಹಿಳೆಯರು, ತಮ್ಮ ಆಧಾರ್‌ ಕಾರ್ಡ್‌, ವಾಸ ದೃಢೀಕರಣ ಪತ್ರದೊಂದಿಗೆ ಸ್ವಯಂ ಘೋಷಣೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅರ್ಜಿ ವಿಧಾನವನ್ನು ಸರಳೀಕೃತಗೊಳಿಸಲಾಗಿದೆ.

ಇದರ ಜೊತೆಗೆ, ಹೊರ ರಾಜ್ಯದಿಂದ ಬಂದು ನೆಲೆಸಿರುವ ಬಿಪಿಎಲ್‌ ಕಾರ್ಡ್‌ ಹೊಂದಿರುವ ಮಹಿಳೆಯರು, ತಮ್ಮ ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌ನೊಂದಿಗೆ ನೆರೆ ರಾಜ್ಯದ ನಿವಾಸಿ ಎಂಬ ಸ್ವಯಂ ಧೃಢೀಕರಣ ಪತ್ರವನ್ನು ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿದಾರರು 14 ಅಂಶಗಳ ಸ್ವಯಂ ಘೋಷಣೆಯ ಅರ್ಜಿಯನ್ನು ಭರ್ತಿ ಮಾಡಿ ಅನಿಲ ಸಂಪರ್ಕ ಪಡೆಯುವ ಗ್ಯಾಸ್‌ ಏಜೆನ್ಸಿಗೆ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದವರಿಗೂ ಈ ಸೌಲಭ್ಯ ಸಿಗುವಂತೆ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಹೊಸ ನಿಯಮಗಳಿಂದ ಈ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಬಿಪಿಎಲ್ ಕಾರ್ಡ್ ನಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: KMF Recruitment 2023: ಕೆಎಂಎಫ್ ನಲ್ಲಿ ಭರ್ಜರಿ ಉದ್ಯೋಗವಕಾಶ! ಈ ಕೂಡಲೇ ಅರ್ಜಿ ಸಲ್ಲಿಸಿ! ಮಾಸಿಕ ವೇತನ ಲಕ್ಷದವರೆಗೆ!!!

You may also like

Leave a Comment