Belthangady: ಯಾವುದೇ ವ್ಯಕ್ತಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ಕರೆದುಕೊಂಡು ಹೋಗಲೆಂದು ಆಂಬುಲೆನ್ಸ್ ಬಳಸಲಾಗುತ್ತದೆ. ಗಂಭಿರ ಸ್ಥಿತಿಯಲ್ಲಿರುವವರನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ್ಯವನ್ನು ಅತಿವೇಗವಾಗಿ ಮಾಡಲು ಆಂಬುಲೆನ್ಸ್‌ನ್ನು ಬಳಸಲಾಗುತ್ತದೆ. ಆದರೆ ಇದೇ ಆಂಬುಲೆನ್ಸ್‌ನಿಂದ ವಿಚಿತ್ರ ವಿದ್ಯಮಾನವೊಂದು ನಡೆದಿದೆ. ಬೆಂಗಳೂರಿನ ಏಳು ಮಂದಿ ಯುವಕರು ಆಂಬುಲೆನ್ಸ್‌ನಲ್ಲಿ ಪ್ರವಾಸ ಮಾಡಿರುವ ಕುರಿತು ವರದಿಯಾಗಿದೆ. ಇದೀಗ ಈ ಯುವಕರನ್ನು ಉಜಿರೆಯಲ್ಲಿ ಪೊಲೀಸರು ಹಿಡಿದು ದಂಡ ಹಾಕಿದ ಘಟನೆ ನಡೆದಿದೆ(Belthangady).
ಆಂಬುಲೆನ್ಸ್ ಚಾಲಕ ತನ್ನ ಆರು ಮಂದಿ ಗೆಳೆಯರನ್ನು ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ. ಕೊಟ್ಟಿಗೆಹಾರ ಆಗಿ ಉಜಿರೆ ಬರುತ್ತಿದ್ದಂತೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ತ್ಯಾಗರಾಜ್ ಎಂಬ ಹೆಸರಿನ ಆಂಬುಲೆನ್ಸ್‌ನಲ್ಲಿ ಒಟ್ಟು ಏಳು ಜನ ಬರುತ್ತಿರುವ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಅರ್ಜುನ್ ಅವರಿಗೆ ಬಂದಿತ್ತು. ಕೂಡಲೇ ಅವರು ತಮ್ಮ ಠಾಣೆಯ ಸಿಬ್ಬಂದಿ ಸುನಿಲ್ ಉಜಿರೆ ಬೀಟ್‌ನಲ್ಲಿ ಕರ್ತವ್ಯದಲ್ಲಿದ್ದು, ಅವರಿಗೆ ಮಾಹಿತಿ ನೀಡಿ ವಾಹನ ನಿಲ್ಲಿಸಿ ಠಾಣೆಗೆ ತರಲು ಹೇಳಿದ್ದಾರೆ. ನಂತರ ಆಂಬುಲೆನ್ಸ್‌ನ್ನು ಹಿಡಿದಾಗ ಗೆಳೆಯರ ಜೊತೆ ದೇವಸ್ಥಾನ ಟ್ರಿಪ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸಂಚಾರಿ ಪೊಲೀಸರು ಚಾಳಕನಿಗೆ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ:Uttar pradesh: ಶಾಲೆಯೊಳಗೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕ- ಇಲ್ಲಿದೆ ಬೆಚ್ಚಿಬೀಳಿಸೋ ವಿಡಿಯೋ!!
