Door mat Tips: ಮನೆ ಮುಂಬಾಗಿಲಿನಲ್ಲಿ ಕಾಲು ಒರೆಸುವ ಮ್ಯಾಟ್ ಇರುವುದು ಸಾಮಾನ್ಯ ಮತ್ತು ಅದು ಅಗತ್ಯವಾಗಿದೆ. ಆದ್ರೆ ಕಾಲನ್ನು ಒರೆಸುವ ಮ್ಯಾಟ್ (Door mat Tips) ಕೊಂಡುಕೊಳ್ಳುವಾಗ ಅದನ್ನು ಎಲ್ಲಿ ಹೇಗೆ ಬಳಸುವ ಉದ್ದೇಶವಿದೆ ಎಂಬುದನ್ನು ತಿಳಿಯುವುದು ಅತಿ ಮುಖ್ಯ.
ಹೌದು, ಮನೆಯ ಮುಖ್ಯ ದ್ವಾರದಲ್ಲಿ ಹಾಕುವ ಮ್ಯಾಟ್ ಆದರೆ ರಬ್ಬರ್ ಮ್ಯಾಟ್ ಖರೀದಿಸುವುದು ಒಳ್ಳೆಯದು. ಏಕೆಂದರೆ ಮನೆಯ ಮುಖ್ಯ ದ್ವಾರದಿಂದ ಪ್ರವೇಶ ಮಾಡುವಾಗ ಕಾಲಿನ ಧೂಳನ್ನು ಹಿಡಿದಿಡುವುದು ಅತಿ ಮುಖ್ಯ. ಇಲ್ಲಿ ನೀರು ಹೀರುವ ಮ್ಯಾಟ್ ಬಳಸಿ ಪ್ರಯೋಜನವಿಲ್ಲ.
ಇನ್ನು ಬಾತ್ ರೂಮ್ ಬಳಿ ಬಳಸುವ ಮ್ಯಾಟ್ ಕಡ್ಡಾಯವಾಗಿ ನೀರು ಹೀರುವ ಗುಣ ಹೊಂದಿರಲೇ ಬೇಕು. ಇಲ್ಲದೆ ಹೋದರೆ ಅದು ಅಪ್ರಯೋಜಕ.
ಇನ್ನು ಬಾತ್ ರೂಮ್ ಹೊರಗಿನ ಮ್ಯಾಟ್ ಕಾಲಿಟ್ಟರೆ ಜಾರುವ ಹಾಗೆ ಇರಬಾರದು. ಆದಷ್ಟು ಕಾಟನ್ ಅಥವಾ ಮೃದುವಾದ ಬಟ್ಟೆಯಿಂದ ಕೂಡಿರುವುದು ಸೂಕ್ತ. ಮಕ್ಕಳು ಹಾಗೂ ವಯಸ್ಸಾದವರು ಇರುವ ಮನೆಯಲ್ಲಿ ಬಾತ್ ನ ಹೊರಗೆ ಹಾಕುವ ಮ್ಯಾಟ್ ನಲ್ಲಿ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.
ಅಡುಗೆ ಮನೆಯಲ್ಲೊಂದು ಮ್ಯಾಟ್ ಬಳಸುವುದಾದರೆ ಸ್ವಲ್ಪ ಗಟ್ಟಿಯಾದ, ದಪ್ಪ ಹೆಣಿಗೆ ಇರುವ ಮ್ಯಾಟ್ ಸೂಕ್ತ. ಅಡುಗೆ ಮನೆಯಲ್ಲಿ ಹಸಿ ತ್ಯಾಜ್ಯ ಹೆಚ್ಚಾಗಿ ಇರುವುದರಿಂದ ತೆಳುವಾದ ಮ್ಯಾಟ್ ಗಳು ಬಹಳ ಬೇಗ ಕೊಳೆಯಾಗಿಬಿಡಬಹುದು.
ಇದನ್ನೂ ಓದಿ: ಟಿವಿ ಸ್ಕ್ರೀನ್ ಒರೆಸುವಾಗ ಮಿಸ್ ಮಾಡ್ದೆ ಈ ಟಿಫ್ಸ್ ಫಾಲೋ ಮಾಡಿ – ಫಳ, ಫಳ ಹೊಳೆಯೋದನ್ನು ನೋಡಿ
