Home » Dhaba Owner Murder: ದೀಪಾವಳಿ ದಿನವೇ ಕೆಲಸಗಾರನಿಂದ ಮಾಲಿಕನ ಭೀಕರ ಹತ್ಯೆ- ಭಯ ಹುಟ್ಟಿಸುತ್ತೆ ಕಾರಣ!!

Dhaba Owner Murder: ದೀಪಾವಳಿ ದಿನವೇ ಕೆಲಸಗಾರನಿಂದ ಮಾಲಿಕನ ಭೀಕರ ಹತ್ಯೆ- ಭಯ ಹುಟ್ಟಿಸುತ್ತೆ ಕಾರಣ!!

1 comment
Dhaba Owner Murder

Dhaba Owner Murder: ದೀಪಾವಳಿ ಬೋನಸ್(Diwali Bonus)ಬೇಕೆಂದು ಕಾರ್ಮಿಕರು ಢಾಬಾ ಮಾಲೀಕ ರಾಜು ಧೆಂಗ್ರೆ ಅವರಿಗೆ ಬೇಡಿಕೆ ಇಟ್ಟಿದ್ದು,ಆದರೆ, ಇದಕ್ಕೆ ಮಾಲೀಕ ನಿರಾಕರಿಸಿದ ಹಿನ್ನೆಲೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಕೆಲಸಗಾರರು ಮಾಲೀಕನನ್ನು ಹತ್ಯೆ (Dhaba Owner Murder)ಮಾಡಿದ ಘಟನೆ ವರದಿಯಾಗಿದೆ.

ಸದ್ಯ, ಈ ಹತ್ಯೆ ನಡೆಸಿದ ಆರೋಪಿಗಳನ್ನು ಮಧ್ಯಪ್ರದೇಶದ ಮಂಡ್ಲಾ ಮೂಲದ ಛೋಟು ಮತ್ತು ಆದಿ ಎಂದು ಗುರುತಿಸಲಾಗಿದ್ದು ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ(Crime News)ಎಂದು ತಿಳಿದುಬಂದಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕುಹಿ ತಾಲೂಕಿನ ಸುರ್ಗಾಂವ್ ಗ್ರಾಮದ ಮಾಜಿ ಸರಪಂಚ್ ರಾಜು ಧೇಂಗ್ರೆ ಗೆಲುವು ಪಡೆದುಕೊಂಡಿದ್ದರು ಎನ್ನಲಾಗಿದೆ. ಒಂದು ತಿಂಗಳ ಹಿಂದಷ್ಟೆ ಕಾರ್ಮಿಕ ಗುತ್ತಿಗೆದಾರರ ಮೂಲಕ ಛೋಟು ಮತ್ತು ಆದಿಯನ್ನು ಸೇರಿಸಿಕೊಂಡಿದ್ದರಂತೆ.

ಆದಿ ಮತ್ತು ಛೋಟು ಎಂಬ ಕಾರ್ಮಿಕರು ಹಣ ಮತ್ತು ದೀಪಾವಳಿ ಬೋನಸ್ ಗೆ ಮಾಲೀಕನಿಗೆ ಬೇಡಿಕೆ ಇಟ್ಟಿದ್ದು, ಇದನ್ನು ನಿರಾಕರಿಸಿದ್ದಕ್ಕೆ ಮಾಲೀಕನನ್ನೇ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಗ್ಗದಿಂದ ಕತ್ತು ಬಿಗಿದು, ಗಟ್ಟಿಯಾದ ಆಯುಧದಿಂದ ತಲೆಗೆ ಹೊಡೆದು, ಮುಖವನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜು ಧೆಂಗ್ರೆ ಅವರ ದೇಹವು ಧಾಬಾದಲ್ಲಿನ ಮಂಚದ ಮೇಲೆ ಪತ್ತೆಯಾಗಿದ್ದು, ಈ ಕೊಲೆಗೆ ನೈಜ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: CBSE 10, 12ನೇ ತರಗತಿ ಪರೀಕ್ಷೆ ಟೈಮ್ ಟೇಬಲ್ ಪ್ರಕಟ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

You may also like

Leave a Comment