Home » Alert: ಅಪ್ಪಿತಪ್ಪಿಯೂ ವಾಟ್ಸಪ್ ನಲ್ಲಿ ಬರೋ ಈ ಮೆಸೇಜ್ ಗಳನ್ನು ಕ್ಲಿಕ್ ಮಾಡಬೇಡಿ.

Alert: ಅಪ್ಪಿತಪ್ಪಿಯೂ ವಾಟ್ಸಪ್ ನಲ್ಲಿ ಬರೋ ಈ ಮೆಸೇಜ್ ಗಳನ್ನು ಕ್ಲಿಕ್ ಮಾಡಬೇಡಿ.

1 comment
Alert

Alert: ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ವ್ಯಾಪಿಸಿರುವ ಸಾಮಾಜಿಕ ಮಾಧ್ಯಮವೆಂದರೆ ಅದು ವಾಟ್ಸಪ್. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗೋ ಅಜ್ಜ ,ಅಜ್ಜಿಯರೂ ವಾಟ್ಸಪ್ ಬಿಟ್ಟು ಇರೋದಿಲ್ಲ. ಪ್ರತಿಯೊಬ್ಬರ ಮೊಬೈಲ್ ನಲ್ಲೂ ವಾಟ್ಸಪ್ ಇದ್ದೇ ಇರುತ್ತದೆ. ಹೀಗೆ ವಾಟ್ಸಪ್ ಬಳಕೆ ಹೆಚ್ಚಿದಂತೆ ಇದರ ಮೂಲಕ ಹಣ ಎಗರಿಸುವ ಕೆಲಸವೂ ಹೆಚ್ಚಾಗಿದೆ. ಹೀಗಾಗಿ ವಾಟ್ಸಪ್ ಬಳಕೆದಾರರು ಸದಾ ಎಚ್ಚರ(Alert)ದಿಂದರಬೇಕು.

ಹೌದು, ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕ ಕಂಪೆನಿಗಳು, ಅತಿ ದೊಡ್ಡ ಮಾರಾಟಗಾರರು ಜಾಹಿರಾತು ನೀಡುವುದನ್ನು ಅಭ್ಯಾಸ ಮಾಡಿದ್ದಾರೆ. ಅದರಲ್ಲೂ ವಾಟ್ಸಪ್ ಮೂಲಕವೇ ಹೆಚ್ಚೆನ್ನಬಹುದು. ಇದರ ಮೂಲಕ ಹಣ ಕದಿಯಲು ಅನೇಕ ಫ್ರಾಡ್ ಕೆಲಸಗಳು ಕೂಡ ನಡೆಯುತ್ತಿವೆ. ಹೀಗಾಗಿ ತಪ್ಪಿಯೂ ವಾಟ್ಸಪ್ ನಲ್ಲಿ ಬರುವ ಈ ಮೆಸೇಜ್ ಗಳನ್ನು ಕ್ಲಿಕ್ ಮಾಡಬೇಡಿ. ಹಾಗಿದ್ರೆ ಯಾವುವು ಆ ಮೆಸೇಜ್ ಗಳು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

• ಬ್ಯಾಂಕ್ ಅಲರ್ಟ್ URL(ಗಳು): ಸಂದೇಶದಲ್ಲಿನ ಯುಎಲ್‌ಆರ್ / ಲಿಂಕ್ ಮೂಲಕ ಕೆವೈಸಿಯನ್ನು ಪೂರ್ಣಗೊಳಿಸುವಂತೆ ಬಳಕೆದಾರರಿಗೆ SMS ಅಥವಾ ವಾಟ್ಸಾಪ್ನಲ್ಲಿ ಸ್ವೀಕರಿಸಿದ ಬ್ಯಾಂಕ್ ಎಚ್ಚರಿಕೆ ಸಂದೇಶವು ಬರುತ್ತವೆ. ಇದು ನಕಲಿಯಾಗಿದೆ. ನಿಮ್ಮ ಹಣವನ್ನು ಕದಿಯುವುದು ಅವರ ಉದ್ದೇಶವಾಗಿರುತ್ತದೆ.

• ಉದ್ಯೋಗಾವಕಾಶ: ಉದ್ಯೋಗ ಆಫರ್ ನ ಸಂದೇಶವು ವಾಟ್ಸಪ್ ಗಳಲ್ಲಿ ಹೆಚ್ಚಾಗಿ ಬರುತ್ತವೆ. ಆದರೆ ಇದು ಶುದ್ಧ ಸುಳ್ಳು. ಯಾಕೆಂದರೆ ಯಾವುದೇ ಉದ್ಯೋಗದ ಅವಕಾಶಗಳು ವಾಟ್ಸಪ್ ಹಾಗೂ SMS ಮೂಲಕ ಬರುವುದಿಲ್ಲ ಎಂಬುದನ್ನು ನೀವು ನೆನಪಿಡಬೇಕು.

• OTT ಚಂದಾದಾರಿಕೆ ಮೆಸೇಜ್ ಗಳು: ಒಟಿಟಿಯ ಜನಪ್ರಿಯತೆ ಹೆಚ್ಚುತ್ತಿರುವುದರಿಂದ, ಸ್ಕ್ಯಾಮರ್ಗಳು ನೆಟ್ಫ್ಲಿಕ್ಸ್ ಅಥವಾ ಇತರ ಒಟಿಟಿ ಚಂದಾದಾರಿಕೆಗಳ ಸುತ್ತ ಸಂದೇಶ ಕಳುಹಿಸುವ ಮೂಲಕ ಸ್ಮಾರ್ಟ್ಫೋನ್ ಬಳಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಈ ಉಚಿತ ಕೊಡುಗೆಗಳು ವಂಚನೆಯಿಂದ ಕೂಡಿರುತ್ತವೆ.

• ಅಮೆಜಾನ್ ಫೇಕ್ ಮಿಸ್ಡ್ ಡೆಲಿವರಿ: ಆನ್ಲೈನ್ ಶಾಪಿಂಗ್ ಬಗ್ಗೆ ನಿಮ್ಮ ಡೆಲಿವರಿ ರದ್ದುಗೊಂಡಿದೆ ಅಥವಾ ತಪ್ಪಿಹೋಗಿದೆ ಎಂದು ಎಸ್‌ಎಂಎಸ್ ಅಥವಾ ವಾಟ್ಸಾಪ್ನಲ್ಲಿ ಸಂದೇಶ ಬಂದರೆ, ಈ ರೀತಿಯ ಸಂದೇಶವು ವಂಚನೆಯಾಗಬಹುದು.

• ಶಾಪಿಂಗ್ ಎಚ್ಚರಿಕೆ: ನೀವು ಮಾಡದ ಖರೀದಿಯ ಬಗ್ಗೆ ಯಾವುದೇ ನವೀಕರಣವು ಹಗರಣವಾಗಿದೆ. ಬಳಕೆದಾರರು ತಮ್ಮ ಫೋನ್ಗಳನ್ನು ಕ್ಲಿಕ್ ಮಾಡಲು ಮತ್ತು ಹ್ಯಾಕ್ ಮಾಡಲು ಉತ್ತೇಜನಕಾರಿಯಾದ ಸಂದೇಶಗಳನ್ನು ಬರೆದು ನಿಮ್ಮನ್ನು ಯಾಮಾರಿಸುತ್ತಾರೆ.

 

ಇದನ್ನು ಓದಿ: HSRP Number Plate: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್- HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ !

You may also like

Leave a Comment