Home » Varthur Santhosh marriage photo: ಅರೇ… ವರ್ತೂರು ಸಂತೋಷ್ ಗೆ ಮದ್ವೆ ಆಗಿದ್ಯಾ ?! ವೈರಲ್ ಆಗ್ತಿದೆ ನೋಡಿ ಫೋಟೋಸ್

Varthur Santhosh marriage photo: ಅರೇ… ವರ್ತೂರು ಸಂತೋಷ್ ಗೆ ಮದ್ವೆ ಆಗಿದ್ಯಾ ?! ವೈರಲ್ ಆಗ್ತಿದೆ ನೋಡಿ ಫೋಟೋಸ್

117 comments
Varthur Santhosh marriage photo

Varthur Santhosh marriage photo: ಕರುನಾಡಿನ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10)ಈಗಾಗಲೇ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಸ್ಪರ್ಧಿಗಳ ನಡುವೆ ಜಗಳ , ಗಲಾಟೆ, ಮಾತಿನ ಚಕಮಕಿ ನಡುವೆ ಆಟಗಳು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ, ಹುಲಿ ಉಗುರು ಮೂಲಕ ದೊಡ್ದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಹಳ್ಳಿಕಾರ್ ವರ್ತೂರ್ ಸಂತೋಷ್(Varthur Santhosh) ಅವರು ಈ ವಾರ ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದರು.

ವರ್ತೂರು ಸಂತೋಷ್ ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಮುಂದುವರಿಯತ್ತಾರೋ ಇಲ್ಲವೋ ಎಂಬ ಗೊಂದಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಸದ್ಯ, ಹಳ್ಳಿಕಾರ್ ವರ್ತೂರು ಸಂತೋಷ್ (Varthur Santhosh) ಅವರ ತಾಯಿ ದೊಡ್ಮನೆಯೊಳಗೆ ಕಾಲಿಟ್ಟು ಮಗನ ಮನಸ್ಸು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ, ವರ್ತೂರ್ ಸಂತೋಷ್ ಕುರಿತ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನೀ ಬಳಗ ಈ ಸುದ್ದಿ ಕೇಳಿ ಬೆರಗಾಗಿಬಿಟ್ಟಿದ್ದಾರೆ.

27ರ ಹರೆಯದ ವರ್ತೂರ್ ಸಂತೋಷ್ ಅವರಿಗೆ ಈಗಾಗಲೆ ಮದುವೆಯಾಗಿದೆ( Varthur Santhosh marriage photo) ಎಂದು ಹುಡುಗಿ ಜೊತೆಗಿರುವ ಫೋಟೋ ಟ್ರೋಲ್ ಪೇಜ್‌ಗಳಲ್ಲಿ ವೈರಲ್ ಆಗಿ ಸಂಚಲನ ಮೂಡಿಸುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ತನ್ನ ಯಾವುದೇ ವೈಯಕ್ತಿಕ ವಿಚಾರಗಳನ್ನು ಹೇಳಿಕೊಂಡಿಲ್ಲ. ಹೀಗಾಗಿ, ಹಳ್ಳಿಯ ಜವಾನ ವರ್ತೂರ್ ಸಂತೋಷ್ ಅವರ ಮದುವೆ ಆಗಿದ್ದು ನಿಜಾನಾ ಎಂಬುದರ ಕುರಿತು ಖಚಿತತೆ ಇಲ್ಲ. ಆದಾಗ್ಯೂ, ವೈರಲ್ ಆಗಿರುವ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದೆಲ್ಲದರ ಮಧ್ಯೆ, ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ರಕ್ಷಕ್ ಬುಲೆಟ್‌ ವರ್ತೂರ್ ನಿಶ್ಚಿತಾರ್ಥದ ಬಗ್ಗೆ ಹಿಂಟ್ ಕೂಡ ನೀಡಿರುವುದರಿಂದ ವರ್ತೂರ್ ಸಂತೋಷ್ ಅವರಿಗೆ ಮದುವೆ ಆಗಿದ್ದು ಸುಳ್ಳಾ ಎಂಬ ಗೊಂದಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಒಟ್ಟಿನಲ್ಲಿ ಈ ಪ್ರಶ್ನೆಗೆ ಉತ್ತರ ಹೊರ ಬೀಳಬೇಕಾಗಿದೆ.

ಇದನ್ನೂ ಓದಿ: 7th Pay Commission: 2024ರ ಆರಂಭದಲ್ಲೇ ಸರ್ಕಾರಿ ನೌಕರರಿಗೆ 3 ಬಂಪರ್ ಗಿಫ್ಟ್- ಹೊಸ ವರ್ಷಕ್ಕೆ ವೇತನದಲ್ಲಿ ಭಾರೀ ಹೆಚ್ಚಳ

You may also like

Leave a Comment