4
Raichur: ರಾಯಚೂರು(Raichur) ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಅಚ್ಚರಿಯ ಘಟನೆ ವರದಿಯಾಗಿದೆ. ಇನೋವಾ ಕಾರಿನಲ್ಲಿ ಇದ್ದಕಿದ್ದಂತೆ ನಾಗರ ಹಾವು (Cobra)ಪ್ರತ್ಯಕ್ಷವಾಗಿದ್ದು, ಹಾವು ಹೊರಬರಲು ಚಾಲಕ ಫಿನಾಯಿಲ್ ಸಿಂಪಡಿಸಿದ್ದಾರೆ. ಫಿನಾಯಿಲ್(Phenol)ವಾಸನೆಗೆ ನಾಗರಹಾವು ಕಾರಿನಲ್ಲಿ ಪ್ರಜ್ಜೆ ತಪ್ಪಿದೆ. ಇದಾದ ನಂತರ ಉರಗ ತಜ್ಞ ಖಾಲೀದ್ ಚಾವೂಸ್ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಕೆ ಮಾಡಿ ರಕ್ಷಿಸಲಾಗಿದೆ. ನಾಗರ ಹಾವು ಚೇತರಿಸಿಕೊಂಡ ಬಳಿಕ ಉರಗತಜ್ಞ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಕೃತಕ ಆಮ್ಲಜನಕದ ನೆರವಿನಿಂದ ನಾಗರ ಹಾವು ಮರುಜೀವ ಪಡೆದಿರುವಂತಹ ಘಟನೆ ಉಳಿದವರಿಗೆ ಅಚ್ಚರಿ ಮೂಡಿಸಿದೆ.
