Home » Uttarpradesh Crime News: ಮದರಸ ಶಾಲಾ ಶಿಕ್ಷಕನ ಅಮಾನುಷ ಕೃತ್ಯ- ಬಾಲಕನನ್ನು ಸರಪಳಿಯಿಂದ ಕಟ್ಟಿ ಥಳಿತ !! ಕಾರಣ ತಿಳಿದ್ರೆ ನೀವೂ ಮರುಗುತ್ತೀರಾ

Uttarpradesh Crime News: ಮದರಸ ಶಾಲಾ ಶಿಕ್ಷಕನ ಅಮಾನುಷ ಕೃತ್ಯ- ಬಾಲಕನನ್ನು ಸರಪಳಿಯಿಂದ ಕಟ್ಟಿ ಥಳಿತ !! ಕಾರಣ ತಿಳಿದ್ರೆ ನೀವೂ ಮರುಗುತ್ತೀರಾ

1 comment
Uttarpradesh Crime News

Uttarpradesh Crime News: ಉತ್ತರಪ್ರದೇಶದ ಸಹರಾನ್ಪುರದಲ್ಲಿ ತಮ್ಮ ಮಾತನ್ನು ಕೇಳಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ಮದರಸದಲ್ಲಿ (Madrasa)ಕೂಡಿ ಹಾಕಿ ಅಮಾನುಷವಾಗಿ ಥಳಿಸಿರುವ(Uttarpradesh Crime News) ಘಟನೆ ವರದಿಯಾಗಿದೆ.

ಉತ್ತರಪ್ರದೇಶದ ಸಹರಾನ್ಪುರದಲ್ಲಿ ತಮ್ಮ ಮಾತನ್ನು ಕೇಳಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು(Student)ಮದರಸದಲ್ಲಿ ಕೂಡಿ ಹಾಕಲಾಗಿದ್ದು, ಈ ಸಂದರ್ಭ ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಸಮಿಪದಬಲ್ಲು ಎಂಬ ಗ್ರಾಮಕ್ಕೆ ಬಂದಿದ್ದಾನೆ. ಅಸ್ವಸ್ಥಗೊಂಡಿದ್ದ ಬಾಲಕನನ್ನು ಗ್ರಾಮಸ್ಥರು ಸಂತೈಸಿ ವಿಚಾರಿಸಿದ ಸಂದರ್ಭ ಆತ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ಆತನ ಪೋಷಕರು ಮತ್ತು ಸ್ಥಳೀಯರು ಪೊಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡಿರುವ ಬಾಲಕನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಕುರಿತಂತೆ ಮದರಾಸದ ಮುಖ್ಯಸ್ಥ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಬಾಲಕನ ತಂದೆ ಹಾಗೂ ತಾಯಿ ಕೂಲಿಕಾರ್ಮಿಕರಾಗಿದ್ದು, ತಮ್ಮ ಮಗನನ್ನು ಸಹರಾನ್ಪುರದಲ್ಲಿರುವ ಮದರಸದಲ್ಲಿ ಬಿಟ್ಟಿದ್ದರಂತೆ.ಈ ನಡುವೆ ಬಾಲಕ ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಕುಪಿತರಾದ ಮದರಾಸದ ಮುಖ್ಯಸ್ಥರು ಬಾಲಕನಿಗೆ ಊಟ ನೀಡದೆ ಸರಪಳಿಯಲ್ಲಿ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ, ಪೊಲೀಸರು ಮದರಸಾದ ಮುಖ್ಯಸ್ಥನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: School Holiday: ಭಾರೀ ಮಳೆಯ ಸಂಭವ; ಇಂದು ಈ ಶಾಲೆಗಳಿಗೆ ರಜೆ ಘೋಷಣೆ!

You may also like

Leave a Comment