PM Kisan 15th Installment: ಕೃಷಿಕರ ಬೇಸಾಯಕ್ಕೆ ಧನಸಹಾಯವಾಗಿ ಸರ್ಕಾರ ಪ್ರಾರಂಭ ಮಾಡಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Yojana)ಯೋಜನೆಯಲ್ಲಿ 15ನೇ ಕಂತಿನ ಹಣ (PM Kisan 15th Installment)ನವೆಂಬರ್ 15ರಂದು ಬಿಡುಗಡೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಝಾರ್ಖಂಡ್ನ ಖೂಂಟಿಯಲ್ಲಿ (Khunti, Jharkhand) ನಿನ್ನೆ ಹೊಸ ಕಂತಿನ ಹಣ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆಯಾಗಿದ್ದು, ಬಹುತೇಕ ಮಂದಿಯ ಖಾತೆಗೆ ಹಣ ಬಂದಿದೆ. ಸರ್ಕಾರ 15ನೇ ಕಂತಿಗೆ (PM Kisan 15th Installment)ಒಟ್ಟು 18,000 ಕೋಟಿ ರೂ ಹಣ ವೆಚ್ಚ ಆಗಲಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳಿಂದ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ.
ಪಿಎಂ ಕಿಸಾನ್ ಸ್ಕೀಮ್ ರೈತರಿಗಾಗಿ ವಿಶ್ವದಲ್ಲೇ ಇರುವ ಅತಿದೊಡ್ಡ ಡಿಬಿಟಿ ಸ್ಕೀಮ್ (DBT- direct beneficiary transfer) ಆಗಿದೆ. 2019ರ ಫೆಬ್ರುವರಿಯಲ್ಲಿ ಆರಂಭವಾದ ಈ ಸ್ಕೀಮ್ನಲ್ಲಿ ವರ್ಷಕ್ಕೆ ತಲಾ 2,000 ರೂಗಳ 3 ಕಂತುಗಳ ಅನುಸಾರ 6,000 ರೂ ಹಣವನ್ನು ಅರ್ಹ ರೈತರ ಖಾತೆಗಳಿಗೆ ಸರ್ಕಾರ ನೇರವಾಗಿ ವರ್ಗಾವಣೆ ಮಾಡಲಿದೆ.
ಪಿಎಂ ಕಿಸಾನ್ ಸ್ಕೀಮ್ನಲ್ಲಿ 15ನೇ ಕಂತಿನ ಹಣ ಬಂದಿಲ್ಲ ಎಂದರೆ ಕಾರಣವೇನು ಗೊತ್ತಾ?
* ಯೋಜನೆಗೆ ಇನ್ನೂ ನೊಂದಾವಣಿ ಆಗಿಲ್ಲದೇ ಇರುವ ಸಾಧ್ಯತೆಯಿದೆ.
* ಇಕೆವೈಸಿ ಆಗಿಲ್ಲದೇ ಇರಬಹುದು ಇಲ್ಲವೇ ಸರಿಯಾಗಿ ಮಾಡಿಲ್ಲದೇ ಇರಬಹುದು.
* ಯೋಜನೆಯ ಅರ್ಹತಾ ಮಾನದಂಡ ಒದಗಿಸಲು ಸಾಧ್ಯವಾಗಿರಬಹುದಿಲ್ಲ.
ನೀವು ಪಿಎಂ ಕಿಸಾನ್ ಸ್ಕೀಮ್ನ ಅಧಿಕೃತ ಪೋರ್ಟಲ್ಗೆ https://pmkisan.gov.in/ ಹೋದರೆ ಮುಖ್ಯಪುಟದಲ್ಲೇ ಪ್ರಾರಂಭದಲ್ಲಿ ಒಂದು ಪಾಪ್ ಅಪ್ ಬರಲಿದೆ. ಅದರಲ್ಲಿ ಇಕೆವೈಸಿ, ನಿಮ್ಮ ಸ್ಟೇಟಸ್ ತಿಳಿಯಲು ಹಾಗೂ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಲು ಕ್ಯುಆರ್ ಕೋಡ್ಗಳು ಕಾಣಿಸುತ್ತದೆ.
ಇದನ್ನೂ ಓದಿ: Congress Government: ಬಿಜೆಪಿಗೆ ಬಿಗ್ ಶಾಕ್- ಕಾಂಗ್ರೆಸ್ ನಿಂದ ಮತ್ತೊಂದು ಪ್ರಮುಖ ಯೋಜನೆ ರದ್ದು!!!
