CPR Treatment: ತಾಜ್ ಮಹಲ್ ನೋಡಲು ಕುಟುಂಬ ಸಮೇತ ಬಂದಿದ್ದ ವ್ಯಕ್ತಿಗೆ, ಅವರ ಮಗ ಸಿಪಿಆರ್ ( CPR Treatment – ಕಾರ್ಡಿಯೋ- ಪಲ್ಮನರಿ ರೆಸಸಿಟೇಶನ್) ನೀಡಿ, ಜೀವ ಉಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ (Video Viral).
ಮಾಹಿತಿ ಪ್ರಕಾರ, ಸಿಪಿಆರ್ ಕೊಟ್ಟ ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿ ಚೇತರಿಸಿಕೊಂಡಿದ್ದಾರೆ. ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಷ್ಟು ವೈದ್ಯಕೀಯ ವರದಿ ಬರಬೇಕಿದೆ.
ತಜ್ಞರ ಪ್ರಕಾರ, ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣ ಸಿಪಿಆರ್ ಮಾಡಿದರೆ, ಅವರ ಬದುಕುಳಿಯುವ ಸಾಧ್ಯತೆಯನ್ನು ದ್ವಿಗುಣಗೊಳಿಸಬಹುದು ಅಥವಾ ಮೂರು ಪಟ್ಟು ಹೆಚ್ಚಿಸಬಹುದು ಎನ್ನುತ್ತಾರೆ.
ಇದನ್ನೂ ಓದಿ : ಮಹಿಳೆಯರೇ , ದಟ್ಟ ಹುಬ್ಬುಗಳಿಲ್ಲವೆಂಬ ಕೊರಗೇ? ಈ ಮನೆ ಮದ್ದು ಬಳಸಿ ನೀವೂ ಕಾಮನಬಿಲ್ಲಿನಂತ ಹುಬ್ಬು ಪಡೆಯಿರಿ
