Tirupati Special Offer: ಹೊಸದಾಗಿ ಮದುವೆಯಾದ ನವ ವಿವಾಹಿತರಿಗೆ, ಮದುವೆಯಾಗುವ ತಯಾರಿಯಲ್ಲಿ ಇರುವವರಿಗೆ ಸಿಹಿ ಸುದ್ದಿ (Good News)ಇಲ್ಲಿದ್ದು, ಸದ್ಯ ಮದುವೆಯಾಗಲಿರುವ ಜೋಡಿಗಳಿಗೆ ಟಿಟಿಡಿಯಿಂದ (TTD) ಖುಷಿ ಸುದ್ದಿ ಇಲ್ಲಿದೆ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುವಾಗ ತಿಮ್ಮಪ್ಪನ ಆಶೀರ್ವಾದವನ್ನು (Tirupati Blessings)ಸುಲಭವಾಗಿ ಪಡೆಯಬಹುದಾಗಿದ್ದು, ಆದರೆ ಷರತ್ತುಗಳು ಹೀಗಿವೆ.
ಮದುವೆಯಾದ ಹೊಸತರಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವುದು ಸಾಮಾನ್ಯ. ಇದೀಗ, ತಿರುಪತಿ ತಿರುಮಲ ದೇವಸ್ಥಾನವು ನವ ದಂಪತಿಗಳಿಗೆ ವಿಶೇಷ ದರ್ಶನಕ್ಕೆ(Tirupati Special Offer) ಅನುವು ಮಾಡಿಕೊಟ್ಟಿದೆ. ಹೊಸದಾಗಿ ಮದುವೆಯಾದ ಜೋಡಿಗಳಿಗೆ ವೆಂಕಟೇಶ್ವರನ ಆಶೀರ್ವಾದ ಪಡೆಯಲು ವಿಶೇಷ ದರ್ಶನಕ್ಕೆ ನೆರುವಾಗುವ ದೆಸೆಯಲ್ಲಿ ಟಿಟಿಡಿ ಟಿಕೆಟ್ ವ್ಯವಸ್ಥೆ ಮಾಡಲಿದೆ .
ಟಿಕೆಟ್ ಪಡೆಯಲು ನಿಯಮಗಳು ಹೀಗಿವೆ:
# ಈ ಟಿಕೆಟ್ ಪಡೆಯಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗಿದ್ದು, ನವವಿವಾಹಿತ ದಂಪತಿಗಳು ಸಿಆರ್‌ಒ ಕಚೇರಿಯಲ್ಲಿರುವ ಅರ್ಜಿತ ಸೇವಾ ಲಕ್ಕಿ ಡಿಪ್ ಕೌಂಟರ್‌ಗೆ ತೆರಳಬೇಕು.
# ಇಲ್ಲಿ ವಧುವರರು ತಮ್ಮ ಮದುವೆಯ ಚಿತ್ರಗಳನ್ನು ಹಾಗೂ ಇಬ್ಬರ ಆಧಾರ್ ಕಾರ್ಡ್ ಅನ್ನು ಸಹ ಗುರುತಿನ ಪುರಾವೆಯಾಗಿ ನೀಡಬೇಕಾಗುತ್ತದೆ.
# ದಂಪತಿಗಳು ದೇವಸ್ಥಾನಕ್ಕೆ ಭೇಟಿ ನೀಡುವ ಒಂದು ವಾರದೊಳಗೆ ಮದುವೆಯಾಗಿರಬೇಕು.
# ಒಂದು ವಾರಕ್ಕೂ ಮೊದಲೇ ಮದುವೆಯಾಗಿದ್ದರೆ ಅವಕಾಶ ಇರುವುದಿಲ್ಲ.
# ಈ ಪ್ರಕ್ರಿಯೆ ಮುಗಿದ ಬಳಿಕ ನವವಿವಾಹಿತರು ನೇರವಾಗಿ ಕಲ್ಯಾಣೋತ್ಸವದ ಟಿಕೆಟ್ ಪಡೆಯಲು ಅವಕಾಶವಿದೆ.
ನವ ಜೋಡಿಗಳು ತಮ್ಮ ಮದುವೆಯ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಒಂದು ವಾರದ ಹಿಂದೆ ವಿವಾಹವಾದ ದಂಪತಿಗಳು ತಿರುಮಲದಲ್ಲಿ ಕಲ್ಯಾಣೋತ್ಸವ ಸೇವೆಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ತಿರುಮಲ ತಿರುಪತಿ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ನವವಿವಾಹಿತ ದಂಪತಿಗಳಿಗೆ ದಿನಕ್ಕೆ 20 ಟಿಕೆಟ್‌ಗಳನ್ನು ಕಾಯ್ದಿರಿಸಲಿದ್ದು, ಈ ಟಿಕೆಟ್‌ನ ಬೆಲೆ 1000. ರೂಪಾಯಿ ಯಾಗಿದ್ದು, ಟಿಕೆಟ್‌ಗಳು ಮದುವೆ ಸಮಾರಂಭಗಳು ಹಾಗೂ ವಿಶೇಷ ದರ್ಶನ ಎರಡಕ್ಕೂ ಮಾನ್ಯವಾಗಿರಲಿದೆ.
ಇದನ್ನೂ ಓದಿ: Free Ration: ಈ ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ – ಉಚಿತ ರೇಷನ್ ವಿತರಣೆ ಮಾಡುವ ಬಗ್ಗೆ ಕೇಂದ್ರದಿಂದ ಹೊಸ ಘೋಷಣೆ !!
