Home » Narendra Modi: ಮೋದಿ ಸಲ್ಮಾನ್ ಖಾನ್ ತರ !! ಅರೆ, ಹೀಗೆ ಹೇಳಿದ್ಯಾರು ?!

Narendra Modi: ಮೋದಿ ಸಲ್ಮಾನ್ ಖಾನ್ ತರ !! ಅರೆ, ಹೀಗೆ ಹೇಳಿದ್ಯಾರು ?!

1 comment
Narendra Modi

Narendra Modi: ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಪ್ರಿಯಾಂಕಾ ವಾದ್ರಾ(Priyanka Vadra), ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಟೀಕಿಸಿದ್ದು, ಈ ಸಂದರ್ಭ ಮೋದಿ ಅವರನ್ನು ಸಲ್ಮಾನ್‌ ಖಾನ್‌ ಅವರಿಗೆ ಹೋಲಿಸಿದ್ದಾರೆ.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ (Assembly Elections 2023)ಮಧ್ಯಪ್ರದೇಶ, ರಾಜಸ್ಥಾನ ಒಳಗೊಂಡಂತೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿ ಸಂದರ್ಭ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ಕಿಡಿ ಕಾರಿದ್ದಾರೆ. ಇದರ ಜೊತೆಗೆ “ನರೇಂದ್ರ ಮೋದಿ ಅವರು ತೇರೆ ನಾಮ್‌ (Tere Naam) ಸಿನಿಮಾದ ಸಲ್ಮಾನ್‌ ಖಾನ್‌ ಇದ್ದಂತೆ” ಎಂದು ಹಂಗಿಸಿದ್ದಾರೆ.

ನರೇಂದ್ರ ಮೋದಿ ಅವರು ತೇರೆ ನಾಮ್‌ ಸಿನಿಮಾದ ಸಲ್ಮಾನ್‌ ಖಾನ್‌ ರೀತಿ ಏಕೆಂದರೆ ಅವರು ಯಾವಾಗಲೂ ಅಳುತ್ತಿರುತ್ತಾರೆ. ನರೇಂದ್ರ ಮೋದಿ ಅವರು ಕೂಡ ತೇರೆ ನಾಮ್‌ ಸಿನಿಮಾ ರೀತಿ ಮೇರೆ ನಾಮ್‌ (Mere Naam) ಎಂಬ ಸಿನಿಮಾ ಮಾಡಬೇಕು” ಎಂದು ಪ್ರಿಯಂಕಾ ಟೀಕಿಸಿದ್ದಾರೆ. ದಾಟಿಯಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಿಯಾಂಕಾ ವಾದ್ರಾ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

 

ಇದನ್ನು ಓದಿ: ತಲೆ ಸ್ನಾನ ಮಾಡುವಾಗ ಹುಡುಗಿಯರು ಎಂದೂ ಈ ತಪ್ಪುಗಳನ್ನು ಮಾಡಬಾರದು 

You may also like

Leave a Comment