Indian Railways recruitment 2023: ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,664 ಹುದ್ದೆಗಳಿಗೆ (Indian Railways recruitment 2023)ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ. SC/ST/ಅಂಗವಿಕಲ/ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. ಇನ್ನುಳಿದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಹುದ್ದೆಗಳ ವಿವರ:
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಅರ್ಜಿ ಆಹ್ವಾನ ಮಾಡಲಾಗಿದೆ. ಫಿಟ್ಟರ್, ವೆಲ್ಡರ್ (G&E), ಆರ್ಮೇಚರ್ ವಿಂಡರ್, ಮೆಕ್ಯಾನಿಕ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಪೇಂಟರ್(ಸಾಮಾನ್ಯ), ಮೆಕ್ಯಾನಿಕ್ (DSL), ICTSM, ವೈರ್ ಮ್ಯಾನ್, ಬ್ಲ್ಯಾಕ್ ಸ್ಮಿತ್, ಪ್ಲಂಬರ್, ಮೆಕ್ಯಾನಿಕ್ ಕಮ್ ಆಪರೇಟರ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಸಿಸ್ಟಂ, ಹೆಲ್ತ್ ಸ್ಯಾನಿಟರಿ ಇನ್ಸ್ಪೆಕ್ಟರ್, ಮಲ್ಟಿಮೀಡಿಯಾ ಮತ್ತು ವೆಬ್ ಪೇಜ್ ಡಿಸೈನರ್, MMTM, ಕ್ರೇನ್, ಡ್ರಾಫ್ಟ್ಸ್ಮನ್ (ಸಿವಿಲ್), ಸ್ಟೆನೋಗ್ರಾಫರ್ (ಇಂಗ್ಲಿಷ್ ಮತ್ತು ಹಿಂದಿ) ಮತ್ತು ಟರ್ನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತಾ ಮಾನದಂಡಗಳು:
* ಅಭ್ಯರ್ಥಿಗಳು SSC /ಮೆಟ್ರಿಕ್ಯುಲೇಷನ್ /10ನೇ ತರಗತಿ ಪರೀಕ್ಷೆ ಅಥವಾ ತತ್ಸಮಾನ (10 + 2 ಪರೀಕ್ಷಾ ವ್ಯವಸ್ಥೆಯಡಿ) ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಪಾಸಾಗಿರಬೇಕು.
* ಭಾರತ ಸರ್ಕಾರದಿಂದ ಮಾನ್ಯತೆ ಪಡೆದ NCVT / SCVT ಹೊರಡಿಸಿದ ಸಂಬಂಧಿತ ಟ್ರೇಡ್‍ನಲ್ಲಿ ಐಟಿಐ ಮುಗಿಸಿರಬೇಕು.
* ಐಟಿಐ ಸರ್ಟಿಫಿಕೇಟ್/ NCVT/SCVTಗೆ ಸಂಯೋಜಿತವಾಗಿರುವ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ.
* ಅಭ್ಯರ್ಥಿಗಳ ವಯೋಮಿತಿ(14/12/23ರ) ಅನುಸಾರ 15 – 24 ವರ್ಷಗಳು.
ಇದನ್ನು ಓದಿ: ಪಂಚಾಯಿತಿಯಲ್ಲಿ OBC ಮೀಸಲು 42%ಕ್ಕೆ ಏರಿಕೆ – ಕಾಂಗ್ರೆಸ್ ನಿಂದ ಮಹತ್ವದ ಘೋಷಣೆ !!
