Home » Brundavana Serial: ಕಲರ್ಸ್ ವಾಹಿನಿಯ ‘ಬೃಂದಾವನ’ ಧಾರಾವಾಹಿಯ ಹೀರೋ ಬದಲಾವಣೆ: ಕಿರುತೆರೆಗೆ ಮೊತ್ತ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿರುವ ಹೀರೋ ಇವರೇ ನೋಡಿ!

Brundavana Serial: ಕಲರ್ಸ್ ವಾಹಿನಿಯ ‘ಬೃಂದಾವನ’ ಧಾರಾವಾಹಿಯ ಹೀರೋ ಬದಲಾವಣೆ: ಕಿರುತೆರೆಗೆ ಮೊತ್ತ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿರುವ ಹೀರೋ ಇವರೇ ನೋಡಿ!

1 comment
Brundavana Serial

Brundavana Serial: ಕಲರ್ಸ್‌ ಕನ್ನಡ (Colors Kannada)ವಾಹಿನಿಯಲ್ಲಿ ತುಂಬು ಕುಟುಂಬದ ಕಥೆಯನ್ನು ಜನರ ಮುಂದಿಡಲು ಶುರುವಾದ ಬೃಂದಾವನ ಧಾರಾವಾಹಿ(Brundavana Serial) ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ, ಗೀತಾ ಧಾರಾವಾಹಿಯ ಮೂಲಕ ಮನಸೆಳೆದ ನಿರ್ದೇಶಕ ರಾಮ್‌ಜಿ, ಬೃಂದಾವನ ನಿರ್ದೇಶನ ಮಾಡುತ್ತಿದ್ದಾರೆ.

 

ಮಾಜಿ ಬಿಗ್‌ಬಾಸ್‌ ಸ್ಪರ್ಧಿ (Bigg Boss Contestant)ವಿಶ್ವನಾಥ್‌ ಹಾವೇರಿ ಬೃಂದಾವನ ಧಾರಾವಾಹಿಯ ನಾಯಕನಾಗಿ ತೆರೆ ಮೇಲೆ ಮಿಂಚಿದ್ದರು. ಇವರ ಜೊತೆಗೆ ಕನ್ನಡತಿ ಸೀರಿಯಲ್‌ ಖ್ಯಾತಿಯ ಅಮ್ಮಮ್ಮ ಎಂದೇ ಪ್ರಖ್ಯಾತಿ ಪಡೆದ ಚಿತ್ಕಳಾ,ಸುಂದರ್‌, ವೀಣಾ ಸುಂದರ್‌ ಸೇರಿ ಹಿರಿ ಕಿರಿ ಕಲಾವಿದರನ್ನೊಳಗೊಂಡ ತುಂಬು ಕುಟುಂಬದ ಕಥೆಯ ಎಳೆಯನ್ನು ಇಟ್ಟುಕೊಂಡು ಜನರ ಮನ ಗೆಲ್ಲುವ ಪ್ರಯತ್ನಕ್ಕೆ ಬೃಂದಾವನ ತಂಡ ಹೆಜ್ಜೆ ಇರಿಸಿದೆ.ಇದೀಗ ಈ ಧಾರಾವಾಹಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಹೌದು!!ಕಥಾನಾಯಕ ಆಕಾಶ್‌ಗೆ ಹೆಣ್ಣು ಹುಡುಕಿ ಮದುವೆ ಶಾಸ್ತ್ರ ಶುರುವಾಗುತ್ತಿರುವ ಹೊತ್ತಲ್ಲೇ ನಾಯಕನನ್ನು ಬದಲಾವಣೆ ಮಾಡಲಾಗಿದೆ.

ಇದೀಗ ಸೀರಿಯಲ್‌ನ ಮುಖ್ಯಘಟ್ಟದಲ್ಲಿ ನಾಯಕನಾಗಿ ನಟಿಸುತ್ತಿದ್ದ ವಿಶ್ವನಾಥ್‌ ಹಾವೇರಿ ಬದಲಿಗೆ ಖ್ಯಾತ ಯೂಟ್ಯೂಬರ್‌ ವರುಣ್‌ ಆರಾಧ್ಯಾ ನಾಯಕನ ಸ್ಥಾನಕ್ಕೆ ಭರ್ತಿ ಪಡೆದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮೂಲಕವೇ ಗಮನ ಸೆಳೆದ ವರುಣ್ ಆರಾಧ್ಯ ಮೊತ್ತ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಪಾತ್ರಕ್ಕೆ ತಕ್ಕ ಹಾಗೆ ಕಥಾನಾಯಕ ತುಂಬ ಚಿಕ್ಕವನು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪ್ರಶ್ನೆಗಳು ಕೇಳಿಬಂದದ್ದು ಮಾತ್ರವಲ್ಲದೇ ನಾಯಕನ ಬದಲಾವಣೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಬೃಂದಾವನ ನಾಯಕನನ್ನು ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Ration Card: ರೇಷನ್‌ ಕಾರ್ಡ್‌ ದಾರರೇ ಅಲರ್ಟ್! ನಿಮ್ಮಿಂದ ಈ ತಪ್ಪಾಗಿದ್ದರೂ ಅನ್ನಭಾಗ್ಯ ಸಿಗಲ್ಲ !

You may also like

Leave a Comment