Home » Chetan Ahimsa: ಮೀಸಲಾತಿ ಇರುತ್ತಿದ್ದರೆ ಭಾರತ ವಿಶ್ವಕಪ್ ಗೆಲ್ಲುತ್ತಿತ್ತು: ಮತ್ತೆ ನಾಲಿಗೆ ಹರಿಬಿಟ್ಟ ಚೇತನ್ ಅಹಿಂಸಾ!!

Chetan Ahimsa: ಮೀಸಲಾತಿ ಇರುತ್ತಿದ್ದರೆ ಭಾರತ ವಿಶ್ವಕಪ್ ಗೆಲ್ಲುತ್ತಿತ್ತು: ಮತ್ತೆ ನಾಲಿಗೆ ಹರಿಬಿಟ್ಟ ಚೇತನ್ ಅಹಿಂಸಾ!!

1 comment
Chetan Ahimsa

Chetan Ahimsa: ಸದಾ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ನಟ ಚೇತನ್ ( Chethan Ahimsa) ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು, ಕ್ರಿಕೆಟ್ ಅಭಿಮಾನಿಗಳು ಭಾರತದ ಸೋಲಿನ ನೋವಿನಿಂದ ನಿರಾಶರಾಗಿದ್ದಾರೆ. ಇದರ ನಡುವೆ, ನಟ ಚೇತನ್ ಅಹಿಂಸಾ(Chetan Ahimsa) ಅವರು ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತ ತಂಡ ಸೋಲು ಕಂಡ ಬಳಿಕ ಸಾಮಾಜಿಕ ಜಾಲತಾಣವಾದ ಟ್ವಿಟರ್ ಎಕ್ಸ್ನಲ್ಲಿ ನಟ ಚೇತನ್ ಟ್ವೀಟ್ ಮಾಡಿದ್ದಾರೆ. “ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದ್ದು, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಫೈನಲ್ನಲ್ಲಿ ಸುಲಭವಾಗಿ ವಿಶ್ವಕಪ್ ಗೆಲ್ಲುತ್ತಿತ್ತು” ಎಂದು ಚೇತನ್ ತಮ್ಮ ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಗೆ ಪರ-ವಿರೋಧ ತರಹೇವಾರಿ ಕಾಮೆಂಟ್ಸ್ ಬರುತ್ತಿದೆ.

 

ಇದನ್ನು ಓದಿ: Harish poonja: ಸಿಎಂ ವಿರುದ್ಧ ಹರೀಶ್ ಪೂಂಜ ಆಕ್ಷೇಪಾರ್ಹ ಹೇಳಿಕೆ : ಮಹತ್ವದ ಸೂಚನೆ ನೀಡಿದ ಹೈಕೋರ್ಟ್

You may also like

Leave a Comment