Home » Skin Care: ಕತ್ತಿನ ಭಾಗದಲ್ಲಿ ಕಪ್ಪಾಗಿದ್ದರೆ, ಈ ಮನೆ ಮದ್ದು ಬಳಸಿ, ಮಿರಿ ಮಿರಿ ಮಿಂಚುವ ಕಾಂತಿ ಪಡೆಯಿರಿ!

Skin Care: ಕತ್ತಿನ ಭಾಗದಲ್ಲಿ ಕಪ್ಪಾಗಿದ್ದರೆ, ಈ ಮನೆ ಮದ್ದು ಬಳಸಿ, ಮಿರಿ ಮಿರಿ ಮಿಂಚುವ ಕಾಂತಿ ಪಡೆಯಿರಿ!

4 comments
Skin Care

Skin Care: ಆರೋಗ್ಯವೇ ಭಾಗ್ಯ(Health) ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಲು ನಾನಾ ರೀತಿಯ ಹರಸಾಹಸ ಪಡುವುದು ಸಹಜ. ಕೆಲವು ಮಹಿಳೆಯರು ಬೆಳ್ಳಗಿದ್ದರೂ ಕೂಡ ಕುತ್ತಿಗೆ ಕಪ್ಪು ಇರುವುದನ್ನು ನೋಡಿರಬಹುದು. ನಮ್ಮ ಮನೆಯ ಸುತ್ತಮತ್ತಲಿನಲ್ಲೇ ಸಿಗುವ ಕೆಲ ವಸ್ತುಗಳ ಬಳಕೆಯಿಂದ ಕುತ್ತಿಗೆಯ ಕಪ್ಪು ಕಲೆಗಳನ್ನು ತೊಡೆದು ಹಾಕಬಹುದು.ಮುಖದ ಮೇಲೆ ಕಲೆಗಳು, ಕುತ್ತಿಗೆಯ ಭಾಗದಲ್ಲಿ ಕಪ್ಪು, ಅಲ್ಲಲ್ಲಿ ಗುಳ್ಳೆಗಳಿದ್ದರೆ ಅದು ಮುಖದ ಸೌಂದರ್ಯವನ್ನೂ ಹಾಳು ಮಾಡುತ್ತವೆ. ಅದರಲ್ಲೂ ಕುತ್ತಿಗೆಯ ಭಾಗದ ಕಪ್ಪನ್ನು ಹೋಗಲಾಡಿಸಲು ಹೆಚ್ಚಿನ ಮಂದಿ ನಾನಾ ಕಸರತ್ತು ಮಾಡುವುದು ಸಹಜ. ನಾವು ಹೇಳುವ ಟಿಪ್ಸ್ ಬಳಸಿ ಪರಿಹಾರ ನೀವೇ ನೋಡಿ!!

ಕುತ್ತಿಗೆ ಭಾಗದ ಕಪ್ಪು ಹೋಗಲಾಡಿಸುವ ಸುಲಭ ಮನೆ ಮದ್ದುಗಳು ಇಲ್ಲಿವೆ ನೋಡಿ!!
* ಬೇಕಿಂಗ್ ಸೋಡಾ
. ಬೇಕಿಂಗ್ ಸೋಡಾ ನಮ್ಮ ಚರ್ಮದ ಮೇಲಿನ ಕೊಳೆ ತೊಡೆದು ಹಾಕಿ, ನಮ್ಮ ಚರ್ಮದೊಳಗಿಂದ ಪೌಷ್ಟಿಕ ಸತ್ವಗಳನ್ನು ಪಡೆಯಲು ಸಹಕರಿಸುತ್ತದೆ.ಅಷ್ಟೇ ಅಲ್ಲದೆ, ಬೇಕಿಂಗ್ ಸೋಡಾ ನಿಮ್ಮ ಕುತ್ತಿಗೆ ಭಾಗದಲ್ಲಿರುವ ಸತ್ತ ಜೀವ ಕೋಶಗಳನ್ನು ತೆಗೆದು ಹಾಕುತ್ತದೆ. ಇದಕ್ಕಾಗಿ ನೀವು ನೀರಿನಲ್ಲಿ ಎರಡರಿಂದ ಮೂರು ಟೇಬಲ್ ಚಮಚ ಬೇಕಿಂಗ್ ಸೋಡಾ ಹಾಕಿ ಪೇಸ್ಟ್ ಸಿದ್ದ ಮಾಡಿಕೊಂಡು ಕುತ್ತಿಗೆ ಭಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಹಾಗೆ ಬಿಡಿ. ಇದು ಒಣಗಿದ ನಂತರದಲ್ಲಿ ನೀರಿನಲ್ಲಿ ನಿಮ್ಮ ಬೆರಳುಗಳನ್ನು ಅದ್ದಿ ಇದನ್ನು ಒರೆಸಿ, ಇದಾದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ದಿನನಿತ್ಯ ಹೀಗೆ ಮಾಡುವುದರಿಂದ ಕುತ್ತಿಗೆ ಭಾಗದಲ್ಲಿ ಕಪ್ಪು ಕಲೆ ಮಾಯವಾಗಲಿದೆ. ಆದರೆ ಬೇಕಿಂಗ್ ಸೋಡಾ ಬಳಸಿದ ನಂತರ ನಿಮ್ಮ ಚರ್ಮವನ್ನು ಮಾಯಿಶ್ಚರೈಸ್ ಮಾಡಬೇಕು.

* ಕಡಲೆ ಹಿಟ್ಟು
ಸೌಂದರ್ಯಕ್ಕಾಗಿ ಕಡಲೆಹಿಟ್ಟು ಬಳಸುವುದು ಸಹಜ. ಕಡಲೆ ಹಿಟ್ಟು ನಿಮ್ಮ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುವುದಲ್ಲದೆ ಕುತ್ತಿಗೆಯ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಚರ್ಮದ ಭಾಗದಲ್ಲಿ ಕಂಡುಬರುವ ಧೂಳು, ಕೊಳೆಯನ್ನು ತೊಡೆದು ಹಾಕುತ್ತದೆ. ನಿಮ್ಮ ಕುತ್ತಿಗೆ ಭಾಗದಲ್ಲಿ ಕಪ್ಪು ಬಣ್ಣ ತೊಡೆದು ಹಾಕಲು, ನೀವು ಎರಡು ಟೇಬಲ್ ಚಮಚ ಕಡಲೆ ಹಿಟ್ಟು ತೆಗೆದುಕೊಂಡು, ಅದಕ್ಕೆ ಅರ್ಧ ಟೀ ಚಮಚ ನಿಂಬೆಹಣ್ಣಿನ ರಸ ಸೇರಿಸಿಕೊಳ್ಳಿ. ಇದರ ಜೊತೆಗೆ ಸ್ವಲ್ಪ ಅರಿಶಿನ ಮತ್ತು ರೋಜ್ ವಾಟರ್ ಇಲ್ಲವೇ ಹಾಲು ಹಾಕಿ. ಇದನ್ನು ಮಿಕ್ಸ್ ಮಾಡಿ ಅದನ್ನು ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆ ಬಿಡಿ. ವಾರದಲ್ಲಿ ಉತ್ತಮ ಫಲಿತಾಂಶ ನಿಮಗೆ ಸಿಗಲಿದೆ.

* ಆಲೂಗಡ್ಡೆ ರಸ
ಕುತ್ತಿಗೆ ಭಾಗದ ಕಪ್ಪು ಕಲೆಗಳನ್ನು ಹೋಗಲಾ ಡಿಸಲು ಮತ್ತು ಮುಖದ ಮೇಲಿನ ಮೊಡವೆಗಳ ನಿವಾರಣೆಗೆ ಆಲೂಗೆಡ್ಡೆ ರಸ ಬಳಕೆ ಮಾಡಬಹುದು. ಇದರ ಜೊತೆಗೆ ಟೊಮ್ಯಾಟೋ ರಸ ಕೂಡ ಬಳಸಬಹುದು. ಇದಕ್ಕಾಗಿ, ಒಂದು ಸಣ್ಣ ಆಲೂಗಡ್ಡೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಆನಂತರ ತುರಿದು ರಸ ತೆಗೆದುಕೊಂಡು ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದರಲ್ಲಿ ಇದನ್ನು ಅದ್ದಿಕೊಂಡು ಕಪ್ಪು ಬಣ್ಣದಿಂದ ಕೂಡಿರುವ ಕುತ್ತಿಗೆಯ ಮೇಲೆ ಹಚ್ಚಿ , ಸ್ವಲ್ಪ ಹೊತ್ತು ಬಿಟ್ಟು ಆನಂತರ ಊರು ಬೆಚ್ಚಗೆ ನೀರಿನಲ್ಲಿ ತೊಳೆದರೆ ಕಪ್ಪು ಕಲೆಗಳು ಮಾಯವಾಗಿ ಬಿಡುತ್ತದೆ.

Sullia: ತಂದೆ-ತಾಯಿಯ ಮೇಲೆ ಮಗನಿಂದ ಕತ್ತಿಯಿಂದ ಹಲ್ಲೆ ,ಆರೋಪಿ ಬಂಧನ

ಇದನ್ನು ಓದಿ: EPFO Update: ಇಪಿಎಫ್ ಖಾತೆಗೆ ನಿಮ್ಮ ಹಣ ಜಮಾ ಆಗುತ್ತಿದೆಯೇ? ಅದನ್ನು ತಿಳಿಯೋದು ಹೇಗೆ ಗೊತ್ತಾ

You may also like

Leave a Comment