Home » Mitchell Marsh World Cup Viral Photo: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಫೋಸ್ ಕೊಟ್ಟ ಮಾರ್ಷ್: ಆಟಗಾರನಿಗೆ ಭಾರತೀಯರಿಂದ ಖಡಕ್ ಕ್ಲಾಸ್!

Mitchell Marsh World Cup Viral Photo: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಫೋಸ್ ಕೊಟ್ಟ ಮಾರ್ಷ್: ಆಟಗಾರನಿಗೆ ಭಾರತೀಯರಿಂದ ಖಡಕ್ ಕ್ಲಾಸ್!

1 comment
Mitchell Marsh World Cup Viral Photo

Mitchell Marsh World Cup Viral Photo: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ (Australia Cricket Team) ಚಾಂಪಿಯನ್ ಆಗಿ ಹೊಮ್ಮಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಭಾರತ ವಿರುದ್ಧ ಗೆದ್ದು ಬೀಗಿದ ಕಾಂಗರೂ ಪಡೆ ಆರನೇ ಬಾರಿ ಟ್ರೋಫಿ ಗೆದ್ದ ಹೆಮ್ಮೆಯ ಗರಿಮೆಯನ್ನು ತನ್ನೊಡಲಿಗೆ ಬಾಚಿಕೊಂಡಿದೆ. ಟ್ರೋಫಿ ಗೆದ್ದ ಬಳಿಕ ಕೆಲ ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ ಜೋರಾಗಿದೆ.

ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ಅವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ವಿಶ್ವಕಪ್ ಟ್ರೋಫಿಯ ಮೇಲೆ ಎರಡು ಪಾದಗಳನ್ನು ಫೋಟೋ ಇಟ್ಟು ವಿಶ್ರಾಂತಿ ಮಾಡುವ ದೃಶ್ಯದ ಫೋಟೋಗಳು ವೈರಲ್ ಆಗಿದೆ. ಫೋಟೋವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಮಾರ್ಷ್ ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಂದಿ ಮಾರ್ಷ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರೋಫಿಗೆ ಈ ರೀತಿ ‘ಅಗೌರವ’ ತೋರುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ. ಇದರ ಜೊತೆಗೆ ಸಚಿನ್ ತೆಂಡೂಲ್ಕರ್ ಟ್ರೋಫಿಗೆ ಗೌರವ ನೀಡುವ ಫೋಟೋ ಹಂಚಿಕೊಂಡು ಮಾರ್ಷ್ಗೆ ತಿರುಗೇಟು ನೀಡುತ್ತಿದ್ದಾರೆ.ಮಾರ್ಷ್ ಅವರು ತಮ್ಮ ಚಿನ್ನದ ಪದಕವನ್ನು ತೋರಿಸುವ ಜೊತೆಗೆ ಎರಡೂ ಕಾಲುಗಳನ್ನು ಟ್ರೋಫಿಯ ಮೇಲೆ ಇಟ್ಟಿದ್ದಾರೆ. ಇದನ್ನು ಕಂಡು ನೆಟ್ಟಿಗರು “ಅದು ವಿಶ್ವಕಪ್, ಸ್ವಲ್ಪ ಗೌರವ ಕೊಡಿ” ಎಂದು ಕಾಮೆಂಟ್ ಮಾಡಿದ್ದಾರೆ. “ವಿಶ್ವಕಪ್ ಟ್ರೋಫಿಗೆ ಸ್ವಲ್ಪ ಗೌರವ ತೋರಿಸಿ. ಈ ಟ್ರೋಫಿಯ ಮೌಲ್ಯದ ಬಗ್ಗೆ ಭಾರತೀಯ ಅಭಿಮಾನಿಗಳು ಅಥವಾ ಟೀಮ್ ಇಂಡಿಯಾವನ್ನು ಕೇಳಿ,”ಎಂದು ನೆಟ್ಟಿಜನ್ಸ್ ಕಾಂಗರೂ ಪಡೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

https://x.com/reverb_cia/status/1726402962149290254?s=20

 

ಇದನ್ನು ಓದಿ: ನಡೆದೇ ಹೋಯ್ತು ಬಿಗ್‌ಬಾಸ್‌ ಮನೆಯೊಳಗೆ ಬೆಲ್ಲಿ ರೊಮ್ಯಾನ್ಸ್‌, ನಟಿಯ ಸೀರೆಯೆತ್ತಿ ಸೊಂಟಕ್ಕೆ ಮುತ್ತಿನ ಸುರಿಮಳೆ !

You may also like

Leave a Comment