Home » Electricuted Case: ವಿದ್ಯುತ್‌ ಸ್ಪರ್ಶದಿಂದ ತಾಯಿ-ಮಗು ಸಾವು; ಸಚಿವ ಜಾರ್ಜ್‌ ನೀಡಿದ್ರು ಬಿಗ್‌ ಅಪ್ಡೇಟ್‌, ಸಾವಿಗೆ ಕಾರಣ ಬಯಲು!!!

Electricuted Case: ವಿದ್ಯುತ್‌ ಸ್ಪರ್ಶದಿಂದ ತಾಯಿ-ಮಗು ಸಾವು; ಸಚಿವ ಜಾರ್ಜ್‌ ನೀಡಿದ್ರು ಬಿಗ್‌ ಅಪ್ಡೇಟ್‌, ಸಾವಿಗೆ ಕಾರಣ ಬಯಲು!!!

by Mallika
3 comments
Electrocuted

Electricuted Case : ಬಸ್ಸಿನಿಂದ ಇಳಿದು ವೈಟ್‌ಫೀಲ್ಡ್‌ ಬಳಿ ನಡೆದು ಬರುತ್ತಿದ್ದ ಸಂದರ್ಭದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ಲೈನ್‌ ತುಳಿದು ತಾಯಿ, ಮಗು ಸಜೀವ ದಹನ ಆಗಿದ್ದ ಪ್ರಕರಣಕ್ಕೆ ಹೊಸ ತಿರುವೊಂದು ದೊರಕಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್‌ (Energy Minister KJ George) ಅವರು ಸುದ್ದಿಗೋಷ್ಠಿ ನಡೆಸಿ ಈ ಸಾವಿಗೆ ಇಲಿ ಕಾರಣ ಎಂದು ಹೇಳಿದ್ದಾರೆ.

B Y Vijayendra: ಬಿ ವೈ ವಿಜಯೇಂದ್ರಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್ !!

ಔದುಂಬರ ಹೋಮ್ಸ್‌ ಅಪಾರ್ಟ್ಮೆಂಟ್‌ನಲ್ಲಿ ಖಾಸಗಿ ಟ್ರಾನ್ಸ್‌ಫಾರ್ಮರ್‌ನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಇಲಿ ಹೋಗಿ ಹಾಳು ಮಾಡಿದ್ದರಿಂದ ಟ್ರಿಪ್‌ ಆಗಿ ಈ ಅವಘಡ ಉಂಟಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ವಿದ್ಯುತ್‌ ಅವಘಡ ಆಗಬಾರದಿತ್ತು. ತನಿಖೆಗಾಗಿ ನಾಲ್ಕು ಕಮಿಟಿಗಳನ್ನು ಮಾಡಿದ್ದೇವೆ. ಐದು ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ. ಚೀಫ್‌ ಎಲೆಕ್ಟ್ರಿಕಲ್‌ ಇನ್ಸ್‌ಪೆಕ್ಟೋರೇಟ್‌, ಬೆಸ್ಕಾಂ, ಸ್ವತಂತ್ರ ಏಜೆನ್ಸಿಯಿಂದ ತನಿಖೆ ನಡೆಸಲಾಗುತ್ತದೆ. ಸುಮಂತ್‌ ಎಂಬ ನಿವೃತ್ತ ಇಂಜಿನಿಯರ್‌ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ರಾಜ್ಯಾದ್ಯಂತ ಎಚ್ಚರ ವಹಿಸಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದೇನೆ. ಹಾಗೆನೇ ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ಚೆಕ್‌ ನೀಡಲಾಗುತ್ತದೆ ಎಂದು ಕೆ.ಜೆ.ಜಾರ್ಜ್‌ ತಿಳಿಸಿದರು.

ಔದುಂಬರ ಅಪಾರ್ಟ್ಮೆಂಟ್‌ನಲ್ಲಿ ಡಿಸ್ಟ್ರಿಬ್ಯೂಷನ್‌ ಟ್ರಾನ್ಸ್‌ಫಾರ್ಮರ್‌ ಬಾಕ್ಸ್‌ಗೆ ಇಲಿ ನುಗ್ಗಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಇದರಿಂದ ಕಾಡುಗೋಡಿ ಉಪಕೇಂದ್ರದ ಫೀಡರ್‌ ಟ್ರಿಪ್‌ ಆಗಿತ್ತು. ಫೀಡರನ್ನು ಟೆಸ್ಟ್‌ ಚಾರ್ಜ್‌ ಮಾಡಲಾಗಿದೆ. ಈ ವೇಳೆ ವಿದ್ಯುತ್‌ ಪ್ರವಹಿಸುವುದು ತಿಳಿದು ಬಂದಿಲ್ಲ. ತಾಯಿ ಮಗು ಬೆಳಗ್ಗೆ 5.30 ಕ್ಕೆ ತುಂಡಾದ ವಿದ್ಯುತ್‌ ತಂತಿ ತುಳಿದಾಗ ವಿದ್ಯುತ್‌ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ಇಂಧನ ಇಲಾಖೆ ಎಂಡಿ ಮಹಂತೇಶ್‌ ಬೀಳಗಿ ಹೇಳಿದ್ದಾರೆ.

You may also like

Leave a Comment