Home » Karnataka government: ‘ಅನ್ನಭಾಗ್ಯ’ ಹೆಸರಲ್ಲಿ ರಾಜ್ಯದ ಜನತೆಗೆ ಟೋಪಿ ಹಾಕಿದ ಸರ್ಕಾರ – ಬಿಲ್ಲೊಂದರಿಂದ ಬಯಲಾಯ್ತು ‘ಗ್ಯಾರಂಟಿ’ ನಾಟಕದ ಅಸಲಿಯತ್ತು !!

Karnataka government: ‘ಅನ್ನಭಾಗ್ಯ’ ಹೆಸರಲ್ಲಿ ರಾಜ್ಯದ ಜನತೆಗೆ ಟೋಪಿ ಹಾಕಿದ ಸರ್ಕಾರ – ಬಿಲ್ಲೊಂದರಿಂದ ಬಯಲಾಯ್ತು ‘ಗ್ಯಾರಂಟಿ’ ನಾಟಕದ ಅಸಲಿಯತ್ತು !!

1 comment
Karnataka government

Karnataka government: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಪಂಚ ಗ್ಯಾರೆಂಟಿಗಳನ್ನು ಘೋಷಿಸಿದೆ. ಅದರಲ್ಲಿ ಅನ್ನಭಾಗ್ಯವೂ ಕೂಡ ಒಂದು. ಇದುವರೆಗೂ ಕರ್ನಾಟಕ ಸರ್ಕಾರ(Karnataka government)ಅನ್ನ ಭಾಗ್ಯ ಯೋಜನೆಯು ತನ್ನದೇ, ತಾನೇ ಇದಕ್ಕೆ ಅಕ್ಕಿಯನ್ನು ಹೊಂದಿಸಿ ಉಚಿತವಾಗಿ ವಿತರಿಸುವುದು ಎಂದು ಹೇಳುತ್ತಾ ಬಂದಿತ್ತು. ಆದರೆ ಇದೀಗ ‘ಗ್ಯಾರಂಟಿ’ ನಾಟಕವೊಂದು ಬಯಲಾಗಿದೆ.

ರಾಜ್ಯದಲ್ಲಿ ಆಡಳಿತ ರೂಢವಾಗಿರುವ ಕಾಂಗ್ರೆಸ್ ಸರ್ಕಾರದಿಂದ 2ನೇ ಗ್ಯಾರಂಟಿಯಾಗಿ ಜಾರಿಗೊಳಿಸಲಾದ ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯದ ಪಾಲು ಶೂನ್ಯ ಎಂಬುದು ಗೊತ್ತಾಗಿದೆ. ಯಾಕೆಂದರೆ ಇದೀಗ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಎಷ್ಟು ಹಾಗೂ ರಾಜ್ಯ ಸರ್ಕಾರದ ಪಾಲು ಎಷ್ಟೆಂಬುದನ್ನು ಕೇಂದ್ರದ ರಶೀದೆಯು ಬಟಾಬಯಲು ಮಾಡಿದೆ.

ಹೌದು, ಪಡಿತರವನ್ನು ಪಡೆಯುವ ಎಲ್ಲರಿಗೂ ಈಗ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ 5 ಕೆ.ಜಿ. ಅಕ್ಕಿಯನ್ನು ಮಾತ್ರ ವಿತರಣೆ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರದ ಪಾಲು ಶೂನ್ಯ ಎಂಬುದನ್ನು ರಶೀದಿಯಲ್ಲಿ ನಮೂದಿಸಿ ನೀಡಲಾಗುತ್ತಿದೆ. ಅಂದಹಾಗೆ ಇದೀಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪಡಿತರ ಧಾನ್ಯಗಳಾದ ಅಕ್ಕಿ, ರಾಗಿ, ಗೋಧಿ ಅಥವಾ ಜೋಳದ ಪ್ರಮಾಣ ಎಷ್ಟೆಂಬುದನ್ನು ಸರ್ಕಾರದಿಂದಲೇ ರಶೀದಿ ಮೂಲಕ ಪ್ರಿಂಟ್‌ ಮಾಡಿ ಕೊಡಲಾಗುತ್ತಿದೆ. ಇದರಿಂದಾಗಿ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಈ ಅನ್ನಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲವೇ? ಎಂಬ ಅನುಮಾನ ಮೂಡುವಂತಾಗಿದೆ.

ಏನಿದು ಬಿಲ್ ಸಿಸ್ಟಮ್?
ಇರದೀಗಾ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಗ್ರಾಹಕರಿಗೆ ಪಡಿತರ ವಿತರಣೆ ವೇಳೆ ಹೊಸ ಬಿಲ್‌​ ಸಿಸ್ಟಮ್​ ಜಾರಿ ಮಾಡಿದೆ. ಅದರಲ್ಲಿ, ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಹೊಸ ಪ್ರಿಂಟೆಡ್​ ಬಿಲ್​ ನೀಡಲಾಗುತ್ತಿದೆ. ಈ ಬಿಲ್‌ನಲ್ಲಿ ಸರ್ಕಾರದಿಂದ ವಿತರಣೆ ಮಾಡುವ ಅಕ್ಕಿಯ ವಿವರ, ಕೇಂದ್ರದ ಅನುದಾನದ ವಿವರ ಮುದ್ರಣ ಮಾಡಲಾಗುತ್ತಿದೆ. ಅದರಲ್ಲಿ ಕೇಂದ್ರ ಸರ್ಕಾರದ ಪಾಲು ಎಷ್ಟು ಹಾಗೂ ರಾಜ್ಯ ಸರ್ಕಾರದ ಪಾಲು ಎಷ್ಟೆಂಬುದನ್ನು ತಿಳಿಸಲಾಗಿದೆ.

ಅಂದಹಾಗೆ ಜನರಿಗೆ ನೀಡುವ ಪಡಿತರ ಅಕ್ಕಿ ಕೇಂದ್ರ ಸರ್ಕಾರದ ಅನುದಾನ ಎಂದು ಮುದ್ರಣ ಮಾಡಲಾಗಿದೆ. ಅಕ್ಕಿ ವಿತರಣೆಯಲ್ಲಿ ರಾಜ್ಯ ಸರ್ಕಾರದ ಅನುದಾನದ ಪಾಲು ಶೂನ್ಯವಾಗಿದೆ. ರಾಜ್ಯ ಸರ್ಕಾರದ ಪಾಲಿನ ಅನುದಾನ ಗ್ರಾಹಕರ ಖಾತೆಗೆ ನೇರವಾಗಿ ಹಣದ ಮೂಲಕ ಸಂದಾಯವಾಗುತ್ತಿದೆ. ಹಾಗಿದ್ರೆ ಇದುವರೆಗೂ ಕಾಂಗ್ರೆಸ್ ಸರ್ಕಾರ 5 ಕೆಜಿ ಉಚಿತ ಅಕ್ಕಿ ನೀಡುತ್ತುರುವುದು ಸುಳ್ಳಾ? ಕೇಂದ್ರದ ಅಕ್ಕಿಯನ್ನೇ ತಾನು ನೀಡುವುದಾಗಿ ನಾಟಕವಾಡಿತ್ತಾ? ಎಂಬ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: Newyork: ಹಗಲಲ್ಲಿ ಪೋಲಿಸ್ ಆಗಿರೋ ಈ ಸುಂದ್ರಿ ರಾತ್ರಿ ನೀಲಿ ಚಿತ್ರ ತಾರೆ ಆಗ್ತಾಳೆ , ಗೊತ್ತಾಗಿದ್ದೇ ಒಂದು ರೋಚಕ !!

You may also like

Leave a Comment