Home » Police Constable Recruitment: ಪೋಲೀಸ್ ಇಲಾಖೆಯಲ್ಲಿ ಉದ್ಯೋಗ ಪರ್ವ- ಬರೋಬ್ಬರಿ 75, 000 ಕಾನ್ಸ್ ಟೇಬಲ್ ಹುದ್ದೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ!!

Police Constable Recruitment: ಪೋಲೀಸ್ ಇಲಾಖೆಯಲ್ಲಿ ಉದ್ಯೋಗ ಪರ್ವ- ಬರೋಬ್ಬರಿ 75, 000 ಕಾನ್ಸ್ ಟೇಬಲ್ ಹುದ್ದೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ!!

1 comment
Police Constable Recruitment

Police Constable Recruitment: ಜನರಲ್ ಡ್ಯೂಟಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳಿಗೆ ಸುವರ್ಣ (Police Constable Recruitment) ಅವಕಾಶ ಇಲ್ಲಿದೆ. ಹೌದು, ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್ಸಿ) ಜನರಲ್ ಡ್ಯೂಟಿ (ಜಿಡಿ) ಕಾನ್ಸ್ಟೇಬಲ್ ಹುದ್ದೆಗಳಿಗೆ ನವೆಂಬರ್ 24 ರಿಂದ ಡಿಸೆಂಬರ್ 28 ರವರೆಗೆ ಈ ಹುದ್ದೆಗಳಿಗೆ ಅರ್ಜಿ ಸ್ವೀಕಾರ ಮಾಡಲಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು 2024 ರ ಫೆಬ್ರವರಿ ತಿಂಗಳಲ್ಲಿ ನಡೆಸಲಾಗುತ್ತದೆ.

ಜಿಡಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ – ssc.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಜಿಡಿ ಕಾನ್ಸ್ಟೇಬಲ್ ಅರ್ಜಿ ಪ್ರಕ್ರಿಯೆ ಲಿಂಕ್ ಮೇಲೆ ಕ್ಲಿಕ್ ಮಾಡಿ, ನೋಂದಣಿ ಫಾರ್ಮ್ ನಲ್ಲಿ ವಿವರಗಳನ್ನು ನಮೂದಿಸಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಿ. ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಬಳಸಲು ಜಿಡಿ ಕಾನ್ಸ್ಟೇಬಲ್ ಅರ್ಜಿ ನಮೂನೆ ಪಿಡಿಎಫ್ ಅನ್ನು ಉಳಿಸಿ.

ಎಸ್‌ಎಸ್ಸಿ ಜಿಡಿ ಕಾನ್ಸ್ಟೇಬಲ್ ನೇಮಕಾತಿ 2024 ಸಾಲಿನ ಅರ್ಜಿ ಸಲ್ಲಿಸುವ ವಿಧಾನ :
ಜಿಡಿ ಕಾನ್ಸ್ಟೇಬಲ್ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಿ- ssc.nic.in
ನೋಂದಣಿ ನಮೂನೆಯಲ್ಲಿ ವಿವರಗಳನ್ನು ನಮೂದಿಸಿ ನಂತರ ದಾಖಲೆಗಳನ್ನು ಅಪ್ ಲೋಡ್ ಮಾಡಿ. ಜಿಡಿ ಕಾನ್ಸ್ಟೇಬಲ್ ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ಬಳಿಕ ಜಿಡಿ ಕಾನ್ಸ್ಟೇಬಲ್ ಸಲ್ಲಿಸಿದ ನೋಂದಣಿ ಫಾರ್ಮ್ ಡೌನ್ಲೋಡ್ ಮಾಡಿ ಮತ್ತು ಹಾರ್ಡ್ ಕಾಪಿ ತೆಗೆದುಕೊಳ್ಳಿ.

ಅರ್ಹತಾ ಮಾನದಂಡಗಳು:
ಜಿಡಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೆಟ್ರಿಕ್ಯುಲೇಷನ್ (10 ನೇ ತರಗತಿ) ಉತ್ತೀರ್ಣ ಪ್ರಮಾಣಪತ್ರದ ಅಗತ್ಯವಿದೆ. ಶೈಕ್ಷಣಿಕ ಅರ್ಹತೆಯ ವಿವರಗಳಿಗಾಗಿ, ಅಧಿಕೃತ ವೆಬ್ಸೈಟ್- ssc.nic.in ಗೆ ಭೇಟಿ ನೀಡಿ.

ವಯೋಮಿತಿ:
ಜಿಡಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 23 ವರ್ಷ ಮೀರಿರಬಾರದು. ಮೀಸಲಾತಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಪೇಪರ್ ಮಾದರಿ:
ಜಿಡಿ ಕಾನ್ಸ್ಟೇಬಲ್ ಪೇಪರ್ ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ – ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಜನರಲ್ ನಾಲೆಡ್ಜ್ ಅಂಡ್ ಅವೇರ್ನೆಸ್, ಎಲಿಮೆಂಟರಿ ಮ್ಯಾಥಮ್ಯಾಟಿಕ್ಸ್ ಮತ್ತು ಇಂಗ್ಲಿಷ್ ಅಥವಾ ಹಿಂದಿ.

ಅರ್ಜಿ ಶುಲ್ಕ:
ಜಿಡಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಶುಲ್ಕ 100 ರೂ. ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.

ಇದನ್ನು ಓದಿ: Annabhagya: ಅನ್ನಭಾಗ್ಯದ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್- ಸಚಿವ ಮುನಿಯಪ್ಪ ಘೋಷಣೆ!!

You may also like

Leave a Comment