Home » Annabhagya: ಅನ್ನಭಾಗ್ಯದ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್- ಸಚಿವ ಮುನಿಯಪ್ಪ ಘೋಷಣೆ!!

Annabhagya: ಅನ್ನಭಾಗ್ಯದ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್- ಸಚಿವ ಮುನಿಯಪ್ಪ ಘೋಷಣೆ!!

1 comment
Annabhagya

Annabhagya Yojana: ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಪಡಿತದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ (Annabhagya Yojana) ಸ್ಮಾರ್ಟ್‌ ಕಾರ್ಡ್‌ ಕೊಡಲಾಗುವುದು. ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ವಿತರಿಸಲಾಗುವುದು. ಇದು ಬಹು ಉಪಯೋಗಿ ಕಾರ್ಡ್‌ ಆಗಲಿದೆ’ ಎಂದು ತಿಳಿಸಿದರು.

ಅಲ್ಲದೇ ಈಗಾಗಲೇ ‘ಅನ್ನಭಾಗ್ಯ ಯೋಜನೆಯಡಿ 1.13 ಕೋಟಿ ಕಾರ್ಡ್‌ದಾರರಿಗೆ ಅಂದರೆ ಸುಮಾರು ₹ 4 ಕೋಟಿ ಜನರಿಗೆ ಹಣ ಸಂದಾಯ ಮಾಡಿದ್ದೇವೆ ಎಂದರು. ಶೇ 90ರಷ್ಟು ಅಧಿಕ ಕಾರ್ಡ್‌ದಾರರಿಗೆ ಈಗಾಗಲೇ ಹಣ ತಲುಪಿದೆ. ಇನ್ನೂ ಏಳು ಲಕ್ಷ ಕಾರ್ಡ್‌ದಾರರು ಬ್ಯಾಂಕ್‌ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆ ಇದೆ. ಅಂಥವರಿಗೆ ಹಣ ತಲುಪಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಶೇ 100 ಸಾಧನೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ‘ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಅವರು ಹೇಳಿದಂತೆ ನಾನು ಕೇಳುತ್ತೇನೆ. ಎಂದರು.

 

ಇದನ್ನು ಓದಿ: ಪ್ರಯಾಣದಲ್ಲಿ ಆರ್ಥಿಕ ಲಾಭ ಭರಪೂರವಾಗಲಿದೆ, ಅಧಿಕಾರಿಗಳ ಕೃಪಕಾಟಕ್ಷ ನಿಮ್ಮ ಮೇಲೆ ಇಂದು ಸದಾ ಇರುತ್ತದೆ!!!

You may also like

Leave a Comment