Home » Maharashtra Shocker: ಹೆಂಡತಿ ನೀಡಿದ ಪಂಚ್ ಗೆ ಗಂಡನ ಹಲ್ಲು ಉದುರೋಗಿ, ಪ್ರಾಣ ಬಿಟ್ಟ ಗಂಡ!!!

Maharashtra Shocker: ಹೆಂಡತಿ ನೀಡಿದ ಪಂಚ್ ಗೆ ಗಂಡನ ಹಲ್ಲು ಉದುರೋಗಿ, ಪ್ರಾಣ ಬಿಟ್ಟ ಗಂಡ!!!

1 comment
Maharashtra Shocker

Maharashtra Shocker: ಗಂಡ ಹೆಂಡತಿ ಎಂದ ಮೇಲೆ ಜಗಳ, ಮುನಿಸು ಇರುವುದು ಸಹಜ. ಆದರೆ, ಜಗಳ ಕೋಪ ಹೆಚ್ಚಾಗಿ ಮನಸ್ತಾಪ ಉಂಟಾಗಿ ಗಲಾಟೆ ಕೊಲೆಯವರೆಗೆ ಬಂದು ತಲುಪುವ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿವೆ. ಮಹಾರಾಷ್ಟ್ರದಲ್ಲಿ ಬರ್ತ್ ಡೇ(Maharashtra Shocker)ಆಚರಣೆ ಮಾಡಲು ಗಂಡ ದುಬೈಗೆ ಕರೆದುಕೊಂಡು ಹೋಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಗಂಡನನ್ನು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಪುಣೆಯ ಕನಸ್ಟ್ರಕ್ಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪತಿ ನಿಖಿಲ್ ಖನ್ನಾ ರೇಣುಕಾಳನ್ನು ಪ್ರೀತಿಸಿ ಮದುವೆಯಾಗಿದ್ದನಂತೆ. ಆರು ವರ್ಷ ಕಳೆದರೂ ದಂಪತಿಯ ನಡುವೆ ವೈವಾಹಿಕ ಜೀವನದಲ್ಲಿ ಯಾವುದೆ ಸಮಸ್ಯೆಯಿರಲಿಲ್ಲ. ಈ ದಂಪತಿ ಪುಣೆಯ ಐಷಾರಾಮಿ ಅಪಾರ್ಟ್‌ಮೆಂಟ್ ನಲ್ಲಿ ಸುಖಮಯ ಜೀವನ ನಡೆಸುತ್ತಿದ್ದರಂತೆ. ಇತ್ತೀಚೆಗೆ ನಿಖಿಲ್ ಹಾಗೂ ರೇಣುಕಾ ಮಧ್ಯೆ ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಹೋಗುವ ವಿಚಾರಕ್ಕೆ ಜಗಳ ಶುರುವಾಗಿದೆ. ಬರ್ತ್ ಡೇ ಆಚರಿಸಲು ಕರೆದುಕೊಂಡು ಹೋದಾಗ ಗಲಾಟೆಯಲ್ಲಿ ಹೆಂಡತಿ ಗಂಡನ ಮುಖಕ್ಕೆ ಪಂಚ್ ಮಾಡಿದ್ದಾರೆ.

ಹೆಂಡತಿಯ ಏಟಿನಿಂದ ಗಂಡನ ಹಲ್ಲುಗಳು ಉದುರಿ ಹೋಗಿ ಬಿಟ್ಟಿದೆಯಂತೆ. ಹೆಂಡತಿ ಕೊಟ್ಟ ಪಂಚ್‌ಗೆ ಗಂಡನ ಮೂಗಿನಿಂದ ರಕ್ತಸ್ರಾವ ಉಂಟಾಗಿದ್ದು ಗಂಡ ನಿಖಿಲ್ ಖನ್ನಾ ಪ್ರಜ್ಞೆ ಕಳೆದುಕೊಂಡು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ದುಬೈನಲ್ಲಿ ಬರ್ತ್ ಡೇ ಆಚರಿಸುವ ವಿಚಾರಕ್ಕೆ ದುಂಬಾಲು ಬಿದ್ದು ಹೆಂಡತಿ ಕೊಟ್ಟ ಪಂಚ್‌ಗೆ ಗಂಡ ಮೃತಪಟ್ಟ ಘಟನೆ ವರದಿಯಾಗಿದೆ. ಪುಣೆಯ ವನವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪತ್ನಿ ರೇಣುಕಾರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಟಿಕೆಟ್ ವಿಚಾರಕ್ಕೆ ಗಲಾಟೆ- ಮುಸ್ಲಿಂ ಪ್ರವಾದಿಯಿಂದ ಕಂಡಕ್ಟರ್ ಗೆ ಮಾರಣಾಂತಿಕ ಹಲ್ಲೆ !!

You may also like

Leave a Comment