Home » Power TV ರಾಕೇಶ್ ಶೆಟ್ಟಿ ಮೇಲೆ FIR, ಮಹಿಳಾ ದೌರ್ಜನ್ಯ ಹಿನ್ನೆಲೆಯಲ್ಲಿ ಪ್ರಕರಣ, ನೊಂದ ಮಹಿಳೆಯರ ಹೋರಾಟಕ್ಕೆ ಜಯ !

Power TV ರಾಕೇಶ್ ಶೆಟ್ಟಿ ಮೇಲೆ FIR, ಮಹಿಳಾ ದೌರ್ಜನ್ಯ ಹಿನ್ನೆಲೆಯಲ್ಲಿ ಪ್ರಕರಣ, ನೊಂದ ಮಹಿಳೆಯರ ಹೋರಾಟಕ್ಕೆ ಜಯ !

by ಹೊಸಕನ್ನಡ
1 comment

 

FIR against Rakesh Shetty: ತಾನೊಬ್ಬ ಧರ್ಮರಕ್ಷಕ ಎಂದು ಫೋಸ್ ನೀಡುತ್ತಿದ್ದ, ಪವರ್ ಟಿವಿ ರಾಕೇಶ್ ಶೆಟ್ಟಿ ಮೇಲೆ FIR ದಾಖಲಾಗಿದೆ(FIR against Rakesh Shetty). ಮಹಿಳೆಯರ ಮೇಲೆ ದೌರ್ಜನ್ಯ, ಅವಾಚ್ಯವಾಗಿ ಶಬ್ದ ಪ್ರಯೋಗಿಸಿದ ಬಗ್ಗೆ ಮಹಿಳೆಯರು ವಿಡಿಯೋ ಮಾಡಿ ದೂರಿದ್ದರು. ಇದೀಗ ರಾಕೇಶ್ ಶೆಟ್ಟಿ ಮತ್ತು ಆತನ ಗನ್ ಮ್ಯಾನ್ ಮತ್ತು ಮತ್ತೊಬ್ಬ ಸಹಚರನ ಮೇಲೆ ಬೆಂಗಳೂರಿನ ಕೊಡಿಗೇಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾರತಿ ಸಿಂಗ್ ಎಂಬವರು ನೀಡಿದ ದೂರಿನಂತೆ FIR ದಾಖಲಾಗಿದೆ.
ಕಾಮಂಧರ ಕಾಮಗಣನಿಂದ ಈ FIR ಮತ್ತೊಂದು ಬರ್ತ್ ಡೆ ಗಿಫ್ಟ್ ಆಗಿದ್ದು, ಕಳೆದ ಕೆಲ ವಾರಗಳಿಂದ ರಾಕೇಶ್ ಶೆಟ್ಟಿಯ ಹಲವು ಕರ್ಮಕಾಂಡಗಳು ಬಯಲಾಗುತ್ತಿದೆ. ಈಗ FIR ಆಗಿರುವುದು ಅದರ ಮುಂದುವರಿದ ಭಾಗವಾಗಿದೆ. ಮಹಿಳೆಯರನ್ನು ಶೋಷಿಸುತ್ತಿರುವ ಪವರ್ ಟಿ ವಿ ಎಂ ಡಿ ರಾಕೇಶ್ ಶೆಟ್ಟಿಯ ಮೇಲೆ ಮಾಜಿ ಪೊಲೀಸ್ ಅಧಿಕಾರಿ ಕಿಡಿಕಾರಿ ಪೊಲೀಸ್ ಇಲಾಖೆಯನ್ನು ಕರಾಟೆಗೆ ತೆಗೆದುಕೊಂಡಿದ್ದರು. ಆತನ ಮೇಲೆ ಕ್ರಮ ಕೈಗೊಳ್ಳದೆ ಇದ್ದರೆ ಸಾರ್ವಜನಿಕರು ಕ್ರಮ ಕೈಗೊಳ್ಳುತ್ತೇವೆ ಎನ್ನುವ ಎಚ್ಚರಿಕೆ ನೀಡಿದ್ದರು. ಇದೀಗ ಎಚ್ಚೆತ್ತ ಪೊಲೀಸ ಇಲಾಖೆ ಎಫ್ ಐ ಆರ್ ದಾಖಲಿಸಿದೆ.

ಭಾರತಿ ಸಿಂಗ್ ಸಹಿತ ಹಲವು ಮಹಿಳೆಯರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ತಾನು ವಾಸಿಸುವ ನೆರೆಮನೆಯವರು ದೂರಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ನೆರೆ ಮನೆಯ ವೃದ್ದ ಮಹಿಳೆಯರ ಮೇಲೆ ಪವರ್ ಟಿವಿ ಮ್ಯಾನೇಜಿಂಗ್ ಡೈರೆಕ್ಟರ್ ರಾಕೇಶ್ ಶೆಟ್ಟಿ ಮೇಲೆ ದೌರ್ಜನ್ಯ ತೋರುತ್ತಿರುವ ಆಡಿಯೋ ವಿಡಿಯೋ ವೈರಲ್ ಆಗಿತ್ತು.
ಸಮುದ್ರಾ ಫೌಂಡೇಶನ್ ಎಂಬ NGOದ ಸಂಸ್ಥಾಪಕಿಯೂ ಮತ್ತು CEO ಕೂಡ ಆಗಿರುವ ಭಾರತಿ ಸಿಂಗ್ ಎಂಬವರು ಮಾಧ್ಯಮಗಳ ಮೂಲಕ ತಮ್ಮ ನೋವು ಹೇಳಿಕೊಂಡಿದ್ದರು. ಭಾರತಿ ಸಿಂಗ್ ರವರು ಸುಮಾರು 16 ಸಾವಿರ ಯುವಕರು ಆತ್ಮಹತ್ಯೆ ಮಾಡುವುದನ್ನು ತಡೆದು ಅವರನ್ನು ರಕ್ಷಿಸಿದ್ದ ಮಹಿಳೆ ಎಂಬುದು ಇಲ್ಲಿ ಗಮನಾರ್ಹ ಅಂಶ.

ಇದನ್ನು ಓದಿ: Bride Groom Video: ವಧುವಿನ ಎದುರೇ ವರ ನಾದಿನಿಗೆ ಹೀಗಾ ಮಾಡುವುದು…? ವೀಡಿಯೋ ಸಖತ್‌ ಟ್ರೋಲ್‌!!!

You may also like

Leave a Comment