Home » Kichcha Sudeep: ತಾನು ತೊಟ್ಟ ಉಡುಗೆಯನ್ನು ಬಿಗ್ ಬಾಸ್ ಬಾಯ್ಸ್ ಗೆ ಗಿಫ್ಟ್ ಕೊಟ್ಟ ಕಿಚ್ಚ- ಕಾರಣ ಕೇಳಿದ್ರೆ ಆಶ್ಚರ್ಯ ಪಡ್ತೀರಾ!!

Kichcha Sudeep: ತಾನು ತೊಟ್ಟ ಉಡುಗೆಯನ್ನು ಬಿಗ್ ಬಾಸ್ ಬಾಯ್ಸ್ ಗೆ ಗಿಫ್ಟ್ ಕೊಟ್ಟ ಕಿಚ್ಚ- ಕಾರಣ ಕೇಳಿದ್ರೆ ಆಶ್ಚರ್ಯ ಪಡ್ತೀರಾ!!

by ಹೊಸಕನ್ನಡ
1 comment
Kichcha Sudeep

Kichcha Sudeep: ಬಿಗ್‌ ಬಾಸ್‌ ಕನ್ನಡ ಸೀಸನ್ 10 ರ (Bigg Boss Kannada Season 10)ಆರನೇ ವಾರದ ವೀಕೆಂಡ್‌ ನಲ್ಲಿ ಕಿಚ್ಚ ಸುದೀಪ್‌(Kichcha Sudeep) ಮೂರನೇ ವಾರಾಂತ್ಯದ ಪಂಚಾಯಿತಿ ನಡೆಸಿದ್ದಾರೆ. ಸಖತ್ ಸ್ಟೈಲ್ ಆಗಿ ಸುದೀಪ್‌ ಕಾಣುತ್ತಿದ್ದ ಕಿಚ್ಚನ ಪಂಚಾಯ್ತಿಯಲ್ಲಿ ಈ ವಾರ ದೊಡ್ಮನೆಯ ಕೆಲ ಕಂಟೆಸ್ಟಂಟ್‌ಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಆರನೇ ವಾರ ಸುದೀಪ್ ಅವರು ಮನೆಯವರಿಗೆ ಒಂದು ಟಾಸ್ಕ್ ನೀಡಿದ್ದು, ಒಂದು ಫೋಟೋ ತೋರಿಸಿ, ಆ ಸಿನಿಮಾದ ಹೆಸರನ್ನು ಗೆಸ್ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಗೇಮ್ನಲ್ಲಿ ಪುರುಷರ ತಂಡ ಗೆಲುವು ಸಾಧಿಸಿತ್ತು. ಈ ರೀತಿ ಗೆದ್ದ ಸ್ಪರ್ಧಿಗಳಿಗೆ ತಮ್ಮ ಕಡೆಯಿಂದ ಸರ್ಪ್ರೈಸ್ಯಿರುವ ಬಗ್ಗೆ ಸುದೀಪ್ ಅವರು ಹೇಳಿದ್ದರು. ಆದರೆ, ಆ ಸರ್ಪ್ರೈಸ್ ಏನು ಎಂಬ ಗುಟ್ಟನ್ನು ಸುದೀಪ್ ಅವರು ಬಿಟ್ಟು ಕೊಟ್ಟಿರಲಿಲ್ಲ. ಸದ್ಯ, ಈ ಗಿಫ್ಟ್ ಏನು ಎಂಬುದು ರಿವೀಲ್ ಆಗಿದೆ.

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳನ್ನು ಕುಟುಂಬದವರ ರೀತಿ ನೋಡುವುದು ಗೊತ್ತಿರುವ ಸಂಗತಿ. ಪ್ರತಿ ಸೀಸನ್ನಲ್ಲಿ ಒಮ್ಮೆಯಾದರೂ ಅವರು ತಮ್ಮ ಕೈಯಾರೆ ಅಡುಗೆ ಮಾಡಿ ಸ್ಪರ್ಧಿಗಳಿಗೆ ಕಳುಹಿಸಿಕೊಡುತ್ತಾರೆ. ಎಲ್ಲಾ ಸ್ಪರ್ಧಿಗಳನ್ನು ಒಂದೇ ರೀತಿಯಲ್ಲಿ ನೋಡುವ ಕಿಚ್ಚ ಸುದೀಪ್ ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಅದರಲ್ಲಿಯೂ ಕೇವಲ ಪುರಷ ಸ್ಪರ್ಧಿಗಳಿಗೆ ಮಾತ್ರ ವಿಶೇಷ ಉಡುಗೊರೆ ನೀಡಿದ್ದಾರೆ. ಈ ಉಡುಗೊರೆ ಪಡೆದವರು ಸಂಭ್ರಮಿಸಿದರೆ, ಮಹಿಳಾ ಸ್ಪರ್ಧಿಗಳು ಬೇಸರ ಮಾಡಿಕೊಂಡಿದ್ದಾರೆ.

ಪ್ರತಿ ವೀಕೆಂಡ್ನಲ್ಲಿ ಸುದೀಪ್ ಅವರು ವಿವಿಧ ರೀತಿಯ ಡ್ರೆಸ್ ಮೂಲಕ ಗಮನ ಸೆಳೆಯುವುದು ಕಾಮನ್. ಈ ಡ್ರೆಸ್ನ ಸುದೀಪ್ ಅವರು ಸ್ಪರ್ಧಿಗಳಿಗೆ ಗಿಫ್ಟ್ ಆಗಿ ನೀಡಿದ್ದಾರೆ. ‘ನಾನು ವೀಕೆಂಡ್ನಲ್ಲಿ ಧರಿಸಿದ ಬಟ್ಟೆಗಳಿವು, ಯಾರ್ಯಾರಿಗೆ ಹೊಂದಿಕೆ ಆಗುತ್ತದೆಯೋ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಪ್ರತಾಪ್, ಸಂತೊಷ್ಗೆ ಈ ಡ್ರೆಸ್ನ ಅಳತೆ ಸರಿಯಾಗುತ್ತದೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ’ ಎಂದು ಕಿಚ್ಚ ಕಿಚಾಯಿಸಿದ್ದಾರೆ. ಡ್ರೆಸ್ ಹೇಗಾದರೂ ಇರಲಿ, ಸುದೀಪ್ ಧರಿಸಿದ್ದ ಬಟ್ಟೆ ಸಿಕ್ಕ ಖುಷಿಯಲ್ಲಿ ದೊಡ್ಮನೆ ಪುರುಷರು ಫುಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ: Mallikarjun Kharge: ಕಾಂಗ್ರೆಸ್ ನ ಈ ಕಾರ್ಯಕರ್ತರಿಗೆ ಗೇಟ್ ಪಾಸ್ ?! ವೈರಲ್ ಆಯ್ತು ಖರ್ಗೆ ಹೇಳಿಕೆ ವಿಡಿಯೋ

You may also like

Leave a Comment