Home » Rashmika DeepFake Video: ರಶ್ಮಿಕಾ ಮಂದಣ್ಣಳ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ !!

Rashmika DeepFake Video: ರಶ್ಮಿಕಾ ಮಂದಣ್ಣಳ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ !!

1 comment
Rashmika DeepFake Video

Rashmika DeepFake Video: ರಣಬೀರ್ ಕಪೂರ್ ಜತೆ ಅನಿಮಲ್ ಚಿತ್ರದಲ್ಲಿ ನಟಿಸಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದೆ.
ನಟಿ ರಶ್ಮಿಕಾ ಮಂದಣ್ಣ(Actress Rashmika Mandanna)ಅವರ ಡೀಪ್ ಫೇಕ್ ವೀಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಚಿತ್ರರಂಗದ ಅಮಿತಾ ಬಚ್ಚನ್ ಹಾಗೂ ಇನ್ನುಳಿದ ನಟರು ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ, ನಟಿ ರಶ್ಮಿಕಾ ಮಂದಣ್ಣ (Actor Rashmika Mandanna Deepfake Video) ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ (Deepfake Video) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ(viral Video).

ಇದರ ನಡುವೆ, ನಟಿ ರಶ್ಮಿಕಾ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ಸದ್ದು ಮಾಡುತ್ತಿದೆ. ಎಕ್ಸ್ ವೇದಿಕೆಯ ಸಲ್ಮಾನ್ ಖಾನ್(@SalmanK53465481) ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಅವರು ಡೀಪ್‌ಫೇಕ್ ವಿಡಿಯೋ ಶೇರ್ ಆಗಿದೆ. ಇದು ನಿಜವಾಗಿ ರಶ್ಮಿಕಾ ಅವರದ್ದೇನಾ??ಎಂಬ ಪ್ರಶ್ನೆ ಕಾಡುತ್ತಿದೆ. ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ಎಚ್ಚರವಿರಲಿ ಎಂದು ಬರೆಯಲಾಗಿದೆ. ಈ ವಿಡಿಯೋದಲ್ಲಿ ಬ್ರಾ ಧರಿಸಿರುವ ಡ್ಯಾನ್ಸ್ ಮಾಡುತ್ತಿರುವ ಹುಡುಗಿಯೊಬ್ಬಳನ್ನು ಕಾಣಬಹುದು. ಆಕೆಯ ಮುಖಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡೀಪ್‌ಫೇಕ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ನೋಡುಗರಲ್ಲಿ ಕಳವಳ ಹುಟ್ಟು ಹಾಕಿದೆ.

ಈ ರೀತಿ ಡೀಪ್‌ಫೇ‌ಕ್ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಡೀಪ್‌ಫೇಕ್ ತಂತ್ರಜ್ಞಾನದ (Deepfake Technology) ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ಡೀಪ್‍‌ಫೇಕ್ ವಿಡಿಯೋಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು (Central Government) ಭಾರತದಲ್ಲಿ ಸಕ್ರಿಯವಾಗಿರುವ ಸೋಷಿಯಲ್ ಮೀಡಿಯಾಗಳು (Social Media) ಕಂಪನಿಗಳ ಜತೆ ಸಭೆ ನಡೆಸಿದೆ.ಇದರ ಜೊತೆಗೆ ಡೀಪ್‌ಫೇಕ್ ವಿಡಿಯೋ ಪ್ರಸಾರಕ್ಕೆ ಸೋಷಿಯಲ್ ಮೀಡಿಯಾಗಳನ್ನೇ (Social Media) ಹೊಣೆಯನ್ನಾಗಿಸುವ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Toll Plaza: ವಾಹನ ಸವಾರರಿಗೆ ಮುಖ್ಯ ಮಾಹಿತಿ- ವಾಹನ ಸಂಖ್ಯೆಗೆ ಇದರ ಜೋಡಣೆ ಕಡ್ಡಾಯ !!

You may also like

Leave a Comment