Home » Tumakuru Suicide Case: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ವೀಡಿಯೋದಲ್ಲಿ ಸ್ಫೋಟಕ ಅಂಶ ಬಹಿರಂಗ!!

Tumakuru Suicide Case: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ವೀಡಿಯೋದಲ್ಲಿ ಸ್ಫೋಟಕ ಅಂಶ ಬಹಿರಂಗ!!

1 comment
Tumakuru Suicide Case

Tumakuru Suicide Case: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ವೊಂದು ದೊರಕಿದೆ. ನೆರೆಮನೆಯವರ ಕಿರುಕುಳಕ್ಕೆ ಬೇಸತ್ತ ಇಡೀ ಕುಟುಂಬ ಸಾವಿನ ಹಾದಿ ಹಿಡಿದಿದೆ. ಗರೀಬ್‌ ಸಾಬ್‌ ಮೊದಲು ತನ್ನ ಮೂವರು ಮಕ್ಕಳನ್ನು ಸಾಯಿಸಿ ನಂತರ ಹೆಂಡ್ತಿ ಜೊತೆ ನೇಣಿಗೆ ಶರಣಾಗಿದ್ದಾನೆ . ಇದೀಗ ಆತ್ಮಹತ್ಯೆ(Tumakuru Suicide Case) ಮಾಡುವ ಮೊದಲು ವೀಡಿಯೋ ಮಾಡಿದ್ದು, ಇಲ್ಲಿ ಶಾಕಿಂಗ್‌ ಮಾಹಿತಿ ಬಯಲಾಗಿದೆ.

ಈ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಪತಿ ಗರೀಬ್‌ ಸಾಬ್‌, ಪತ್ನಿ ಸುಮಯ್ಯ, ಮಗಳು ಹಜೀನಾ, ಗಂಡು ಮಕ್ಕಳಾದ ಮೊಹ್ಮದ್‌ ಶಬೀರ್‌, ಮೊಹಮದ್‌ ಮುನೀತ್‌ ಮೃತರು. ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಡೆತ್‌ನೋಟಲ್ಲಿ ಬರೆಯಲಾಗಿದೆ. ವೀಡಿಯೋ ಕೂಡಾ ಇವರು ಮಾಡಿದ್ದು, ಇದರಲ್ಲಿ ಐವರ ಹೆಸರು ಹೇಳಿದ್ದಾರೆ.

ವೀಡಿಯೋದಲ್ಲಿ ತಾವು ಬಾಡಿಗೆಗಿದ್ದ ಕೆಳಗಿನ ಮನೆಯವರು ಹಾಗೂ ಕೆಲವರು ತಮಗೆ ಮಾನಸಿಕವಾಗಿ ಹಿಂಸೆ ನೀಡಿರುವುದಾಗಿಯೂ, ತಮ್ಮ ಮಕ್ಕಳಿಗೆ ಹೊಡೆದಿರುವುದಾಗಿಯೂ, ನಾವು ಯಾರ ಸುದ್ದಿಗೆ ಹೋಗದಿದ್ದರೂ ನಮಗೆ ಅವಮಾನ ಮಾಡಿದ್ದು, ಸಾಲ ಮಾಡಿದಾಗ ಅದಕ್ಕೂ ನೋವು ಕೊಟ್ಟಿರುವುದಾಗಿ ವೀಡಿಯೋ ಮಾಡಲಾಗಿದೆ.

ಈ ಘಟನೆ ಕುರಿತು ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀಡಿಯೋನಲ್ಲಿ ಉಲ್ಲೇಖಿಸಿದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರು ನೆಲೆಸಿದ್ದ ಕೆಳಗಡೆ ಮನೆಯ ನಿವಾಸಿ ಖಲಂದರ್‌, ಖಲಂದರ್‌ ಮಗಳು ಸಾನಿಯಾ, ಹಿರಿಯ ಮಗ ಹಾಗೂ ಮನೆಯ ಮಹಡಿಯಲ್ಲಿ ನೆಲೆಸಿದ್ದ ಶಬಾನಾ ಸೇರಿ ಐವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: Aadhar card: ಆಧಾರ್ ಕಾರ್ಡ್ ಇರುವವರಿಗೆ ದೇಶಾದ್ಯಂತ ಬಂತು ಹೊಸ ರೂಲ್ಸ್ – ಡಿ. 14 ರೊಳಗೆ ಈ ಕೆಲಸ ಕಡ್ಡಾಯ!!

You may also like

Leave a Comment