Home » Indore School Student: ಶಾಲೆಯಲ್ಲಿ ಗೆಳೆಯನಿಗೆ 100 ಬಾರಿ ಕೈವಾರದಿಂದ ಚುಚ್ಚಿದ 4ನೇ ತರಗತಿ ವಿದ್ಯಾರ್ಥಿಗಳು !!

Indore School Student: ಶಾಲೆಯಲ್ಲಿ ಗೆಳೆಯನಿಗೆ 100 ಬಾರಿ ಕೈವಾರದಿಂದ ಚುಚ್ಚಿದ 4ನೇ ತರಗತಿ ವಿದ್ಯಾರ್ಥಿಗಳು !!

1 comment
Indore School Student

Indore School Student: ಮಧ್ಯಪ್ರದೇಶದ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಗಳ ವಿದ್ಯಾರ್ಥಿಗಳ ಗಲಾಟೆ ನಡೆದಿದ್ದು ವಿದ್ಯಾರ್ಥಿಗಳು ತಮ್ಮದೇ ತರಗತಿಯ ವಿದ್ಯಾರ್ಥಿಗೆ (Indore School Student)ಜಾಮಿಟ್ರಿ ಬಾಕ್ಸ್‌ನ ತ್ರಿಜ್ಯದಿಂದ ನೂರಕ್ಕೂ ಅಧಿಕ ಬಾರಿ ಇರಿದಿರುವ (Crime News)ಘಟನೆ ವರದಿಯಾಗಿದೆ.

ಮಧ್ಯಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, 4ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಕೆಲ ವಿದ್ಯಾರ್ಥಿಗಳು ತ್ರಿಜ್ಯದಿಂದ ನೂರಕ್ಕೂ ಅಧಿಕ ಬಾರಿ ಇರಿದಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಆರಾಧ್ಯ ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ವಿದ್ಯಾರ್ಥಿಗಳು ಯಾವುದಾದರೊಂದು ತಗಾದೆ ತೆಗೆದು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ತ್ರಿಜ್ಯದಿಂದ ನೂರು ಬಾರಿ ಹಲ್ಲೆಗೊಳಗಾದ ವಿದ್ಯಾರ್ಥಿಯ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Kantara Prequel: Rishab Shetty ನೀಡಿದ್ರು, ಸಿನಿಮಾ ಪಾತ್ರವರ್ಗ, ಶೂಟಿಂಗ್‌ ಬಗ್ಗೆ ಬಿಗ್‌ ಅಪ್ಡೇಟ್‌!!

You may also like

Leave a Comment