Home » Job Interview:ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಬಂದ ಅಭ್ಯರ್ಥಿ, ರೆಸ್ಯೂಮ್ ಬದಲು ಈತ ತಂದ್ದದೇನೆಂದು ತಿಳಿದ್ರೆ ನೀವೇ ಹೌಹಾರುತ್ತೀರಾ !!

Job Interview:ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಬಂದ ಅಭ್ಯರ್ಥಿ, ರೆಸ್ಯೂಮ್ ಬದಲು ಈತ ತಂದ್ದದೇನೆಂದು ತಿಳಿದ್ರೆ ನೀವೇ ಹೌಹಾರುತ್ತೀರಾ !!

1 comment
Job Interview

Job Interview: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಇಂದಿನ ಸ್ಪರ್ಧತ್ಮಕ ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವುದೇ ನೌಕರಿ ಗಿಟ್ಟಿಸಿಕೊಳ್ಳಲು ಉದ್ಯೋಗಕ್ಕೆ ತಕ್ಕ ವಿದ್ಯಾರ್ಹತೆ ಹಾಗೂ ಸಂದರ್ಶನದಲ್ಲಿ (Job Interview)ಉತ್ತೀರ್ಣರಾಗಬೇಕು.

ಬಿಹಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 15 ನಿರುದ್ಯೋಗಿ ಮಧ್ಯಂತರ ಮತ್ತು ಪದವಿ ವಿದ್ಯಾರ್ಥಿಗಳಿಗೆ ಕ್ಷೇತ್ರ ಸಾಲ ಅಧಿಕಾರಿ ಹುದ್ದೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಉದ್ಯೋಗ ಶಿಬಿರ ಆಯೋಜನೆ ಮಾಡಿತ್ತು. ಈ ಸಂದರ್ಭ 50ಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಭಾಗಿಯಾಗಿದ್ದರು. ಈ ನಡುವೆ, ಅನ್ನಪೂರ್ಣ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧಿಕಾರಿಯೊಬ್ಬರು ಅಚ್ಚರಿಯ ಮಾಹಿತಿ ನೀಡಿದ್ದಾರೆ.

ರೆಸ್ಯೂಮ್ ಬಗ್ಗೆ ತಿಳಿದಿಲ್ಲದ ಅನೇಕ ಅಭ್ಯರ್ಥಿಗಳು ಸಂದರ್ಶನಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಕೆಲವು ಅಭ್ಯರ್ಥಿಗಳು ರೆಸ್ಯೂಮ್ ತಂದಿದ್ದರೆ, ಕಾಗದದ ಮೇಲೆ ವಿಳಾಸ ಬರೆದು ರೆಸ್ಯೂಮ್ ಎಂದು ಕೂಡ ಕೆಲವರು ಬರೆದಿದ್ದರಂತೆ. ಆದರೆ ಅವರು ತಮ್ಮ ಕಿಸೆಗಳಲ್ಲಿ ಗುಟಕಾ ಪ್ಯಾಕೆಟ್‌ಗಳನ್ನು ಕೂಡ ಸಂದರ್ಶನಕ್ಕೆ ತಂದಿದ್ದರು. ಈ ಘಟನೆ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Pension Scheme: ಮಹಿಳೆಯರೇ ನಿಮಗಾಗಿ ಬಂದಿದೆ 5 ಹೊಸ ಪೆನ್ಶನ್ ಸ್ಕೀಮ್ – ಇದರಿಂದ ನಿಮಗೆ ಸಿಗಲಿದೆ ದುಪ್ಪಟ್ಟು ಹಣ

You may also like

Leave a Comment