Home » Belthangady: ಬೆಳ್ತಂಗಡಿ; ಕೋಪಗೊಂಡ ಕಾಡಾನೆ, ದಾಡೆಯ ಮೂಲಕ ಕಾರನ್ನು ಜಖಂಗೊಳಿಸಿದ ಗಜ; ಬೆಳಗ್ಗೆ ಶಾಂತರೂಪದಲ್ಲಿ ಆನೆ, ಆಮೇಲೆ ವ್ಯಗ್ರಗೊಳ್ಳಲು ಕಾರಣವೇನು?

Belthangady: ಬೆಳ್ತಂಗಡಿ; ಕೋಪಗೊಂಡ ಕಾಡಾನೆ, ದಾಡೆಯ ಮೂಲಕ ಕಾರನ್ನು ಜಖಂಗೊಳಿಸಿದ ಗಜ; ಬೆಳಗ್ಗೆ ಶಾಂತರೂಪದಲ್ಲಿ ಆನೆ, ಆಮೇಲೆ ವ್ಯಗ್ರಗೊಳ್ಳಲು ಕಾರಣವೇನು?

1 comment
Belthangady elephant attack

Belthangady elephant attack : ಕಾಡಾನೆಯೊಂದು ಕಾರೊಂದರ ಮೇಲೆ ದಾಳಿ ಮಾಡಿ(Belthangady elephant attack), ಇಬ್ಬರನ್ನು ಗಾಯಗೊಳಿಸಿದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ನೆರಿಯದ ಅಣಿಯೂರಿನಲ್ಲಿ ನಡೆದಿದೆ. ನ.27 ರ ರಾತ್ರಿ ಈ ಘಟನೆ ನಡೆದಿದೆ. ಏಳು ಮಂದಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದು, ನೆರಿಯದ ಸಂಬಂಧಿಕರ ಮನೆಗೆ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.

ಪುತ್ತೂರು ಮೂಲದ ಅಬ್ದುಲ್‌ ರೆಹಮಾನ್‌ (40), ನಾಸಿಯಾ (30) ಗಾಯಾಗಳುಗಳು ಎಂದು ತಿಳಿದು ಬಂದಿದೆ. ರೆಹಮಾನ್‌ ಅವರ ತಲೆ, ಕಾಲಿಗೆ ಪೆಟ್ಟಾದರೆ ನಾಸಿಯಾ ಅವರ ಕಾಲಿಗೆ ಗಾಯವಾಗಿದೆ. ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗಿದೆ.

ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ ಪರಿಸರದಲ್ಲಿ ಸೋಮವಾರ ಬೆಳಗ್ಗೆ ಕಾಣಿಸಿಕೊಂಡ ಈ ಆನೆ ಶಾಂತವಾಗಿತ್ತು. ಆ ಪರಿಸರದ ತುಂಬಾ ಓಡಾಡಿ ಯಾವುದೇ ಹಾನಿ ಮಾಡದೇ ಕಾಡಿಗೆ ತೆರಳಿತ್ತು. ಆದರೆ ರಾತ್ರಿಯ ಸಮಯ ನೆರಿಯದ ಬಯಲು ಶಾಲೆಯ ಬಳಿ ಮತ್ತೆ ಆನೆ ಕಾಣಿಸಿಕೊಂಡಿದೆ. ಆ ಸಮಯದಲ್ಲಿ ರಸ್ತೆಯಲ್ಲಿ ಜೀಪ್‌ವೊಂದು ಹೋಗಿದ್ದು ಅದರ ಹೆಡ್‌ಲೈಟ್‌ ಬೆಳಕಿನ ಕಿರಣ ಆನೆಯ ಕಣ್ಣಿಗೆ ಬಿದ್ದಿದೆ. ಇದರಿಂದ ತನ್ನ ಮೇಲೆ ಯಾರೋ ದಾಳಿ ಮಾಡಲು ಬಂದಿದ್ದಾರೆ ಎಂದು ಆನೆ ಕೋಪಗೊಂಡಿದೆ.

ಈ ನಡುವೆ ಜನರು ಬೊಬ್ಬೆ ಹೊಡೆದಿದ್ದಾರೆ. ಪಟಾಕಿ ಸಿಡಿಸಿದ್ದಾರೆ. ಆನೆ ಇದರಿಂದ ಮತ್ತಷ್ಟು ಕೋಪಗೊಂಡಿದೆ. ಕೆರಳಿದ ಆನೆ ಜನನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದೆ. ಓರ್ವರ ಮನೆಯಂಗಳಕ್ಕೂ ಹೋಗಿ, ರಸ್ತೆ ಬದಿ ಇರುವ ಗೇಟನ್ನು ಕೂಡಾ ಮುರಿಯಲು ಪ್ರಯತ್ನ ಮಾಡಿತ್ತು, ಇದರಿಂದ ಭಯಗೊಂಡ ಸ್ಥಳೀಯ ಮನೆಯವರು ಬೊಬ್ಬೆ ಹೊಡೆದಿದ್ದಾರೆ.

ಕೋಪಗೊಂಡ ಆನೆ ರಸ್ತೆಯಲ್ಲಿ ಸಂಚರಿಸುವುದನ್ನು ಕಂಡು ಆ ದಾರಿಯಲ್ಲಿ ಬಂದ ಕಾರನ್ನು ನಿಲ್ಲಿಸಲು ಹೇಳಿದ್ದು, ಕಟ್ಟಡವೊಂದರ ಬದಿಯಲ್ಲಿ ನಿಲ್ಲಿಸುವಾಗ ಅಲ್ಲಿಗೇ ಆನೆ ಬಂದಿತ್ತು. ಕಾರಿನಲ್ಲಿದ್ದವರು ಇಳಿಗೆ ಪಕ್ಕದ ಮನೆಯಲ್ಲಿ ಆಶ್ರಯ ಪಡೆದರು.

ಆನೆಯು ತನ್ನ ದಾಡೆಯ ಮೂಲಕ ಕಾರನ್ನು ಕಟ್ಟಡದ ಗೋಡೆಗೆ ಜಖಂಗೊಳಿಸಿ, ಅನಂತರ ಅಲ್ಲಿಂದ ಮನೆಯ ಕಾಂಪೌಂಡ್‌ಗೆ ನುಗ್ಗಿ ಅಲ್ಲಿಂದ ತೋಟಕ್ಕೆ ಹೋಗಿದೆ. ಅನಂತರ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನತ್ತ ಅಟ್ಟಿಸುವ ಕ್ರಮ ಮಾಡಿದ್ದರು.

ಇದನ್ನೂ ಓದಿ: Marichi: ಹೆಂಡತಿ ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾದ ವಿಜಯ್ ರಾಘವೇಂದ್ರ!! ಅರೆ ಏನಪ್ಪಾ ಇದು ಹೊಸ ಸುದ್ದಿ?!

You may also like

Leave a Comment