Home » C T Ravi: ಮುಂದಿನ ದಿನಗಳಲ್ಲಿ ಪಂಜುರ್ಲಿ ದೈವ, ಕಂಬಳ ಏನೂ ಇರೋಲ್ಲ !! ಹೀಗ್ಯಾಕಂದ್ರು ಸಿಟಿ ರವಿ

C T Ravi: ಮುಂದಿನ ದಿನಗಳಲ್ಲಿ ಪಂಜುರ್ಲಿ ದೈವ, ಕಂಬಳ ಏನೂ ಇರೋಲ್ಲ !! ಹೀಗ್ಯಾಕಂದ್ರು ಸಿಟಿ ರವಿ

1 comment
C T Ravi

C T Ravi: ನಮ್ಮ ಸನಾತನ ಧರ್ಮ ನಾಶವಾದರೆ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕಗಳಾದ ದೈವಾರಾಧನೆ, ಪಂಜುರ್ಲಿ ದೈವ, ಕಂಬಳದ ಓಟ ಯಾವುದೂ ಇರುವುದಿಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿ ಟಿ ರವಿ(C T Ravi) ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ(Bengaluru) ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸನಾತನ ಧರ್ಮದಿಂದಲೇ ದೈವ, ನಾಗರಾಧನೆ, ಪಂಜುರ್ಲಿ, ಕಂಬಳದಂತಹ ಶ್ರೇಷ್ಠ ಸಂಸ್ಕೃತಿ ಬೆಳೆದು ಬಂದಿದೆ. ಆದರೆ, ಕೆಲವರು ಬಯಸುತ್ತಿರುವಂತೆ ಸನಾತನ ಧರ್ಮ ನಾಶವಾದರೆ ಮುಂದಿನ ದಿನಗಳಲ್ಲಿ ದೈವಾರಾಧನೆ, ನಾಗರಾಧನೆ, ಪಂಜುರ್ಲಿ ದೈವ ಯಾವುದೂ ಇರುವುದಿಲ್ಲ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಬಳಿಕ ಮಾತನಾಡಿದ ಕೆಲವರು ನಾಶಮಾಡಬೇಕು ಎಂದು ಕಾದು ಕುಳಿತರೂ ಹೀಗೆ ನಾಶ ಪಡಿಸಲು ಜನರು ಬಿಡುವುದಿಲ್ಲ, ನಾವು ಬಿಡುವುದಿಲ್ಲ. ಕೆಲವರು ಕಂಬಳ, ಜಲ್ಲಿಕಟ್ಟು, ಜೋಡೆತ್ತಿನ ಬಂಡಿ ಓಟಗಳಿಗೆ ವಿರೋಧ ವ್ಯಕ್ತಪಡಿಸಿ ಪಿತೂರಿಯಿಂದ ನಮ್ಮ ಕರುಳಬಳ್ಳಿಯ ಸಂಸ್ಕೃತಿಯನ್ನು ನಾಶ ಪಡಿಸಲು ಪ್ರಯತ್ನ ಮಾಡಿದರು. ಆದರೆ, ನಾಶ ಪಡಿಸಲು ಹೊರಟವರೇ ನಾಶವಾದರು ಎಂದು ಸಿ.ಟಿ. ರವಿ ಹೇಳಿದರು.

ಅಲ್ಲದೆ ತುಳುನಾಡಿನ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿಗಳಲ್ಲಿ ಒಂದಾಗಿದೆ. ಇಲ್ಲಿನ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳು ಎಲ್ಲರಿಗೂ ಮಾದರಿಯಾಗುವಂತವುವು ಎಂದು ಹೇಳಿದರು.

ಇದನ್ನೂ ಓದಿ: Tamilunadu: ಒಂದು ದಿನವೂ ಮಿಸ್ ಮಾಡಲ್ವಂತೆ, ಪ್ರತೀ ದಿನವೂ ಮೋದಿಗೆ ಲೇಟರ್ ಬರೀತಾಳಂತೆ ಈ ಲೇಡಿ !! ಅಬ್ಬಬ್ಬಾ, ಈವರೆಗೂ ಬರೆದ ಪತ್ರವೆಷ್ಟು, ಮೋದಿ ಕೊಡ್ತಿರೋ ರಿಪ್ಲೇ ಏನು ?!

You may also like

Leave a Comment