Home » Girl Kidanap In Kerala: ಕೇರಳದಲ್ಲಿ ಕಿಡ್ನ್ಯಾಪ್‌ ಪ್ರಕರಣ; ಆರು ವರ್ಷದ ಬಾಲಕಿಯ ಅಪಹರಣ, ಅಣ್ಣ ಎಸ್ಕೇಪ್‌, ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆ! ರಾಜ್ಯಾದ್ಯಂತ ಶೋಧ!!!

Girl Kidanap In Kerala: ಕೇರಳದಲ್ಲಿ ಕಿಡ್ನ್ಯಾಪ್‌ ಪ್ರಕರಣ; ಆರು ವರ್ಷದ ಬಾಲಕಿಯ ಅಪಹರಣ, ಅಣ್ಣ ಎಸ್ಕೇಪ್‌, ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆ! ರಾಜ್ಯಾದ್ಯಂತ ಶೋಧ!!!

1 comment
Girl Kidanap In Kerala

Girl Kidanap In Kerala: ಕೇರಳದಲ್ಲಿ(Kerala)ಸೋಮವಾರ ಸಂಜೆ ಕೊಲ್ಲಂನ ಒಯೂರ್ ಎಂಬಲ್ಲಿ ತನ್ನ ಮನೆಯಿಂದ ಅಣ್ಣನೊಂದಿಗೆ ಟ್ಯೂಷನ್ ತರಗತಿಗೆ ತೆರಳುತ್ತಿದ್ದ ಬಾಲಕಿಯನ್ನು ನಾಲ್ಕು ಮಂದಿಯ ತಂಡವೊಂದು ಅಪಹರಿಸಿದ ಘಟನೆ(Girl Kidanap In Kerala) ವರದಿಯಾಗಿದೆ.

ಅಪಹರಣಕೋರರು ಬಾಲಕಿ ಅಬಿಗೆಲ್ ಸಾರಾ ರೇಜಿಳನ್ನು ಕಾರಿನೊಳಕ್ಕೆ ಎಳೆದು ಕರೆದೊಯ್ದಿದ್ದಾರೆ ಎನ್ನಲಾಗಿದೆ. ಈ ಘಟನೆ ಸುಮಾರು ಸಂಜೆ 4.30ಕ್ಕೆ ನಡೆದಿದೆ ಎನ್ನಲಾಗಿದೆ. ಅಪಹರಣಕಾರರು ಆಕೆಯ ಎಂಟು ವರ್ಷದ ಅಣ್ಣನನ್ನೂ ಅಪಹರಿಸುವ ಯತ್ನ ನಡೆಸಿದ್ದು, ಈ ಸಂದರ್ಭ ಆತ ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ನಡುವೆ, ಅಪಹರಣಕ್ಕೆ ಒಳಗಾದ ಬಾಲಕಿಯ ಪೋಷಕರಿಬ್ಬರು ವೃತ್ತಿಯಲ್ಲಿ ನರ್ಸ್ ಎಂದು ತಿಳಿದುಬಂದಿದೆ. ಈ ಘಟನೆ ನಡೆದ ಮೂರು ಗಂಟೆಗಳ ಬಳಿಕ ಬಾಲಕಿಯ ತಾಯಿಗೆ ಮಹಿಳೆಯೊಬ್ಬರು ಕರೆ ಮಾಡಿ ರೂ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಮತ್ತೆ ರಾತ್ರಿ ಕರೆ ಮಾಡಿ ರೂ. 10 ಲಕ್ಷಕ್ಕೆ ಬೇಡಿಕೆಯಿಟ್ಟು ಅಪಹರಣಕಾರರು ಮಗು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆನ್ನಲಾಗಿದೆ.

ಇದನ್ನು ಓದಿ: Mumabi Baby Accident: ತಾಯಿಯ ಹುಟ್ಟುಹಬ್ಬದಂದು 11 ತಿಂಗಳ ಮಗುವಿನ ಸಾವು! ಮಾರ್ಗ ಮಧ್ಯದಲ್ಲೇ ಕಾದು ಕುಳಿತಿದ್ದ ಜವರಾಯ!!!

ಬಿಳಿ ಬಣ್ಣದ ಕಾರೊಂದು ತಮ್ಮನ್ನು ಕಟ್ಟಾಡಿ ಜಂಕ್ಷನ್‌ನಲ್ಲಿ ಅಡ್ಡಗಟ್ಟಿರುವ ಕುರಿತು ಅಪಹರಣಕ್ಕೆ ಒಳಗಾದ ಬಾಲಕಿಯ ಅಣ್ಣ ತಿಳಿಸಿದ್ದಾನೆ.ಇದರ ಬೆನ್ನಲ್ಲೇ, ಕಳೆದೆರಡು ದಿನಗಳಿಂದ ಬಿಳಿ ಸೆಡಾನ್ ಕಾರು ಈ ಪ್ರದೇಶದಲ್ಲಿ ಸಂಚಾರ ನಡೆಸುತ್ತಿದ್ದ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅಪಹರಣದ ಕುರಿತು ಮಾಹಿತಿ ಪಡೆದುಕೊಂಡ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಅತೀ ಶೀಘ್ರದಲ್ಲಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.ಅಪಹರಣಕ್ಕೀಡಾದ ಬಾಲಕಿಯ ಪತ್ತೆಗೆ ಪೊಲೀಸರು ತಂಡ ರಚನೆ ಮಾಡಿದ್ದು, ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: Pension scheme Holders: ಪಿಂಚಣಿದಾರರಿಗೆ ಮುಖ್ಯ ಮಾಹಿತಿ- ನವೆಂಬರ್ 30 ರೊಳಗೆ ಈ ಕೆಲಸ ಮಾಡಿಲ್ಲ ಅಂದ್ರೆ ನಿಂತೋಗುತ್ತೆ ಪೆನ್ಶನ್

You may also like

Leave a Comment