Home » Pavitra Lokesh: ಪವಿತ್ರ ಲೋಕೇಶ್ ಜೊತೆ ಹನಿಮೂನ್ ಹೊರಟ 63 ವರ್ಷದ ನಟ ನರೇಶ್ – ಹೊರಟಿದ್ದಾರ್ರೂ ಎಲ್ಲಿಗೆ ?!

Pavitra Lokesh: ಪವಿತ್ರ ಲೋಕೇಶ್ ಜೊತೆ ಹನಿಮೂನ್ ಹೊರಟ 63 ವರ್ಷದ ನಟ ನರೇಶ್ – ಹೊರಟಿದ್ದಾರ್ರೂ ಎಲ್ಲಿಗೆ ?!

1 comment
Pavitra Lokesh

Pavitra Lokesh: ನಟ ನರೇಶ್(Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh)ಕುರಿತು ಆಗಾಗ ಹೊಸ ಸುದ್ದಿಗಳು ವೈರಲ್ ಆಗಿ ಸಂಚಲನ ಮೂಡಿಸುತ್ತದೆ. ಲಿಪ್ ಲಾಕ್ ಫೋಟೋ, ಸಿನಿಮಾ ಮಾತ್ರವಲ್ಲದೆ ಲಿವಿಂಗ್ ಟುಗೆದರ್(Living Relationship) ಎಂಬೆಲ್ಲ ವಿಚಾರಕ್ಕೆ ಚರ್ಚೆಯಲ್ಲಿದ್ದ ಜೋಡಿ ಈಗ ಹನಿಮೂನ್ (Honeymoon)ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಕಳೆದ ಒಂದು ವರ್ಷದಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಭಾರೀ ಸುದ್ಧಿಯಲ್ಲಿದ್ದಾರೆ. ಇವರಿಬ್ಬರ ಲಿವಿಂಗ್ ರಿಲೇಶನ್ ಶಿಪ್ ಬಗ್ಗೆ ಮಾಧ್ಯಮಗಳು ನಾನಾ ಸುದ್ದಿಗಳನ್ನು ಬಿತ್ತರಿಸಿದ್ದವು. ಇವೆಲ್ಲದಕ್ಕೂ ಟಾಂಗ್ ಕೊಡುವಂತೆ ನರೇಶ್ ‘ಮತ್ತೆ ಮದುವೆ’ (Matte Maduve) ಸಿನಿಮಾ ಮಾಡಿದ್ದು, ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಥಿಯೇಟರ್ ನಲ್ಲಿ ಕೆಲ ಕಡೆ ಉತ್ತಮ ಪ್ರದರ್ಶನ ಕಂಡರೆ, ಮತ್ತೆ ಕೆಲವೆಡೆ ಮಕಾಡೆ ಮಲಗಿದೆ.

ಸದ್ಯ, ಥಾಯ್ಲೆಂಡ್ ನಲ್ಲಿ ಹನಿಮೂನ್ ಮಾಡಿಕೊಳ್ಳುತ್ತಿದ್ದು, ಸಂತಸದ ಕ್ಷಣಗಳನ್ನು ಕಳೆಯುತ್ತಿರುವ ಫೋಟೋವನ್ನು ಪವಿತ್ರಾ ಲೋಕೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.ನಟಿ ಪವಿತ್ರಾ ಲೋಕೇಶ್ (Pavitra Lokesh)ಹಾಗೂ ನರೇಶ್ ಅವರು ಥೈಲ್ಯಾಂಡ್ನಲ್ಲಿ ಮಧುಚಂದ್ರದ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದು, ಈ ಫೊಟೋಸ್ ವೈರಲ್ ಆಗಿದೆ. ನಟಿ ಪವಿತ್ರಾ ಲೋಕೇಶ್ ಅವರೂ ಮಕ್ಕಳೊಂದಿಗೆ ಈಗ ತೆಲಂಗಾಣದಲ್ಲಿಯೇ ಸೆಟಲ್ ಆಗಿದ್ದು, ನರೇಶ್ ಜೊತೆ ಹ್ಯಾಪಿ ಲೈಫ್ ಲೀಡ್ ಮಾಡುತ್ತಿದ್ದಾರೆ. ತಮ್ಮ ಗೆಳತಿ, ಪ್ರೇಯಸಿ ಪವಿತ್ರಾ ಲೋಕೇಶ್ ಜೊತೆ ನರೇಶ್ ಅವರು ಮುದ್ದಾದ ಕಪಲ್ ಫೋಟೋಸ್ ಶೇರ್ ಮಾಡಿದ್ದಾರೆ. ಸದ್ಯ, ಈ ಫೋಟೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

You may also like

Leave a Comment