Home » Cyclone Michaung: ಕರಾವಳಿಗರೇ ಎಚ್ಚರ, ಭಾರೀ ಮಳೆ ಸಾಧ್ಯತೆ! ಎರಡ್ಮೂರು ದಿನ ಭಾರೀ ಮಳೆಯ ಸಂಭವ!!!

Cyclone Michaung: ಕರಾವಳಿಗರೇ ಎಚ್ಚರ, ಭಾರೀ ಮಳೆ ಸಾಧ್ಯತೆ! ಎರಡ್ಮೂರು ದಿನ ಭಾರೀ ಮಳೆಯ ಸಂಭವ!!!

1 comment

Cyclone Michaung: ಉತ್ತರ ತಮಿಳುನಾಡು ಮತ್ತು ನೆರೆಯ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಡಿಸಂಬರ್ 04 ರಂದು ‘ಮಿಚಾಂಗ್’ ಚಂಡಮಾರುತ ಅಪ್ಪಳಿಸಲಿದೆ. ಡಿಸೆಂಬರ್ 04 ರಂದು ‘ಮಿಚಾಂಗ್'(Cyclone Michaung) ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ಡಿ. 03 ಮತ್ತು 04 ರಂದು ತಮಿಳುನಾಡು, ಕರಾವಳಿ ಮತ್ತು ಆಂಧ್ರಪ್ರದೇಶದ ಒಳಭಾಗಗಳಲ್ಲಿ ‘ಆರೆಂಜ್’ ಅಲರ್ಟ್ ಘೋಷಿಸಲಾಗಿದೆ.

ಚಂಡಮಾರುತ ಸೋಮವಾರ ಮುಂಜಾನೆ ಪೂರ್ವ ಕರಾವಳಿಯನ್ನು ಸಮೀಪಿಸುವ ಸಾಧ್ಯತೆಯಿದೆ. ಚಂಡಮಾರುತವು ಕರಾವಳಿಗೆ ಸಮೀಪಿಸುವ ಹಿನ್ನೆಲೆ ಐಎಂಡಿ ಭಾನುವಾರ ಮತ್ತು ಸೋಮವಾರದಂದು ತಮಿಳುನಾಡು, ಕರಾವಳಿ ಮತ್ತು ಆಂಧ್ರಪ್ರದೇಶದ ಒಳಭಾಗದ ಮೇಲೆ ‘ಆರೆಂಜ್’ ಅಲರ್ಟ್ ನೀಡಿದೆ. ಮುಂದಿನ ನಾಲ್ಕು ದಿನಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವರ್ಧಿತ ಮಳೆ, ಬಿರುಸಿನ ಗಾಳಿ ಎದುರಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಡಿಸೆಂಬರ್ 2 ರವರೆಗೆ ಆಗ್ನೇಯ ಬಂಗಾಳ ಕೊಲ್ಲಿಗೆ, ಡಿಸೆಂಬರ್ 4 ರವರೆಗೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮತ್ತು ಡಿಸೆಂಬರ್ 5 ರವರೆಗೆ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಐಎಂಡಿ ಎಚ್ಚರಿಕೆ ನೀಡಿದೆ. ಡಿಸೆಂಬರ್ 3 ರಂದು ‘ಮಿಯಾಚಾಂಗ್’ ಚಂಡಮಾರುತವಾಗಿ ತೀವ್ರಗೊಳ್ಳುವ ಬಗ್ಗೆ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಡಿಸೆಂಬರ್ 1 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರಿ ಮಳೆಯಾಗಲಿದೆ. ಡಿಸೆಂಬರ್ 2 ರಿಂದ ಡಿಸೆಂಬರ್ 4 ರವರೆಗೆ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರದೇಶಗಳು ವರುಣನ ಆರ್ಭಟ ಜೋರಾಗಿರಲಿದೆ. ಅದೇ ರೀತಿ ,ಡಿಸೆಂಬರ್ 3 ಮತ್ತು 4 ರಂದು ಆಂಧ್ರಪ್ರದೇಶದ ಕರಾವಳಿ ಬೆಲ್ಟ್‌ಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯ ಮುನ್ಸೂಚನೆ ಇದೆ ಎಂದು ಐಎಂಡಿ ತಿಳಿಸಿದೆ.

ಇದನ್ನೂ ಓದಿ: Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸದವರಿಗೆ ಗುಡ್ ನ್ಯೂಸ್- ಮತ್ತೆ ಒಂದು ದಿನ ಕಾಲಾವಕಾಶ ಕೊಟ್ಟ ಸರ್ಕಾರ, ಯಾವಾಗ ?

You may also like

Leave a Comment