Home » Kidnap Case: ಮದುವೆಗೆ ಒಪ್ಪದ ಶಾಲಾ ಶಿಕ್ಷಕಿ ಕಿಡ್ನ್ಯಾಪ್‌ ಪ್ರಕರಣ; ನೆಲ್ಯಾಡಿ ಬಳಿ ಅಪಹರಣಕಾರರ ವಶ!!

Kidnap Case: ಮದುವೆಗೆ ಒಪ್ಪದ ಶಾಲಾ ಶಿಕ್ಷಕಿ ಕಿಡ್ನ್ಯಾಪ್‌ ಪ್ರಕರಣ; ನೆಲ್ಯಾಡಿ ಬಳಿ ಅಪಹರಣಕಾರರ ವಶ!!

1 comment
School teacher Kidnap Case

School teacher Kidnap Case: ಶಾಲಾ ಶಿಕ್ಷಕಿಯೋರ್ವರನ್ನು ಕಿಡ್ನ್ಯಾಪ್‌ (Kidnap Case) ಮಾಡಿದ ಪ್ರಕರಣದ ಕುರಿತಂತೆ ಬಿಗ್‌ ಅಪ್ಡೇಟ್‌ ಬಂದಿದೆ. ಹಾಸನದಲ್ಲಿ ಶಾಲಾ ಶಿಕ್ಷಕಿಯ ಅಪಹರಣ( School teacher Kidnap Case)ನಿನ್ನೆ ನಡೆದಿದ್ದು, ಇದೀಗ ಕಡಬ ತಾಲೂಕಿನ ನೆಲ್ಯಾಡಿ ಬಳಿ ಅಪಹರಣಕಾರರನ್ನು ಪತ್ತೆ ಹಚ್ಚಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ವಿವಾಹ ಮಡಲು ಒಪ್ಪದ್ದಕ್ಕೆ ಹಾಸನ ನಗರದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲೆ ಶಿಕ್ಷಕಿಯನ್ನು ರಾಮು ಎಂಬಾತ ಅಪಹರಣ ಮಾಡಿದ್ದನು. ನೆಲ್ಯಾಡಿ ಬಳಿ ಕಿಡ್ನ್ಯಾಪ್‌ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿದ ಹಾಸನ ಪೊಲೀಸರು ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ಶಾಲಾ ಶಿಕ್ಷಕಿಯನ್ನು ಹಾಸನಕ್ಕೆ ಕರೆದೊಯ್ದಿದ್ದಾರೆ.

ಅತ್ತೆ ಮಗಳನ್ನು ಮದುವೆಯಾಗ ಬೇಕೆಂದಿದ್ದ ರಾಮು, ಮದುವೆಗೆ ಒಪ್ಪದಿದ್ದಕ್ಕೆ ಗೆಳೆಯರ ಜೊತೆ ಸೇರಿ ಇನ್ನೋವಾ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿದ್ದನು.

ಈ ಕುರಿತು ಹಾಸನ ನಗರ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ತೆರಿಗೆ ಕುರಿತು ಬಿಗ್‌ ಅಪ್ಡೇಟ್‌!!!

You may also like

Leave a Comment