Home » Bank Robbery: ಬೆಳ್ಳಂಬೆಳಗ್ಗೆ ಬ್ಯಾಂಕ್ ದರೋಡೆ: ಹತ್ತೆ ನಿಮಿಷಕ್ಕೆ ಕೋಟಿಗಟ್ಟಲೆ ನಗ ಲೂಟಿ!

Bank Robbery: ಬೆಳ್ಳಂಬೆಳಗ್ಗೆ ಬ್ಯಾಂಕ್ ದರೋಡೆ: ಹತ್ತೆ ನಿಮಿಷಕ್ಕೆ ಕೋಟಿಗಟ್ಟಲೆ ನಗ ಲೂಟಿ!

1 comment
Bank Robbery

Bank Robbery: ಮಣಿಪುರದ ಉಖ್ರುಲ್ ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ  ನುಗ್ಗಿದ ಮುಸುಕುಧಾರಿ ಬಂದೂಕುಧಾರಿ ಕಿಡಿಗೇಡಿ ಹತ್ತೇ ನಿಮಿಷದಲ್ಲಿ 18 ಕೋಟಿ ರೂ ನಗದು ದರೋಡೆ (Bank Robbery)ಮಾಡಿದ ಪರಾರಿಯಾದ ಘಟನೆ ನಡೆದಿದೆ.

ಬ್ಯಾಂಕ್ ನೌಕರರು ದಿನದ ವಹಿವಾಟು ಮುಗಿಸಿ ನಗದು ಎಣಿಸುತ್ತಿದ್ದ ಸಂದರ್ಭ 8 ರಿಂದ 10 ಮಂದಿಯ ಶಸ್ತ್ರಸಜ್ಜಿತ ತಂಡ ನುಗ್ಗಿ 18.85 ಕೋಟಿ ರೂ. ದರೋಡೆ ಮಾಡಿದ ಘಟನೆ ಪಂಜಾಬ್ ನಲ್ಲಿ ವರದಿಯಾಗಿದೆ.ಪಂಜಾಬ್ ನ ಉಖ್ರುಲ್ ಪಟ್ಟಣದ ಪ್ರಮುಖ ಬಜಾರ್ಗಳಲ್ಲಿ ಒಂದಾದ ವ್ಯೂಲ್ಯಾಂಡ್-I ನಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗುರುವಾರ ಸಂಜೆ 5.40ರ ಸುಮಾರಿಗೆ ಮುಸುಕುಧಾರಿ ಬಂದೂಕುಧಾರಿಗಳು ಬ್ಯಾಂಕ್ ಮ್ಯಾನೇಜರ್ ಅನ್ನು ಒತ್ತೆಯಾಗಿರಿಸಿ 18.85 ಕೋಟಿ ರೂ. ಲೂಟಿ ಮಾಡಿದ್ದಾರೆ  ಎನ್ನಲಾಗಿದೆ.

ಮುಸುಕುಧಾರಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದ್ದು, ಬ್ಯಾಂಕ್ ಭದ್ರತಾ ಸಿಬ್ಬಂದಿ ಹಾಗೂ ಪಿಎನ್ಬಿ ಶಾಖೆಯ ಸಿಬ್ಬಂದಿಯನ್ನು ಬೆದರಿಸಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕೇವಲ ಹತ್ತೇ ನಿಮಿಷದಲ್ಲಿ ಹಣ ಲೂಟಿ ಮಾಡಿದ ಕಿಡಿಗೇಡಿಗಳು ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ಬಂದೂಕಿನಿಂದ ಬೆದರಿಸಿ ಹಗ್ಗಗಳಿಂದ ಕಟ್ಟಿ, ನಗದು ಸಹಿತ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಇಸ್ರೇಲ್ ಮಹಿಳೆ ಕೇರಳದಲ್ಲಿ ಸಾವು – ಮಲೆಯಾಳಿ ಗಂಡ ಮಾಡಿದ್ದೇನು ?!

You may also like

Leave a Comment