Home » Anju: ಪ್ರಿಯಕರನಿಗಾಗಿ ಗಂಡ, ಮಕ್ಕಳ ಬಿಟ್ಟು ಹೋದ ಅಂಜು, ಪಾಕ್‌ನಿಂದ ವಾಪಸ್‌; ಅಮ್ಮ ನಮಗೆ ಬೇಡ ಎಂದ ಮಕ್ಕಳು, ಎಲ್ಲಾ ಇದ್ದೂ ಅನಾಥೆ ಈಗ ಅಂಜು!

Anju: ಪ್ರಿಯಕರನಿಗಾಗಿ ಗಂಡ, ಮಕ್ಕಳ ಬಿಟ್ಟು ಹೋದ ಅಂಜು, ಪಾಕ್‌ನಿಂದ ವಾಪಸ್‌; ಅಮ್ಮ ನಮಗೆ ಬೇಡ ಎಂದ ಮಕ್ಕಳು, ಎಲ್ಲಾ ಇದ್ದೂ ಅನಾಥೆ ಈಗ ಅಂಜು!

168 comments
Anju

Anju: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳಯನಿಗಾಗಿ ತನ್ನ ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ತನ್ನ ಪ್ರಿಯತಮ ನಸುಲ್ಲಾನನ್ನು ಮದುವೆಯಾಗಿದ್ದ ಭಾರತದ ಅಂಜು ಇದೀಗ ಭಾರತಕ್ಕೆ ಬಂದಿದ್ದಾರೆ. ಆದರೆ ಇದೀಗ ಅವರು ಭಾರತಕ್ಕೆ ಬಂದರೂ, ಗಂಡ, ಮಕ್ಕಳು, ಮಾವ ಇದ್ದರೂ ಅನಾಥರಾಗಿದ್ದಾರೆ. ಏಕೆಂದರೆ ” ತಾಯಿಯನ್ನು ನಾವು ಭೇಟಿಯಾಗುವುದಿಲ್ಲ” ಎಂದು ಮಕ್ಕಳು ಹೇಳಿದ್ದಾರೆ.

ಅಂಜು ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿದ್ದಾರೆ. ಆದರೆ ಅಂಜು ಅವರನ್ನು ಭೇಟಿಯಾಗಲು ಆಕೆಯ ಗಂಡ, ಮಾವ, ಮಕ್ಕಳು ಇಷ್ಟಪಡುತ್ತಿಲ್ಲ. ಅಂಜು ಅವರ ತಂದೆ ಕೂಡಾ ಮಗಳನ್ನು ಸ್ವೀಕರಿಸಲು ಇಷ್ಟ ಪಡುತ್ತಿಲ್ಲ. ಇದರಿಂದ ಅಂಜು ಒಬ್ಬಂಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ. ಆದರೆ ಅಂಜು ಭಾರತಕ್ಕೆ ಬಂದಿದ್ದರೂ ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ.

ಪ್ರೇಮಿಗಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಅಂಜು( Anju) ಅವರು ಅಲ್ಲಿ ತನ್ನ ಪ್ರಿಯಕರ ನಸ್ರುಲ್ಲಾನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರವಾಗಿದ್ದರು. ಅನಂತರ ಮದುವೆಯಾಗಿದೆ. ಇದೀಗ ಅವರ ಹೆಸರು ಫಾತಿಮಾ ಎಂದು ಆಗಿದೆ. ಇವರಿಬ್ಬರ ಪ್ರಿ ವೆಡ್ಡಿಂಗ್‌ ಶೂಟ್‌ ಕೂಡಾ ಭಾರೀ ವೈರಲ್‌ ಆಗಿತ್ತು. ಇದಾದ ನಂತರ ಭಾರೀ ಬೆಳವಣಿಗೆ ಆಗಿದ್ದು, ಅನಂತರ ಅಂಜು ಅವರ ತಂದೆ ಆಕೆ ತನ್ನ ಪತಿ, ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾಳೆ, ಆಕೆ ನಮ್ಮ ಪಾಲಿಗೆ ಸತ್ತ ಹಾಗೆ ಎಂದು ತಂದೆ ಮಾಧ್ಯಮಗಳಿಗೆ ಅವತ್ತೇ ತಿಳಿಸಿದ್ದರು.

ಇದನ್ನೂ ಓದಿ: Kidnap Case: ಮದುವೆಗೆ ಒಪ್ಪದ ಶಾಲಾ ಶಿಕ್ಷಕಿ ಕಿಡ್ನ್ಯಾಪ್‌ ಪ್ರಕರಣ; ನೆಲ್ಯಾಡಿ ಬಳಿ ಅಪಹರಣಕಾರರ ವಶ!!

You may also like

Leave a Comment