Home » Bollywood Actress: 11 ಹುಡುಗರ ಜೊತೆ ಡೇಟಿಂಗ್, 24ನೇ ವಯಸ್ಸಿಗೆ ತಾಯಿ !! ಇಲ್ಲಿದೆ ನೋಡಿ ಖ್ಯಾತ ನಟಿಯ ವಿಚಿತ್ರ ಬದುಕಿನ ಕಥೆ

Bollywood Actress: 11 ಹುಡುಗರ ಜೊತೆ ಡೇಟಿಂಗ್, 24ನೇ ವಯಸ್ಸಿಗೆ ತಾಯಿ !! ಇಲ್ಲಿದೆ ನೋಡಿ ಖ್ಯಾತ ನಟಿಯ ವಿಚಿತ್ರ ಬದುಕಿನ ಕಥೆ

1 comment
Bollywood Actress

Bollywood Actress: ಬಾಲಿವುಡ್ನ ಖ್ಯಾತ ನಟಿ (Bollywood Actress)ಸುಶ್ಮಿತಾ ಸೇನ್ (Sushmita Sen) ನಟನೆಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳಿಂದ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಸುಶ್ಮಿತಾ ಸೇನ್ ಪ್ರಸಿದ್ಧ ವ್ಯಕ್ತಿಗಳೊಂದಿಗೆ ರಿಲೇಶನ್ಶಿಪ್ ಹೊಂದಿದ್ದರು ಎಂಬ ವಿಚಾರ ಕೂಡ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದಾಗ್ಯೂ , ಸುಶ್ಮಿತಾ ಸೇನ್ ಅವರು ಇಲ್ಲಿಯವರೆಗೆ ಯಾರನ್ನು ಕೂಡ(Sushmita Sen Marriage)ಮದುವೆಯಾಗಿಲ್ಲ. 1994 ರಲ್ಲಿ ಭುವನ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಭಾರತಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸುಶ್ಮಿತಾ ಸೇನ್ 1996 ರಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು.

ಈ ನಡುವೆ, ಪ್ರಸಿದ್ಧ ವ್ಯಕ್ತಿಗಳ ಜೊತೆಗೆ ಸುಶ್ಮಿತಾ ಸೇನ್ ಅವರ ಹೆಸರು ಕೇಳಿ ಬಂದಿದ್ದು ಇದೆ. ಲಲಿತ್ ಮೋದಿ, ಸಂಜಯ್ ನಾರಂಗ್, ರಣದೀಪ್ ಹೂಡಾ, ಇಮ್ತಿಯಾಜ್ ಖತ್ರಿ, ವಾಸಿಂ ಅಕ್ರಮ್ ಮತ್ತು ಮುದಸ್ಸರ್ ಅಜೀಜ್ ಸೇರಿದಂತೆ 11 ಜನರೊಂದಿಗೆ ಸುಶ್ಮಿತಾ ಡೇಟಿಂಗ್ ನಡೆಸಿರುವ ಸುದ್ದಿ ಹರಿದಾಡಿ ಸಂಚಲನ ಮೂಡಿಸಿತ್ತು. ಹೀಗೆ ಅನೇಕ ಮಂದಿಯ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾದ ಸುಶ್ಮಿತಾ ಸೇನ್ 15 ವರ್ಷಗಳ ಕಿರಿಯ ಕಾಶ್ಮೀರಿ ಮಾಡೆಲ್ ರೋಹ್ಮನ್ ಶಾಲ್ ಜೊತೆಗೆ ಕೂಡ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದೀಗ, ರೋಹ್ಮನ್ ಜೊತೆಗಿನ ಸಂಬಂಧ ಕೂಡ ಮುರಿದು ಬಿದ್ದಿದೆಯಂತೆ. ಇವೆಲ್ಲ ಸುದ್ದಿಗಳ ನಡುವೆ, ಸುಷ್ಮಿತಾ ಸೇನ್ ಹೆಣ್ಣು ಮಗುವನ್ನು ರೆನೀಯನ್ನು ದತ್ತು ಪಡೆದ ಸುಶ್ಮಿತಾ ಸಿಂಗಲ್ ಪೇರೆಂಟ್ ಆದರು. ಇದಾದ ಬಳಿಕ, ಮತ್ತೊಂದು ಹೆಣ್ಣು ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ.

ಇದನ್ನು ಓದಿ: ಇನ್ನು ಎಸೆಯಬೇಡಿ ಕಿತ್ತಲೆ ಸಿಪ್ಪೆ – ಹೀಗೆ ಬಳಸಿದ್ರೆ ನಿಮ್ಮ ಸೌಂದರ್ಯ ಹೆಚ್ಚಿಸುವಲ್ಲಿ ಇದರದ್ದೇ ಪ್ರಮುಖ ಪಾತ್ರ !!

You may also like

Leave a Comment