Mangalore Bison Found :ಮಂಗಳೂರು (Mangalore )ನಗರದಲ್ಲಿ ಮತ್ತೆ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಸ್ಥಳೀಯರಿಗೆ ಆತಂಕ ಮೂಡಿಸಿದೆ. ಕರಾವಳಿ ಲೇನ್ ಕದ್ರಿ ಕೈಬಟ್ಟಲು ಸುತ್ತಮುತ್ತಲಿನ ಪರಿಸರದಲ್ಲಿ ಭಾನುವಾರ ರಾತ್ರಿ ವೇಳೆಯಲ್ಲಿ ಸೋಮವಾರ ಬೆಳ್ಳಗಿನ ಹೊತ್ತಲ್ಲಿ ಕಾಡುಕೋಣ(Mangalore Bison Found) ಕಂಡುಬಂದಿದೆ ಎನ್ನಲಾಗಿದೆ
ಮಂಗಳೂರು ನಗರದಲ್ಲಿ ಒಂಟಿ ಕೋಣ ಬಂದಿದೆ ಎನ್ನಲಾಗಿದ್ದು, ಕೆಲವೊಂದು ಮನೆಯ ಕಬ್ಬಿಣದ ಮುಳ್ಳಿನ ಬೇಲಿ ಹಾರಿ, ಬೇಲಿ ಮುರಿದ ಕುರುಹು ಪತ್ತೆಯಾಗಿದೆ. ಈ ಕೋಣ ಓಡಾಟ ನಡೆಸಿರುವ ದೃಶ್ಯಗಳು ಸಿಸಿ ಕ್ಯಾಮರದಲ್ಲಿ (Cc camera)ಸೆರೆಯಾಗಿದೆ ಎನ್ನಲಾಗಿದೆ. ಸೋಮವಾರ ಹಗಲಿನಲ್ಲಿ ಈ ಕಾಡುಕೋಣ ವಿಶ್ರಾಂತಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಅರಣ್ಯ ಅಧಿಕಾರಿಗಳು ವಿಚಾರ ತಿಳಿದು ಭಾನುವಾರ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ವೋಟರ್ ID ಯನ್ನು ಆನ್ಲೈನ್ ಅಲ್ಲೇ ಹೀಗೆ ಸುಲಭವಾಗಿ ಪಡೆಯಿರಿ !!
